ಮಡಿಕೇರಿ, ಜ. ೩೦: ಮಡಿಕೇರಿಯ ಕಾವೇರಿ ಕೊಡವ ಕೇರಿ ಸಂಘದ ನೂತನ ಅಧ್ಯಕ್ಷೆಯಾಗಿ ಬಲ್ಯಾಟಂಡ ಲತಾಚಂಗಪ್ಪ ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಉಳ್ಳಿಯಡ ನಂದಾ ನಂಜಪ್ಪ, ಕಾರ್ಯದರ್ಶಿಯಾಗಿ ಅಳಮಂಡ ವಚನ್, ಖಜಾಂಚಿಯಾಗಿ ಕೂಪದಿರ ಮುತ್ತಣ್ಣ ಹಾಗೂ ಇತರ ೧೨ ಮಂದಿ ನಿರ್ದೇಶಕರುಗಳಾಗಿ ನೇಮಕಗೊಂಡಿದ್ದಾರೆ. ಇತ್ತೀಚೆಗೆ ನಡೆದ ಸಂಘದ ಸಭೆಯಲ್ಲಿ ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು.