ಆಲೂರು-ಸಿದ್ದಾಪುರ: ಗಣರಾಜ್ಯೋತ್ಸವವನ್ನು ಸಮೀಪದ ಗೋಣಿಮರೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿನೂತನ ಹಾಗೂ ರಾಜ್ಯಕ್ಕೆ ಮಾದರಿಯಾದ ರೀತಿಯಲ್ಲಿ ಆಚರಿಸಲಾಯಿತು. ಗೋಣಿಮರೂರು ಸ.ಹಿ.ಪ್ರಾ. ಶಾಲೆಯ ಶಾಲಾಭಿವೃದ್ಧಿ ಸಮಿತಿ ಮತ್ತು ಶಾಲಾ ಶಿಕ್ಷಕರ ವರ್ಗದವರು ‘ಕೊರೊನಾ ಮುಕ್ತ ಗ್ರಾಮ’ ಶೀರ್ಷಿಕೆಯಡಿಯಲ್ಲಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಇದುವರೆಗೂ ಕೊರೊನಾ ನಿರೋಧಕ ಲಸಿಕೆ ಹಾಕಿಸಿಕೊಳ್ಳದ ವ್ಯಕ್ತಿಗಳನ್ನು ಪತ್ತೆ ಮಾಡಿ ಅವರನ್ನು ಮನವೊಲಿಸಿ ಎಸ್‌ಡಿಎಂಸಿ ಸಮಿತಿ ಸದಸ್ಯರು ಮತ್ತು ಶಿಕ್ಷಕರು ತಮ್ಮ ಸ್ವಂತ ಖರ್ಚಿನಿಂದ ಗೌರವಧನ (ಫಲಾನುಭವಿಗೆ ತಲಾ ೫೦೦ ರೂ) ನೀಡಿ ಲಸಿಕೆ ಹಾಕುವ ಅಭಿಯಾನ ಕಾರ್ಯಕ್ರಮ ನಡೆಸಿದರು.

ಶಾಲಾ ಆವರಣದಲ್ಲಿ ನಡೆದ ಗಣರಾಜ್ಯೋತ್ಸವ ಧ್ವಜರೋಹಣವನ್ನು ಗ್ರಾಮದ ಮುಖಂಡ ಸಿದ್ದಣ್ಣ ನೆರವೇರಿಸಿದರು. ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಗೋಣಮರೂರು ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ವೀರಪ್ಪ ಮಡಿವಾಳ- ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಭಾರತÀ ಸಂವಿಧಾನ ಅಧಿಕೃತಗೊಂಡ ದಿನ ಮತ್ತು ಪ್ರಾಂತ್ಯವಾರುಗೊAಡ ದಿನವನ್ನು ಗಣರಾಜ್ಯೋತ್ಸವ ದಿನವನ್ನಾಗಿ ಆಚರಣೆ ಮಾಡುತ್ತಿದ್ದೇವೆ ಎಂದರು.

ಶಾಲಾಭಿವೃದ್ದಿ ಸಮನ್ವಯ ವೇದಿಕೆ ರಾಜ್ಯಾಧ್ಯಕ್ಷ ಸಿದ್ದಲಿಂಗಪ್ಪ ಮಾತನಾಡಿ-ವಿದ್ಯಾರ್ಥಿಗಳು ವಿದ್ಯಾರ್ಥಿ ದಿಸೆಯಲ್ಲೆ ಸ್ವಾರ್ಥ ರಹಿತ ಸೇವಾ ಮನೋಭಾವನೆಯನ್ನು ಬೆಳೆಸಿಕೊಂಡರೆ ಮಾತ್ರ ಸಮಾಜ ಅಭಿವೃದ್ಧಿಗೊಳ್ಳುತ್ತದೆ ದೇಶಾಭಿಮಾನ, ಶಿಸ್ತು, ಗುರು-ಹಿರಿಯರಿಗೆ ಗೌರವ ಕೊಡುವ ಸ್ವಭಾವವನ್ನು ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.

ಶಾಲಾ ವತಿಯಿಂದ ಹಮ್ಮಿಕೊಂಡ ಗಣರಾಜ್ಯೋತ್ಸವ ಮತ್ತು ಲಸಿಕಾ ಅಭಿಯಾನ ಕಾರ್ಯಕ್ರಮದ ಉದ್ದೇಶದ ಕುರಿತು ಶಾಲಾ ಮುಖ್ಯ ಶಿಕ್ಷಕಿ ಸುನೀತ ಮಾತನಾಡಿದರು. ಗ್ರಾಮದ ಮುಖಂಡ ಮೋಹನ್ ಅಧ್ಯಕ್ಷತೆವಹಿಸಿದರು. ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಗೌರಮ್ಮ, ಗೋಣಿಮರೂರು ಕ್ಲಸ್ಟರ್ ಸಿ.ಆರ್.ಪಿ. ಚಿಣ್ಣಪ್ಪ, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸುರೇಂದ್ರ, ಎಸ್‌ಡಿಎಂಸಿ ಅಧ್ಯಕ್ಷ ಅನಿಲ್‌ಕುಮಾರ್, ಪ್ರಮುಖರಾದ ರವಿ, ಮಂಜುನಾಥ್, ಶಿಕ್ಷಕರಾದ ಸಂತೋಷ್, ಹೆಚ್.ಎಸ್. ರಾಜಪ್ಪ, ಎ.ಹೆಚ್. ಸುಜಾತ ಗ್ರಾಮಸ್ಥರು ಹಾಜರಿದ್ದರು. ವಿದ್ಯಾರ್ಥಿಗಳಿಂದ ಭಾಷಣ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಚೆಯ್ಯಂಡಾಣೆ: ಚೆಯ್ಯಂಡಾಣೆಯ ನರಿಯಂದಡ ಕೇಂದ್ರ ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು.

ಧ್ವಜಾರೋಹಣವನ್ನು ಮುಖ್ಯ ಶಿಕ್ಷಕ ಮನೋಹರ್ ನಾಯಕ್ ನೆರವೇರಿಸಿದರು. ಈ ಸಂದರ್ಭ ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಹಾಜರಿದ್ದರು.ಚೆಯ್ಯಂಡಾಣೆ: ನಾಪೋಕ್ಲು ಸಮೀಪದ ಹೋದವಾಡದಲ್ಲಿರುವ ರಾಫೆಲ್ಸ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ಧ್ವಜಾರೋಹಣ ನಿರ್ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ತನ್ವೀರ್, ದಿನದ ಮಹತ್ವವನ್ನು ವಿವರಿಸಿದರು. ನಮ್ಮ ದೇಶವನ್ನು ಹೆತ್ತ ತಾಯಿಯಂತೆ ಪ್ರೀತಿಸಿ ಗೌರವಿಸಬೇಕೆಂದರು. ಬ್ರಿಟಿಷರ ಗುಲಾಮರಂತಿದ್ದ ನಾವು ಹಲವು ಮಹನೀಯರ ನಿಸ್ವಾರ್ಥ ಸೇವೆಯಿಂದಾಗಿ ಸ್ವತಂತ್ರವಾಗಿ ಭಾರತದಲ್ಲಿ ಜೀವಿಸುವಂತಾಗಿದ್ದು, ಎಲ್ಲರಿಗೂ ಸಮಾನವಾದಂತಹ ಹಕ್ಕು ಹಾಗೂ ಕರ್ತವ್ಯ ಸಿಗಲು ಕಾರಣರಾದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

ಉಪನ್ಯಾಸಕ ಹುಸೈನ್ ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆಯನ್ನು ಭೋದಿಸಿದರು. ನಂತರ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.ಮಡಿಕೇರಿ: ಕೊಡಗು ಪರಿವರ್ತನಾ ವೇದಿಕೆ ವತಿಯಿಂದ "ನಾವು ಭಾರತೀಯರು ಭಾರತೀಯತೆಯೇ ನಮ್ಮ ಉಸಿರು" ಎಂಬ ಘೋಷಣೆಯೊಂದಿಗೆ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ಜೋಡುಪಾಲದ ಖಾಸಗಿ ಎಸ್ಟೇಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆಯ ಪ್ರಮುಖರು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಪ್ರಮುಖರಾದ ಹೆಚ್.ಟಿ. ಶ್ಯಾಮ್, ಶಾಲಾ-ಕಾಲೇಜುಗಳಲ್ಲಿ ಪ್ರತಿದಿನ ಬೆಳಿಗ್ಗೆ ವಿದ್ಯಾರ್ಥಿಗಳಿಗೆ ಸಂವಿಧಾನದ ಆಶಯಗಳನ್ನು ತಿಳಿ ಹೇಳುವಂತ್ತಾಗಬೇಕು ಎಂದರು. ಉಪ ಸಂಯೋಜಕ ಭರತ್ ಕುಮಾರ್ ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಡೆದಾಡುವ ಜ್ಞಾನಭಂಡಾರ. ಅವರು ಸುಮಾರು ಐವತ್ತು ಸಾವಿರದಷ್ಟು ಪುಸ್ತಕಗಳನ್ನು ಓದಿದ ಮಹಾನ್ ಮೇಧಾವಿ. ಅಂಬೇಡ್ಕರ್ ಆದರ್ಶ ಇಂದಿಗೂ ಪ್ರಸ್ತುತ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ವೇದಿಕೆಯ ಸಂಯೋಜಕ ಕೆ.ಎಂ. ಕುಂಞ ಅಬ್ದುಲ್ಲ, ಒಂದೇ ಪಾರ್ಲಿಮೆಂಟ್, ಒಂದೇ ಸುಪ್ರೀಂಕೋರ್ಟ್, ಒಂದೇ ರಾಷ್ಟçಧ್ವಜ, ಒಂದೇ ರಾಷ್ಟç ಗೀತೆಯ ಮೂಲಕ ದೇಶದ ಪ್ರತಿಯೊಬ್ಬ ಪ್ರಜೆಯನ್ನು ಒಗ್ಗೂಡಿಸಿ ಅತ್ಯಂತ ಸಮಾನತೆಯಿಂದ ಬಾಳುವಂತೆ ಮಾಡಿದ್ದು ನಮ್ಮ ಸಂವಿಧಾನ ಎಂದು ತಿಳಿಸಿದರು. ವೇದಿಕೆಯ ಪ್ರಧಾನ ಕಾರ್ಯದರ್ಶಿ ಗೌತಮ್ ಶಿವಪ್ಪ ಸಂವಿಧಾನದ ಪೀಠಿಕೆಯನ್ನು ಓದಿದರು ಮತ್ತು ಸಂವಿಧಾನದ ಆಶಯಗಳಂತೆ ನಡೆದುಕೊಳ್ಳುವುದಾಗಿ ಪ್ರತಿಜ್ಞಾ ವಿಧಿ ಬೋಧಿಸಿದರು.

ಸಭೆಯಲ್ಲಿ ಪರಿವರ್ತನಾ ವೇದಿಕೆಯ ಉಪ ಸಂಯೋಜಕ ಲಿಂಗರಾಜ್, ಪದಾಧಿಕಾರಿಗಳಾದ ರಫೀಕ್ ಖಾನ್, ಪ್ರೇಮ್ ಕುಮಾರ್, ಪಿ.ಟಿ. ಅಂತೋಣಿ, ಅಶ್ರಫ್ ಎಮ್ಮೆಮಾಡು, ಎಲ್‌ಐಸಿಯ ನಿವೃತ್ತ ನೌಕರ ಹೆಚ್.ಟಿ. ಚಾಮ, ಪ್ರಮುಖರಾದ ಶಿವಕುಮಾರ್ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.