ಮಡಿಕೇರಿ, ಜ. ೨೭: ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಸಂಬAಧ ಸಾಕಷ್ಟು ದೂರುಗಳು ಬರುತಿದ್ದು, ಈ ಹಿನ್ನೆಲೆಯಲ್ಲಿ ನಗರಸಭೆ ವತಿಯಿಂದ ಬೀದಿನಾಯಿಗಳ ಸಂತಾನಹರಣ ಚಿಕಿತ್ಸೆಗೆ ಕ್ರಮಕೈಗೊಳ್ಳಲಾಗಿದ್ದು, ತಾ. ೨೮ ರಿಂದ (ಇಂದು) ಬೆಳಿಗ್ಗೆ ೬ ಗಂಟೆಯಿAದ ಈ ಕಾರ್ಯ ಆರಂಭವಾಗಲಿದೆ ಎಂದು ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ತಿಳಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಅವರು ಮಾಹಿತಿ ನೀಡಿದರು. ಬೀದಿ ನಾಯಿಗಳ ಹಾವಳಿ ಬಗ್ಗೆ ನಗರಸಭೆಗೆ ದೂರುಗಳು ಬರುತ್ತಿವೆ. ಆದರೆ ಬೀದಿ ನಾಯಿಗಳನ್ನು ಕೊಲ್ಲುವುದಕ್ಕಾಗಲಿ, ಬೇರೆಡೆಗೆ ಕೊಂಡೊಯ್ದು ಬಿಡುವುದಕ್ಕಾಗಲಿ ಕಾನೂನು ರೀತಿಯಲ್ಲಿ ಅವಕಾಶವಿಲ್ಲದ ಕಾರಣ ಅವುಗಳನ್ನು ಸೆರೆಹಿಡಿದು ಸಂತಾನ ಹರಣ ಶಸ್ತç ಚಿಕಿತ್ಸೆಯ ಮೂಲಕ ಅವುಗಳ ಸಂತತಿಯನ್ನು ನಿಯಂತ್ರಿಸಲು ಸಾಧ್ಯವಿರುವುದರಿಂದ ನಗರಸಭೆ ಈ ಕ್ರಮಕ್ಕೆ ಮುಂದಾಗಿದೆ. ಮಹಾರಾಷ್ಟçದ
(ಮೊದಲ ಪುಟದಿಂದ) ‘ಎನಿಮಲ್ ಪ್ರೊಟೆಕ್ಷನ್ ಅಂಡ್ ವೆಲ್ಫೇರ್ ಸೊಸೈಟಿ’ ಎಂಬ ಸಂಸ್ಥೆಗೆ ಬೀದಿ ನಾಯಿಗಳ ಸಂತಾನಹರಣ ಶಸ್ತç ಚಿಕಿತ್ಸಾ ಕಾರ್ಯವನ್ನು ವಹಿಸಲಾಗಿದೆ. ಈ ಸಂಸ್ಥೆ ಈಗಾಗಲೇ ಎಲ್ಲ ಸಿದ್ಧತೆಗಳನ್ನು ಕೈಗೊಂಡಿದ್ದು, ಬೀದಿಗಳಲ್ಲಿ ಸಿಗುವ ಬೀದಿ ನಾಯಿಗಳನ್ನು ಹಿಂಸಿಸದೆ ಸೆರೆಹಿಡಿದು ಸಂತಾನ ಹರಣ ಶಸ್ತçಚಿಕಿತ್ಸೆ ನಡೆಸಿ ಎರಡು ದಿನಗಳ ಕಾಲ ಆರೈಕೆ ಮಾಡಿ ನಂತರ ಸೆರೆ ಹಿಡಿದ ಜಾಗದಲ್ಲೇ ಅವುಗಳನ್ನು ತಂದು ಬಿಡಲಿದೆ ಎಂದು ಅನಿತಾ ಪೂವಯ್ಯ ತಿಳಿಸಿದರು.
ಒಂದು ಬೀದಿ ನಾಯಿಗೆ ಶಸ್ತçಚಿಕಿತ್ಸೆಗೆ ೧,೪೦೦ ರೂ.ನಂತೆ ಸಂಸ್ಥೆಗೆ ಟೆಂಡರ್ ನೀಡಲಾಗಿದ್ದು, ಸುಮಾರು ೬೦೦ ಬೀದಿ ನಾಯಿಗಳಿಗೆ ಶಸ್ತçಚಿಕಿತ್ಸೆ ನಡೆಸಲು ಯೋಜನೆ ರೂಪಿಸಲಾಗಿದೆ. ಒಂದು ದಿನಕ್ಕೆ ೨೦ ರಿಂದ ೨೫ ಬೀದಿ ನಾಯಿಗಳ ಶಸ್ತçಚಿಕಿತ್ಸೆ ನಡೆಸುವುದಾಗಿ ಸಂಸ್ಥೆ ತಿಳಿಸಿದ್ದು, ಮಡಿಕೇರಿ ನಗರದ ಘನತ್ಯಾಜ್ಯ ವಿಲೇವಾರಿ ಜಾಗದ ಬಳಿ ಶಸ್ತçಚಿಕಿತ್ಸಾ ಕಾರ್ಯ ನಡೆಯಲಿದೆ. ಸಾರ್ವಜನಿಕರು ತಮ್ಮ ಸಾಕು ನಾಯಿಗಳನ್ನು ಮನೆಗಳಲ್ಲಿ ಕಟ್ಟಿ ಹಾಕಬೇಕೆಂದು ಮನವಿ ಮಾಡಿದ ಅವರು, ಬೀದಿಗಳಲ್ಲಿ ಯಾವುದೇ ನಾಯಿ ಕಂಡುಬAದರೂ ಅದನ್ನು ಕೊಂಡೊಯ್ದು ಸಂತಾನಹರಣ ಶಸ್ತçಚಿಕಿತ್ಸೆ ನಡೆಸಲಾಗುವುದು ಎಂದು ನುಡಿದರು.
ಗಣಪತಿ ಬೀದಿ ಕಾಮಗಾರಿ
ಗಣಪತಿ ಬೀದಿ ರಸ್ತೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಮುಂದಿನ ಹದಿನೈದು ದಿನಗಳ ಒಳಗಾಗಿ ಕಾಮಗಾರಿ ಮುಕ್ತಾಯವಾಗಲಿದೆ ಎಂದು ಅನಿತಾ ಪೂವಯ್ಯ ಹೇಳಿದರು.
ಕೇಂದ್ರ ಸರಕಾರದಿಂದ ಸಾರ್ವಜನಿಕರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ವಚ್ಛ ಭಾರತ್ ಮಿಷನ್-೨ ಅಡಿಯಲ್ಲಿ ‘ಸ್ವಚ್ಛತಾ ಆ್ಯಂಥೆಮ್’ ಎಂಬ ಹಾಡು ಹಾಗೂ ವೀಡಿಯೋ ಪ್ರದರ್ಶನ ಕಾರ್ಯಕ್ರಮ ಜಾರಿಯಾಗಿದ್ದು, ನಗರಸಭೆ ವತಿಯಿಂದ ತಾ. ೨೮ ರಂದು (ಇಂದು) ಸಂಜೆ ೪.೩೦ ಗಂಟೆಗೆ ಜಿ.ಟಿ. ವೃತ್ತದಿಂದ ಆರಂಭಗೊAಡು ನಗರದ ಪ್ರಮುಖ ಸ್ಥಳಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ನಗರಸಭಾಧ್ಯಕ್ಷರು ಮಾಹಿತಿ ನೀಡಿದರು.
ನಗರಸಭಾ ಶಾಲೆಗಳನ್ನು ಸರಕಾರದ ವಶಕ್ಕೆ ನೀಡುವ ಸಂಬAಧ ಈಗಾಗಲೇ ಉಸ್ತುವಾರಿ ಸಚಿವರ ಗಮನ ಸೆಳೆಯಲಾಗಿದ್ದು, ಅವರು ಮತ್ತೊಮ್ಮೆ ಜಿಲ್ಲೆಗೆ ಆಗಮಿಸಿದಾಗ ಈ ಬಗ್ಗೆ ಸಂಪೂರ್ಣ ವಿವರವನ್ನು ಅವರ ಮುಂದಿಡಲಾಗುವುದು ಎಂದು ಅನಿತಾ ಪೂವಯ್ಯ ತಿಳಿಸಿದರು.
ಈ ಸಂದರ್ಭ ನಗರಸಭಾ ಆಯುಕ್ತ ರಾಮದಾಸ್ ಉಪಸ್ಥಿತರಿದ್ದರು.