ಕಡಂಗ, ಜ. ೨೭: ಕಡಂಗ ಫುಟ್ಬಾಲ್ ಲೀಗ್ ಪಂದ್ಯಾಟದ ಬಿಡ್ಡಿಂಗ್ ಪ್ರಕ್ರಿಯೆ ಕಡಂಗ ಕೃಷಿ ಪತ್ತಿನ ಸಭಾಂಗಣದಲ್ಲಿ ಸಂಸ್ಥೆಯ ಅಧ್ಯಕ್ಷ ಲತೀಫ್ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಪತ್ರಕರ್ತ ನೌಫಲ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕಡಂಗ ಫುಟ್ಬಾಲ್ ಲೀಗ್ ಪಂದ್ಯಾಟವು ಸರ್ಕಾರದ ಮಾರ್ಗಸೂಚಿಯಂತೆ ನಡೆಸಲು ಕೆಪಿಎಲ್ ಆಡಳಿತ ಮಂಡಳಿಯಿAದ ತೀರ್ಮಾನಿಸಲಾಯಿತು. ಕ್ರೀಡಾಕೂಟದಲ್ಲಿ ಭಾಗವಹಿಸುವ ಆಟಗಾರರ ಬಿಡ್ಡಿಂಗ್ ಕಾರ್ಯಕ್ರಮದಲ್ಲಿ ಎಂಟು ತಂಡಗಳ ನಾಯಕ ಮತ್ತು ಮಾಲೀಕರು ಭಾಗವಹಿಸಿದರು. ಡೆಕ್ಕನ್ ಶೂಟರ್ಸ್, ವಾರಿಯರ್ಸ್, ಸೆವೆನ್ ಸ್ಟಾರ್, ಸ್ಟೆçöÊಕರ್, ಎಂಗ್ ಬಾಯ್ಸ್, ಯುನೈಟೆಡ್, ಈಗಲ್ಸ್, ಲಯನ್ಸ್ ತಂಡಗಳ ಪಂದ್ಯಾಟದಲ್ಲಿ ಭಾಗವಹಿಸಲಿವೆ. ಕಾರ್ಯಕ್ರಮದಲ್ಲಿ ಕೆಪಿಎಲ್ ಸ್ಥಾಪಕ ಜುನೈದ್, ಲತೀಫ್, ಶಿವು, ಅಯ್ಯಪ್ಪ, ದಿಲ್ಶಾದ್, ಅಪಿ, ಸಫಾ ದ್, ರಿಯಾಜ್, ಹಾಜರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ರಾಶಿದ್ ಮತ್ತು ರಾಜಿಕ್ ನಿರ್ವಹಿಸಿದರು.