ಇಂದಿನಿAದ ಸಂಸತ್ ಬಜೆಟ್ ಅಧಿವೇಶನ
ನವದೆಹಲಿ, ಜ. ೩೦: ಸೋಮವಾರದಿಂದ ಆರಂಭವಾಗಲಿರುವ ಸಂಸತ್ತಿನ ಬಜೆಟ್ ಅಧಿವೇಶನಕ್ಕೆ ವೇದಿಕೆ ಸಜ್ಜಾಗಿದ್ದು, ಪೆಗಾಸಸ್ ಸ್ನೂಪಿಂಗ್ ವಿವಾದ, ರೈತರ ಸಮಸ್ಯೆಗಳು ಸಂಕಷ್ಟ ಮತ್ತು ಪೂರ್ವ ಲಡಾಖ್‌ನಲ್ಲಿ ಚೀನಾದ ಆಕ್ರಮಣಗಳಂತಹ ವಿಷಯಗಳಲ್ಲಿ ಮೋದಿ ಸರ್ಕಾರವನ್ನು ಗುರಿಯಾಗಿಸಲು ಪ್ರತಿಪಕ್ಷಗಳು ಸಜ್ಜಾಗಿವೆ. ಕೋವಿಡ್-೧೯ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಸೆಂಟ್ರಲ್ ಹಾಲ್ ಹಾಗೂ ಉಭಯ ಸದನಗಳ ಚೇಂಬರ್‌ಗಳಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯನ್ನುದ್ದೇಶಿಸಿ ರಾಷ್ಟçಪತಿ ರಾಮನಾಥ್ ಕೋವಿಂದ್ ಅವರ ಭಾಷಣದೊಂದಿಗೆ ಅಧಿವೇಶನ ಆರಂಭವಾಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಆರ್ಥಿಕ ಸಮೀಕ್ಷೆ ೨೦೨೧-೨೨ ಮತ್ತು ಮಂಗಳವಾರ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಲೋಕಸಭೆಯು ರಾಷ್ಟçಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯನ್ನು ಬುಧವಾರದಿಂದ ಕೈಗೆತ್ತಿಕೊಳ್ಳಲಿದ್ದು, ಫೆಬ್ರವರಿ ೭ ರಂದು ಪ್ರಧಾನಿ ನರೇಂದ್ರ ಮೋದಿ ಚರ್ಚೆಗೆ ಉತ್ತರಿಸುವ ನಿರೀಕ್ಷೆಯಿದೆ.
ವೀಡಿಯೋ ಗೇಮ್ ಆಡಿದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿ ಅಮಾನತು
ಮಂಗಳೂರು, ಜ. ೩೦: ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ರೋಗಿಯನ್ನು ನಿರ್ಲಕ್ಷಿಸಿ ವೀಡಿಯೋ ಗೇಮ್ ಆಡಿದ್ದ ಕ್ಲಿನಿಕಲ್‌ಗೆ ನಿಯೋಜನೆಗೊಂಡಿದ್ದ ಖಾಸಗಿ ಕಾಲೇಜಿನ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಯನ್ನು ಶನಿವಾರ ಅಮಾನತುಗೊಳಿಸಲಾಗಿದೆ. ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ವೀಡಿಯೋ ಗೇಮ್ ಆಡುತ್ತಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾ ಸರ್ಜನ್ ಡಾ. ಸದಾಶಿವ, ವೈದ್ಯ ವಿದ್ಯಾರ್ಥಿಯು ತಾ. ೨೪ ರಂದು ವೆನ್ಲಾಕ್ ಆಸ್ಪತ್ರೆಯ ಕ್ಯಾಶುವಾಲಿಟಿ ಬ್ಲಾಕ್‌ನಲ್ಲಿ ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ವೀಡಿಯೋ ಗೇಮ್ ಆಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯ ಕುರಿತು ತನಿಖೆ ನಡೆಸಿದಾಗ ಅವರು ನಿಜವಾಗಿಯೂ ವೀಡಿಯೋಗೇಮ್ ಆಡುತ್ತಿದ್ದರು ಎಂದು ಕಂಡುಬAದಿದೆ. ನಂತರ ಅವರನ್ನು ಕಾಲೇಜಿನಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್‌ಗೆ ರಾಜೀನಾಮೆ-ಇಬ್ರಾಹಿಂ
ಬೆAಗಳೂರು, ಜ. ೩೦: ಕಾಂಗ್ರೆಸ್‌ನ ಎಂ.ಎಲ್.ಸಿ. ಸ್ಥಾನಕ್ಕೆ ತಾ. ೩೧ ರಂದು ರಾಜೀನಾಮೆ ನೀಡುತ್ತೇನೆ. ನಾನು ಮತ್ತೆ ಕಾಂಗ್ರೆಸ್‌ಗೆ ಮರಳುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಇಬ್ರಾಹಿಂ, ಇದುವರೆಗೂ ಮಾಧ್ಯಮದವರು ನನ್ನ ಕೈ ಹಿಡಿದಿದ್ದೀರಿ. ಯಾವುದೇ ಕಾರಣಕ್ಕೂ ನನ್ನ ಕೈ ಬಿಡಬೇಡಿ, ನಾನು ಬಡವ ದುಡ್ಡಿಲ್ಲ. ನೊಂದಿದ್ದೇನೆ. ರೂ. ೪೦ ಕೋಟಿ ಸಾಲ, ೯ ಮಕ್ಕಳು ಇದ್ದಾರೆ ಎಂದು ಇಬ್ರಾಹಿಂ ಕಣ್ಣೀರಿಟ್ಟಿದ್ದಾರೆ. ನನ್ನ ಮನಸು ನೋಯಿಸಿದವರಿಗೆ ಯಾವತ್ತು ಒಳ್ಳೆದಾಗಲ್ಲ. ನಾನು ಪಕ್ಷ ಬಿಡುವ ಬಗ್ಗೆ ಕಾಂಗ್ರೆಸ್ ಗಲಿಬಿಲಿ ಆಗಿದೆ. ಸಿದ್ದರಾಮಯ್ಯ ನನ್ನನ್ನು ಆತ್ಮೀಯರು ಅಂತಾರೆ, ಇದೇನಾ ಆತ್ಮೀಯತೆ? ಡಿ.ಕೆ.ಶಿ. ಅವರು ಮಾತ್ರ ದೊಡ್ಡವರು ಅವರ ಬಗ್ಗೆ ನಾನು ಮಾತಾಡ್ಬಾರ್ದು ಎಂದು ಬೇಸರ ವ್ಯಕ್ತಪಡಿಸಿದರು.