ಶನಿವಾರಸಂತೆ, ಜ. ೩೦: ಸಮೀಪದ ಹಂಡ್ಲಿ ಫೀಡರ್‌ಗೆ ಒಳಪಡುವ ಬೆಳ್ಳಾರಳ್ಳಿ ಗ್ರಾಮದಿಂದ ಹಂಡ್ಲಿ ಗ್ರಾಮದವರೆಗೆ ರಸ್ತೆ ಅಗಲೀಕರಣವಾಗುತ್ತಿರುವುದರಿಂದ ರಸ್ತೆ ಬದಿಯಲ್ಲಿ ಇರುವ ಮರಗಳನ್ನು ಕಡಿಯುವ ಸಲುವಾಗಿ ವಿದ್ಯುತ್ ತಂತಿಗಳನ್ನು ತೆರವುಗೊಳಿಸಬೇಕಾಗಿರುವುದರಿಂದ ತಾ. ೩೧ ಹಾಗೂ ಫೆ. ೧ ರಂದು ಬೆಳಿಗ್ಗೆ ೯ ಗಂಟೆಯಿAದ ಸಂಜೆ ೬ ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಈ ವ್ಯಾಪ್ತಿಗೆ ಒಳಪಡುವ ಬೆಳ್ಳಾರಳ್ಳಿ, ಹಂಡ್ಲಿ, ತಾಳೂರು, ಮಣಗಲಿ, ಹೆಬ್ಬುಲುಸೆ, ಸಂಪಿಗೆದಾಳು, ಕಿತ್ತೂರು ಗ್ರಾಮಗಳಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ ಎಂದು ಸೆಸ್ಕ್ ಪ್ರಕಟಣೆ ತಿಳಿಸಿದೆ.