ಕೂಡಿಗೆ, ಜ. ೩೧: ಶಕ್ತಿ ದಿನಪತ್ರಿಕೆಯಲ್ಲಿ ಜ. ೩೧ರಂದು ಕುಡುಕರ ಅಡ್ಡೆಯಾಗಿರುವ ಆರೋಗ್ಯ ಕೇಂದ್ರ ಎಂಬ ಶೀರ್ಷಿಕೆಯಡಿ ಪ್ರಕಟಗೊಂಡ ವರದಿ ಗಮನಿಸಿಗ್ರಾಮ ಪಂಚಾಯಿತಿ ಅಧ್ಯಕೆÀ್ಷ ಮತ್ತು ಅಭಿವೃದ್ಧಿ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಕೂಡುಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಇಂದಿರಾ ರಮೇಶ್, ಅಭಿವೃದ್ಧಿ ಅಧಿಕಾರಿ ಸಂತೋಷ್ ಪರಿಶೀಲನೆ ನಡೆಸಿ ಕಟ್ಟಡವನ್ನು ಶುಚಿತ್ವಪಡಿಸುವುದಾಗಿ ತಿಳಿಸಿದರು.

ಸಾರ್ವಜನಿಕರು ಹೊರಗಡೆಯಿಂದ ಮದ್ಯವನ್ನು ತಂದು ಸೇವಿಸಿ ಆರೋಗ್ಯ ಕೇಂದ್ರದ ಪರಿಸರವನ್ನು ಹಾಳುಮಾಡುತ್ತಿರುವುದರಿಂದ ಗ್ರಾಮ ಪಂಚಾಯಿತಿ ವತಿಯಿಂದ ಶುಚಿತ್ವ, ಪೊಲೀಸ್ ಇಲಾಖೆಗೂ ದೂರು ನೀಡಲಾಗುವುದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್ ತಿಳಿಸಿದ್ದಾರೆ.