ಸೋಮವಾರಪೇಟೆ, ಜ. ೩೦: ಕೊಡಗು ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಸ್ತಿçÃಶಕ್ತಿ ಒಕ್ಕೂಟ ಹಾಗೂ ಗೌಡಳ್ಳಿ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಶುಂಠಿ ಗ್ರಾಮದಲ್ಲಿ ಮಹಿಳಾ ದೌರ್ಜನ್ಯ ಮುಕ್ತಿ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮವನ್ನು ವಕೀಲ ಜೀವನ್ ಕುಮಾರ್ ಉದ್ಘಾಟಿಸಿದರು. ಮಹಿಳೆಯರ ಶ್ರೇಯೋಭಿವೃದ್ಧಿಗೆ ಸಂವಿಧಾನದಲ್ಲಿ ಪ್ರಾಧಾನ್ಯತೆ ನೀಡಲಾಗಿದೆ.
ದೌರ್ಜನ್ಯಕ್ಕೆ ಒಳಗಾದ ಮಹಿಳೆಗೆ ಉಚಿತ ಕಾನೂನಿನ ನೆರವು ಸಿಗಲಿದೆ. ಇಂತಹ ಸೌಲಭ್ಯವನ್ನು ಪಡೆಯಲು ಸರ್ಕಾರ ವಕೀಲರನ್ನು ನೇಮಿಸಿದೆ. ಸ್ಥಳೀಯ ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿಯನ್ನು ಸಂಪರ್ಕಿಸಿ ಉಚಿತ ಸೇವೆಯನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಶನಿವಾರಸಂತೆ ವಿಘ್ನೇಶ್ವರ ಬಾಲಿಕಾ ಪ್ರೌಢಶಾಲೆ ಶಿಕ್ಷಕ ಕೆ.ಪಿ. ಜಯಕುಮಾರ್ ಮಾತನಾಡಿ, ಹಿಂದಿನ ಕಾಲದಲ್ಲಿ ಮಹಿಳೆಯ ಶೋಷಣೆ, ದೌರ್ಜನ್ಯ ಯಥೇಚ್ಛವಾಗಿತ್ತು. ಈಗ ಎಲ್ಲವೂ ಬದಲಾವಣೆಯಾಗಿದೆ. ಮಹಿಳೆಯರು ಪುರುಷನಷ್ಟೇ ಸಮಾನಳಾಗಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಆದರೂ ಕೆಲವು ಕಡೆ ದೌರ್ಜನ್ಯಗಳು ನಡೆಯುತ್ತಿದ್ದು, ಇಂತಹ ಸಂದರ್ಭದಲ್ಲಿ ಕಾನೂನಿನ ರಕ್ಷಣೆ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಗೌಡಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ರೋಹಿಣಿ, ಪೂಜಾ ಯುವತಿ ಮಂಡಳಿ ಅಧ್ಯಕ್ಷೆ ಲತಾ ಬಸವರಾಜು, ಶಿಕ್ಷಕ ದಯಾನಂದ್, ಸ್ತಿçÃಶಕ್ತಿ, ಮಹಿಳಾ ಸಂಘಟನೆಗಳ ಪದಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಇದ್ದರು. ಅಂಗನವಾಡಿ ಕಾರ್ಯಕರ್ತೆಯರಾದ ಎಸ್.ಎಂ. ಸುಜಾತ ಸ್ವಾಗತಿಸಿ, ಕೆ.ವಿನಯ ಪ್ರಾರ್ಥಿಸಿ, ಗಾಯಿತ್ರಿ ನಿರೂಪಿಸಿ, ಪೂರ್ಣಿಮ ವಂದಿಸಿದರು.