ಚೆಟ್ಟಳ್ಳಿ, ಜ. ೩೧: ಮಡಿಕೇರಿ ನಗರದಲ್ಲಿ ಕೊಡಗು ಜಿಲ್ಲಾ ಹಿಂದೂ ಮಲೆಯಾಳಿ ಸಮಾಜದ ನೂತನ ಜಿಲ್ಲಾ ಕಚೇರಿಯನ್ನು ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ವಿ.ಎಂ. ವಿಜಯ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಸಮಾಜ ಬಾಂಧವರಿಗೆ ಎಲ್ಲಾ ರೀತಿಯ ಮಾಹಿತಿಯನ್ನು ನೀಡಲು ಕಚೇರಿ ಸಹಾಯವಾಗಲಿದೆ. ಇದರ ಸದುಪಯೋಗವನ್ನು ಸಮಾಜ ಬಾಂಧವರು ಪಡೆದುಕೊಳ್ಳಬೇಕಾಗಿ ಕರೆ ನೀಡಿದರು. ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಸ್ಥಾಪಕಾಧ್ಯಕ್ಷ ಕೆ.ಎಸ್. ರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್, ಉಪಾಧ್ಯಕ್ಷ ಟಿ.ಕೆ. ಸುಧೀರ್, ಖಜಾಂಚಿ ಬಾಬು, ಸಹ ಕಾರ್ಯದರ್ಶಿ ದಿನೇಶ್ ನಾಯರ್, ಸಲಹಾ ಸಮಿತಿ ಸದಸ್ಯರಾದ ಟಿ.ಆರ್ ವಾಸುದೇವ್, ವಿನೂಪ್, ಶರತ್ ಕಾಂತ್, ಅಜಿಶ್‌ಕುಮಾರ್, ವಿಶೇಷ ಅತಿಥಿಗಳಾದ ಸುಬ್ರಮಣಿ, ರತಿಕೇಶನ್, ಗಿರೀಶ್, ದಿನೇಶ್ ನಾಯರ್ ಹಾಗೂ ಜಿಲ್ಲೆಯ ವಿವಿಧ ಭಾಗಗಳ ಹಿಂದೂ ಮಲೆಯಾಳಿ ಸಮಾಜದ ಅಧ್ಯಕ್ಷರುಗಳು ಭಾಗವಹಿಸಿದ್ದರು.