ಮಡಿಕೇರಿ, ಜ. ೩೦: ವ್ಯಕ್ತಿಯೊಬ್ಬರು ರಾಜಕಾಲುವೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ನಗರದ ಹೊಸ ಬಡಾವಣೆ ನಿವಾಸಿ, ಮೋಣಪ್ಪ ಗ್ಯಾರೇಜ್‌ನಲ್ಲಿ ಮೆಕ್ಯಾನಿಕ್ ಆಗಿದ್ದ ಕೃಷ್ಣ (೭೫) ಎಂಬವರು ಕಳೆದ ರಾತ್ರಿ ಎಲ್‌ಐಸಿ ಕಚೇರಿ ಬಳಿ ಹರಿಯುವ ರಾಜಕಾಲುವೆಗೆ ಬಿದ್ದು ಸಾವನ್ನಪ್ಪಿದ್ದು, ಇಂದು ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ. ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ, ಮಕ್ಕಳನ್ನು ಅಗಲಿದ್ದಾರೆ.