ಮಡಿಕೇರಿ, ಜ. ೩೧: ಕೊಡಗು ಜಿಲ್ಲೆಯಲ್ಲಿ ಸೋಮವಾರ ೪೦೨ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಪಾಸಿಟಿವಿಟ್ ದರ ೨೪.೫% ಇದೆ.

೪೦೨ ಒಟ್ಟು ಕೋವಿಡ್ ಪ್ರಕರಣಗಳ ಪೈಕಿ ೩೮೨ ಆರ್.ಟಿ.ಪಿ.ಸಿ.ಆರ್. ಹಾಗೂ ೨೦ ರ‍್ಯಾಟ್ ಪರೀಕ್ಷೆ ಮೂಲಕ ದೃಢಪಟ್ಟಿದೆ. ಮಡಿಕೇರಿ ತಾಲೂಕಿನಲ್ಲಿ ೮೪, ಸೋಮವಾರಪೇಟೆ ತಾಲೂಕಿನಲ್ಲಿ ೫೬, ವೀರಾಜಪೇಟೆ ತಾಲೂಕಿನಲ್ಲಿ ೯೭ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯ ೧೭ ಪ್ರದೇಶಗಳನ್ನು ಕಂಟೈನ್ಮೆAಟ್ ಝೋನ್‌ಗಳಾಗಿ ಪರಿವರ್ತಿಸಲಾಗಿದೆ. ಅದಲ್ಲದೆ ಹೊಸದಾಗಿ ೨೧ ಸಾರ್ವಜನಿಕ ಪ್ರದೇಶಗಳನ್ನು ಕಂಟೈನ್ಮೆAಟ್ ಝೋನ್ ಮಾಡಲಾಗಿದೆ.

ಜಿಲ್ಲೆಯಲ್ಲಿ ಒಟ್ಟು ೪೪,೨೭೯ ಕೋವಿಡ್ ಪಾಸಿಟಿವ್ ಪ್ರಕರಣಗಳಿದ್ದು, ಒಟ್ಟು ೩೯,೬೪೫ ಮಂದಿ ಗುಣಮುಖರಾಗಿದ್ದಾರೆ. ೪೧೯೪ ಸಕ್ರಿಯ ಕೇಸ್‌ಗಳಿವೆ. ಒಟ್ಟು ೨೬೮ ಕಂಟೈನ್ಮೆAಟ್ ಝೋನ್, ೪೪೨ ಸಾವಿನ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.