ಮಡಿಕೇರಿ, ಜ. ೨೭ : ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಎಸ್.ಎಂ.ಚAಗಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕುಶಾಲನಗರದಲ್ಲಿ ನಡೆದ ಒಕ್ಕಲಿಗರ ಸಂಘದ ಮಹಾಸಭೆಯಲ್ಲಿ ಮುಂದಿನ ಅವಧಿಗೂ ಅಧ್ಯಕ್ಷರನ್ನಾಗಿ ಹಾಲಿ ಅಧ್ಯಕ್ಷರಾಗಿರುವ ಎಸ್.ಎಂ. ಚಂಗಪ್ಪ ಅವರನ್ನು ಸರ್ವಾನುಮತ ದಿಂದ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರುಗಳಾಗಿ ವಿ.ಪಿ. ಸುರೇಶ್ ಮಡಿಕೇರಿ, ಪಿ.ಕೆ. ರವಿ ಸೋಮವಾರಪೇಟೆ ಕೆ.ಪಿ. ನಾಗರಾಜ್, ವೀರಾಜಪೇಟೆ ಹಾಗೂ ಗೌರವ ಕಾರ್ಯದರ್ಶಿಯಾಗಿ ಎಸ್.ಎಲ್. ಬಸವರಾಜು ಆಯ್ಕೆಯಾದರು.
ನಿರ್ದೇಶಕರುಗಳಾಗಿ ಎಲ್. ಮೋಹನ್ ಕುಮಾರ್, ಶೀಲಾ ಪ್ರಕಾಶ್, ಎಸ್.ಪಿ. ಪೊನ್ನಪ್ಪ, ಟಿ.ಎಲ್. ಮಹೇಶ್ ಕುಮಾರ್, ಜಿ.ಆರ್. ಭುವನೇಂದ್ರ, ಜಾನಕಿ ವೆಂಕಟೇಶ್, ಕೆ.ಕೆ. ರೇಣುಕ, ಸವಿತ ಸತೀಶ್, ಜಿ.ಬಿ. ಜಗದೀಶ್, ಎ.ಪಿ. ಧರ್ಮಪ್ಪ, ಹೆಚ್.ಎಂ. ಜಿತೇಂದ್ರ, ವಿ.ಎಲ್. ಸುರೇಶ್, ಉಷಾ ಪ್ರೀತಂ, ಕೆ.ಆರ್. ಸತೀಶ್ ನೇಮಕಗೊಂಡಿದ್ದಾರೆ.
ಮಹಾಪೋಷಕರಾಗಿ ಎನ್.ಕೆ. ಅಪ್ಪಸ್ವಾಮಿ, ಮಹಾಪ್ರಧಾನ ಪೋಷಕರಾಗಿ ಡಿ.ಎ.ಸುಬ್ರಮಣಿ, ಟಿ.ಆರ್.ಪುರುಷೋತ್ತಮ, ಪ್ರಧಾನ ಪೋಷಕರಾಗಿ ಕೆ.ಎಂ.ಲೋಕೇಶ್, ಕೆ.ಪಿ.ಸುರೇಶ್, ವಿಶೇಷ ಆಹ್ವಾನಿತರಾಗಿ ಮಾಜಿ ಸಚಿವ ಬಿ.ಎ.ಜೀವಿಜಯ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಡಾ. ಬಿ.ಸಿ. ನವೀನ್ ಕುಮಾರ್, ಜಿ.ಪಂ. ಮಾಜಿ ಅಧ್ಯಕ್ಷರುಗಳಾದ ಕೆ.ಪಿ.ಚಂದ್ರಕಲಾ, ದೀರ್ಘಕೇಶಿ ಶಿವಣ್ಣ, ಖಾಯಂ ಆಹ್ವಾನಿತರಾಗಿ ಸಂಸದ ಪ್ರತಾಪ್ ಸಿಂಹ, ಎ.ಆರ್. ಮುತ್ತಣ್ಣ, ಎಂ.ಕೆ. ದಿನೇಶ್ ಹಾಗೂ ವಿ.ಜಿ.ಮೋಹನ್ ಅವರನ್ನು ಆಯ್ಕೆ ಮಾಡಲಾಯಿತು.
ಸಂಘದ ಕಾನೂನು ಸಲಹೆಗಾರರನ್ನಾಗಿ ವಕೀಲ ಎಂ.ಎ. ನಿರಂಜನ್ ಆಯ್ಕೆಯಾದರು.
ಚುನಾವಣಾ ಪ್ರಕ್ರಿಯೆಯನ್ನು ಸಂಘದ ಪೋಷಕ ವಿ.ಪಿ. ಶಶಿಧರ್ ನಡೆಸಿದರು. ವಿ.ಪಿ. ಸುರೇಶ್ ಸ್ವಾಗತಿಸಿ, ಎಸ್.ಪಿ. ಪೊನ್ನಪ್ಪ ವಂದಿಸಿದರು.