ಮಡಿಕೇರಿ, ಜ. ೨೭: ಬೆಲೆಬಾಳುವ ಕೆಂಪು ಹರಳು ಕಲ್ಲುಗಳ ನಿಕ್ಷೇಪವಿರುವ ಪಟ್ಟಿಘಾಟ್ ಮೀಸಲು ಅರಣ್ಯ ಪ್ರದೇಶದ ತಾವೂರು ಭಾಗದಲ್ಲಿರುವ ನಿಶಾನೆ ಮೊಟ್ಟೆಯಲ್ಲಿ ೨೦೦೧ ರಿಂದಲೇ ಅಕ್ರಮ ಹರಳು ಕಲ್ಲು ದಂಧೆ ನಡೆಯುತ್ತಿದೆ. ಅರಣ್ಯ ಇಲಾಖೆಯ ಹದ್ದುಬಸ್ತಿನಲ್ಲಿರುವ ಪ್ರದೇಶದಲ್ಲಿ ಪ್ರತಿ ಬಾರಿ ಗಣಿಗಾರಿಕೆ ನಡೆದಾಗಲೂ ಆರೋಪಿಗಳು ಪರಾರಿಯಾಗುತ್ತಾರೆ. ಅರಣ್ಯ ಇಲಾಖಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಮುಂದಿನ ಸರದಿಗೆ ಹಾದಿ ಮಾಡಿಕೊಡಲು ಅಣಿಯಾಗುತ್ತಾರೆ., ಎರಡು ವರ್ಷಗಳ ಹಿಂದೆ ನಡೆದ ಗಣಿಗಾರಿಕೆ ದಂಧೆಯಲ್ಲಿ ನೆಪ ಮಾತ್ರಕ್ಕೆ ಈರ್ವರನ್ನು ಬಂಧಿಸಿ, ಇನ್ನುಳಿದವರು ತಲೆಮರೆಸಿಕೊಂಡಿದ್ದಾರೆ ಎಂದು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲು ಕ್ರಮಕ್ಕೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಆದರೆ ನಂತರ ಯಾವದೇ ಕ್ರಮ ಜರುಗದೇ ಇರುವದರಿಂದ ಯಾವದೇ ಭಯವಿಲ್ಲದೆ ಲೂಟಿಕೋರರು ಮತ್ತೆ ದಂಧೆಗಿಳಿಯಲು ಕಾರಣವಾಗಿದೆ..!
೨೦೨೦ರಲ್ಲಿ ನಡೆದ ಪ್ರಕರಣ..!
ಭಾಗಮಂಡಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಾವೂರು-ತಣ್ಣಿಮಾನಿ ಗ್ರಾಮಕ್ಕೆ ಸೇರಿದ ನಿಶಾನೆ ಮೊಟ್ಟೆಯಲ್ಲಿ ಎರಡು ವರ್ಷದ ಹಿಂದೆ ಅಕ್ರಮ ಗಣಿಗಾರಿಕೆ ನಡೆದಿತ್ತು. ಈ ವಿಚಾರ ಸಾರ್ವಜನಿಕರ ಮೂಲಕ ಬಯಲಿಗೆ ಬಂದಿತು. ಈ ಬಗ್ಗೆ ಕ್ರಮ ಕೈಗೊಂಡ ಅರಣ್ಯ ಇಲಾಖಾಧಿಕಾರಿಗಳು ಒಟ್ಟು ೮ ಮಂದಿಯನ್ನು ಆರೋಪಿಗಳನ್ನಾಗಿಸಿ, ಈರ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇನ್ನುಳಿದ ಆರು ಮಂದಿ ತಲೆಮರೆಸಿಕೊಂಡು ಬಳಿಕ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ ಎಂದು ವರದಿ ನೀಡಿದ್ದಾರೆ.
ಸ್ಥಳದಲ್ಲಿ ಬಂಧನ..!
ಈ ಪ್ರಕರಣಕ್ಕೆ ಸಂಬAಧಿಸಿದAತೆ ಮೇಕೇರಿ ಗ್ರಾಮದ ಸಲೀಂ ಹಾಗೂ ಮಡಿಕೇರಿಯ ತ್ಯಾಗರಾಜ ಕಾಲೋನಿಯ ಎಂ.ಡಿ. ಷರೀಫ್ ಎಂಬಿಬ್ಬರನ್ನು ಅಧಿಕಾರಿಗಳು ಸ್ಥಳದಲ್ಲಿಯೇ ಬಂಧಿಸಿದ್ದಾರೆ.
(ಮೊದಲ ಪುಟದಿಂದ) ಇನ್ನುಳಿದಂತೆ ಬೆಟ್ಟಗೇರಿ ಗ್ರಾಮದ ರಶೀದ್ (ರಾಶಿ) ಮಡಿಕೇರಿ, ತ್ಯಾಗರಾಜ ಕಾಲೋನಿಯ ಎಂ.ಡಿ.ಮಹಮ್ಮದ್, ಕನ್ನಂಡ ಬಾಣೆಯ ಅನಿಲ್‌ಕುಮಾರ್, ತಣ್ಣಿಮಾನಿ ಗ್ರಾಮದ ಕೆ.ಮಿಟ್ಟು ರಂಜಿತ್, ಪಾಪು (ಹರೀಶ್), ಪುಟ ್ಟ(ಲಕ್ಷö್ಮಣ) ಎಂಬ ಆರು ಮಂದಿಯ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. ನಂತರ ಇವರುಗಳು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ.
ಹರಳು ಕಲ್ಲುಗಳು ಸಿಕ್ಕಿವೆ..!
೨೦೧೯ರ ಡಿಸೆಂಬರ್‌ನಲ್ಲಿ ದಂಧೆ ನಡೆದಿದ್ದು, ೨-೧-೨೦೨೦ರಂದು ಪ್ರಕರಣ ದಾಖಲಿಸಿದ ಅಧಿಕಾರಿಗಳು, ಆರೋಪಿಗಳಿಂದ ಮೂರು ಮೊಬೈಲ್‌ಗಳು ಸೇರಿದಂತೆ ಒಟ್ಟು ೪೭.೫೦೪ ಕೆ.ಜಿ. ತೂಕದ ಹರಳುಕಲ್ಲುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಲೀಂ ಮನೆಯಲ್ಲಿ ೩ ಕೆ.ಜಿ., ಮಿಟ್ಟು ರಂಜಿತ್ ಮನೆಯಲ್ಲಿ ೧.೫ ಕೆ.ಜಿ., ಅನಿಲ್‌ಕುಮಾರ್ ಮನೆಯಲ್ಲಿ ೧೨.೦೦೪ ಕೆ.ಜಿ. ಕಲ್ಲುಗಳು ದೊರೆತ್ತಿರುವದಾಗಿ ಭಾಗಮಂಡಲ ವಲಯ ಅಧಿಕಾರಿಗಳು ನೀಡಿದ ವಿವರದಲ್ಲಿದೆ. ಇದರಲ್ಲಿ ೧೬.೫೦೪ ಕೆ.ಜಿ. ಮಾತ್ರ ಇದೆ, ಇನ್ನುಳಿದ ೩೧ ಕೆ.ಜಿ. ಕಲ್ಲುಗಳು ಎಲ್ಲಿಂದ ಪತ್ತೆಯಾದವು ಎಂಬ ವಿವರವಿಲ್ಲ..!
ಡಿಎಫ್‌ಒಗೆ ವರದಿ..!
ಪ್ರಕರಣಕ್ಕೆ ಸಂಬAಧಿಸಿದAತೆ ಸ್ಥಳ ಮಹಜರು ಮಾಡಿ ಈರ್ವರನ್ನು ಬಂಧಿಸಿ, ಉಳಿದ ಆರು ಮಂದಿ ವಿರುದ್ಧ ಮೊಕದ್ದಮೆ ದಾಖಲಿಸಿ, ಮೊಬೈಲ್ ಹಾಗೂ ಹರಳು ಕಲ್ಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಮೇಲೆ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲು ವಿಚಾರಣಾ ವರದಿಯನ್ನು ಮಡಿಕೇರಿ ಉಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಮೂಲಕ ಸಲ್ಲಿಸಲಾಗಿದೆ ಎಂದು ವಲಯ ಅರಣ್ಯ ಅಧಿಕಾರಿ ದೇವರಾಜು ಅವರು ವಿವರಣೆ ನೀಡುತ್ತಾರೆ..!
ದೋಷಾರೋಪ ಸಲ್ಲಿಕೆಯಾಗಿಲ್ಲ..!
ಇಲ್ಲಿ ಒಂದು ಕಡೆಯಿಂದ ಈರ್ವರನ್ನು ಮಾತ್ರ ಬಂಧಿಸಿದ್ದು, ಇನ್ನುಳಿದವರು ತಲೆಮರೆಸಿಕೊಂಡು ನಿರೀಕ್ಷಣಾ ಜಾಮೀನು ಹೊಂದಿಕೊಳ್ಳುವವರೆಗೆ ನಾಟಕೀಯ ಬೆಳವಣಿಗೆಗಳು ನಡೆದಿರುವದು ಸ್ಪಷ್ಟವಾಗುತ್ತದೆ. ಆರೋಪಿಗಳು ಸ್ಥಳೀಯವಾಗಿಯೇ ತಿರುಗಾಡಿಕೊಂಡಿದ್ದರೂ ಬಂಧಿಸದಿರುವ ಬಗ್ಗೆ ಸ್ಥಳೀಯರೇ ವಿವರಣೆ ನೀಡುತ್ತಾರೆ. ಬಂಧಿಸಿರುವವರ ಮೇಲೆ ಹಾಗೂ ಇನ್ನುಳಿದವರ ಮೇಲೆ ಅರಣ್ಯ ಅಪರಾಧ ಕಾಯ್ದೆಯಡಿ ಕಠಿಣ ಕಾನೂನು ಕಾಯ್ದೆಯಡಿ ಸೆಕ್ಷನ್ ಹಾಕದಿರುವದು ಸುಲಭವಾಗಿ ಜಾಮೀನು ಸಿಗಲು ಕಾರಣವಾಗಿದೆ. ಅದೂ ಅಲ್ಲದೆ, ೪೭ ಕೆ.ಜಿ. ಹರಳು ಕಲ್ಲು ಸಿಕ್ಕಿದ್ದರೂ ಸರಿಯಾದ ರೀತಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿರುವ ಬಗ್ಗೆ ಯಾವದೇ ಮಾಹಿತಿ ಇಲ್ಲ. ದೋಷಾರೋಪಣ ಪಟ್ಟಿ ಸಲ್ಲಿಸಲು ಕ್ರಮ ಜರುಗಿಸಿದ ವಲಯ ಅರಣ್ಯಾಧಿಕಾರಿಗಳಿಗೆ ಅಧಿಕಾರವಿದ್ದರೂ ಎಸಿಎಫ್ ಮೂಲಕ ಡಿಎಫ್‌ಒಗೆ ಸಲ್ಲಿಸಿರುವ ಬಗ್ಗೆ ಗ್ರಾಮಸ್ಥರಲ್ಲಿ ಸಂಶಯ ಮೂಡಿದೆ..!
ಇಷ್ಟೊಂದು ಪುರಾವೆಗಳಿದ್ದರೂ, ವ್ಯಕ್ತಿಗಳು ಸಿಕ್ಕಿ ಬಿದ್ದಿದ್ದರೂ ಕಠಿಣ ಕ್ರಮ ಜರುಗದಿರುವದರಿಂದ ಈ ಬೆಟ್ಟವನ್ನು ಹೆಗ್ಗಣಗಳು ಕೊರೆದಂತೆ ಮತ್ತೆ ಮತ್ತೆ ಲೂಟಿಕೋರರು ಕೊರೆಯಲು ಹಾದಿ ಮಾಡಿ ಕೊಟ್ಟಂತಾಗಿದೆ..!
? ಸಂತೋಷ್, ಸುನಿಲ್