ಮಡಿಕೇರಿ, ಜ. ೨೬: ವಾಟೆಕಾಡು ಹೊದ್ದೂರಿನ ವಿಘ್ನೇಶ್ವರ ಯುವ ಸಂಘ ಹಾಗೂ ನೆಹರು ಯುವಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ ಹಾಗೂ ಮಡಿಕೇರಿ ತಾಲೂಕು ಯುವ ಒಕ್ಕೂಟ ಸಂಯುಕ್ತ ಆಶ್ರಯದಲ್ಲಿ ವಾಟೆಕಾಡುವಿನಲ್ಲಿ ಯುವ ಸಪ್ತಾಹದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಯುವ ಸಂಘದ ಅಧ್ಯಕ್ಷ ಎಂ.ಎ. ಭೀಮಯ್ಯ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಡಿ. ಸುಕುಮಾರ ಹಾಗೂ ಧರ್ಮಸ್ಥಳ ಸ್ವ-ಸಹಾಯ ಸಂಘದ ಸೇವಾನಿರತೆ ಟಿ.ಎಂ. ಕಾವೇರಿ, ಉಪಾಧ್ಯಕ್ಷರಾದ ಹೆಚ್.ಡಿ. ರೂಪ, ಪಿ.ಕೆ. ಭಾಸ್ಕರ, ಪಿ.ಕೆ. ಪಾಲಮ್ಮ ಮತ್ತು ಹೆಚ್.ಟಿ. ಜವುರಿಯವರು ಇದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ, ಭಾವಗೀತೆ, ಜಾನಪದ ಗೀತೆ, ಜಾನಪದ ನೃತ್ಯ, ಭಜನೆ ಪದಗಳು ಜರುಗಿದವು. ಸುಶ್ಮಿತ ತಂಡದವರು ಪ್ರಾರ್ಥಿಸಿ, ಗೌರವಾಧ್ಯಕ್ಷ ಸುಬ್ರಮಣಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.