ಕೂಡಿಗೆ, ಜ. ೩೦: ಇಲ್ಲಿ ಡೈರಿ ಸರ್ಕಲ್ ಸಮೀಪದ ಕೃಷಿ ಇಲಾಖೆಗೆ ಹೋಗುವ ಮಾರ್ಗಕ್ಕೆ ಹೊಂದಿಕೊAಡಿರುವ ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣ ಕುಡುಕರ ಅಡ್ಡೆಯಾಗಿ ಮಾರ್ಪಾಟ್ಟಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರವು ಮುಚ್ಚಿದ ನಂತರ ಮದ್ಯದ ಅಂಗಡಿಯಿAದ ಮದÀ್ಯದ ಬಾಟಲಿಗಳನ್ನು ತಂದು ಆರೋಗ್ಯ ಕೇಂದ್ರದ ಆವರಣದಲ್ಲಿ ಕುಡಿದು ಅಲ್ಲಿಯೇ ಬಿಸಾಡಿ ಹೋಗಿ ಕಸದ ಕೊಂಪೆ ಮಾಡಿದ್ದಾರೆ.
ಆರೋಗ್ಯ ಕೇಂದ್ರದ ತಡೆಗೋಡೆಯ ಸಮೀಪ ಕೂಡ ಅನುಪಯುಕ್ತ ವಸ್ತುಗಳನ್ನು ತಂದು ಸುರಿಯುತ್ತಿದ್ದಾರೆ.
ಈಗಾಗಲೇ ಆರೋಗ್ಯ ಇಲಾಖೆಯ ವತಿಯಿಂದ ಕೂಡುಮಂಗಳೂರು ಗ್ರಾಮ ಪಂಚಾಯಿತಿಗೆ ಮನವಿಯನ್ನು ನೀಡಲಾಗಿದೆ. ಸಂಬAಧಿಸಿದ ಪೊಲೀಸ್ ಇಲಾಖೆಯವರು ತುರ್ತಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.