ಕಣಿವೆ, ಜ. ೨೬: ಕೂಡು ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡತ್ತೂರು ಗ್ರಾಮದ ಜನವಸತಿ ಪ್ರದೇಶದ ಕೂಗಳತೆಯ ದೂರದಲ್ಲಿಯೇ ಹಾರಂಗಿ ನದಿ ಹರಿಯುತ್ತಿದ್ದರೂ ಕೂಡ ಇಲ್ಲಿನ ನಿವಾಸಿಗಳು ಕುಡಿಯುವ ನೀರಿಗೆ ನಿತ್ಯವೂ ಪರದಾಡುವಂತಹ ಸ್ಥಿತಿ ಉಂಟಾಗಿದೆ.

ಪAಚಾಯಿತಿ ವತಿಯಿಂದ ಎರಡು ದಿನಕ್ಕೊಮ್ಮೆ ಹರಿಸುವ ಹಾರಂಗಿ ನದಿಯ ಕುಡಿಯುವ ನೀರು ಸರಿಯಾಗಿ ನಲ್ಲಿಯಲ್ಲಿ ಬರುತ್ತಿಲ್ಲ. ಅಂದರೆ ನಲ್ಲಿಯಲ್ಲಿ ಸಮರ್ಪಕವಾಗಿ ನೀರು ಹರಿಯದ ಕಾರಣ ಒಂದು ಬಿಂದಿಗೆಯಲ್ಲಿ ನೀರು ಭರ್ತಿಯಾಗಲು ಬಹಳ ಹೊತ್ತು ಕಾದು ನಿಲ್ಲಬೇಕು ಎಂದು ಸ್ಥಳೀಯ ಮಹಿಳೆ ವಯೋವೃದ್ಧೆ ಶಿವಮ್ಮ ಹೇಳುತ್ತಾರೆ.

ಈ ಜನವಸತಿ ಪ್ರದೇಶದಲ್ಲಿ ೧೫ ಮನೆಗಳಿವೆ. ಎರಡು ದಿನಕ್ಕೊಮ್ಮೆ ನೀರು ಬಿಡುತ್ತಾರೆ. ಬೆಳಿಗ್ಗೆ ೮ ಗಂಟೆಗೆ ನೀರು ಬಿಡುವುದರಿಂದ ನಾವು ಮನೆಯೊಳಗಿನ ಕೆಲಸ ಕಾರ್ಯ ಎಲ್ಲವನ್ನು ಬಿಟ್ಟು ನೀರಿಗಾಗಿ ಇರುವ ಒಂದೇ ಒಂದು ನಲ್ಲಿಯ ಬಳಿ ಕಾಯುತ್ತೇವೆ. ಕಾದರೂ ಕೂಡ ಮನೆಗೆ ಸಾಕಾಗುವಷ್ಟು ನೀರು ಸಿಗುತ್ತಿಲ್ಲ ಎಂದು ಗೀತಾ ಹಾಗೂ ಸುಶೀಲ ಹೇಳುತ್ತಾರೆ.

ಕಳೆದ ಆರು ತಿಂಗಳ ಹಿಂದೆ ಇಲ್ಲಿನ ಪ್ರತಿ ಮನೆಗಳಿಂದ ತಲಾ ಒಂದು ಸಾವಿರ ರೂ. ಹಣ ಕಟ್ಟಿಸಿ ಕೊಂಡು ಇಲ್ಲಿನ ೧೫ ಮನೆಗಳಿಗೂ ನಲ್ಲಿ ಸಂಪರ್ಕ ಕಲ್ಪಿಸಿ ಮೀಟರ್ ಕೂಡ ಹಾಕಿದ್ದಾರೆ. ಆದರೆ ಇದೂವರೆಗೂ ನೀರು ನಮ್ಮ ಮನೆಗಳ ನಲ್ಲಿಗಳ ಬಳಿ ಬರಲೇ ಇಲ್ಲ. ಹಾಗಾಗಿ ನೀರು ಬಿಡುವ ದಿವಸಗಳಲ್ಲಿ ಕೂಲಿ ಕೆಲಸಕ್ಕೆ ರಜೆ ಮಾಡಿ ನೀರಿಗಾಗಿ ಕಾದು ಕಾದು ಸಾಕಾಗಿ ಬರುವ ನೀರನ್ನೇ ನಾವೆಲ್ಲರೂ ಸಮನಾಗಿ ಹಂಚಿಕೊAಡು ಮನೆಗೆ ಒಯ್ಯುತ್ತಿದ್ದೇವೆ ಎಂದು ಕುಮಾರಿ ಹಾಗೂ ಭಾಗ್ಯ ಹೇಳುತ್ತಾರೆ.

‘ನೀರು ಬೇಕಾದಷ್ಟು ಇಲ್ಲೇ ಹಾರಂಗಿ ನದಿಯಲ್ಲಿ ಹರಿಯುತ್ತಿ ದ್ದರೂ ಕೂಡ ಏನು ಸರ್ ಇವರು ಪಂಚಾಯಿತಿಯವರು ಸರಿಯಾಗಿ ಕುಡಿಯುವ ನೀರನ್ನೇ ಕೊಡುತ್ತಿಲ್ಲ. ಇವರನ್ನು ಹೇಳೋರು ಕೇಳೋರು ಯಾರು ಇಲ್ಲವೇ’ ಎಂದು ಆಕ್ರೋಶ ಹೊರಹಾಕುತ್ತಾರೆ ಸ್ಥಳೀಯ ನಿವಾಸಿ ರಾಜಣ್ಣ.

ಸ್ಥಳಕ್ಕೆ ಧಾವಿಸಿದ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಡಿ.ಎಸ್. ಗಣೇಶ್ ಹಾಗೂ ಪಂಚಾಯಿತಿ ಮಾಜಿ ಸದಸ್ಯ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಇಲ್ಲಿನ ಜನವಸತಿ ಪ್ರದೇಶಕ್ಕೆ ಕಳೆದ ೨೦ ವರ್ಷಗಳ ಹಿಂದೆ ಕೂಡಿಗೆಯ ಶಂಕರಾಚಾರಿಯವರು ಜಿ.ಪಂ. ಸದಸ್ಯರಾಗಿದ್ದಾಗ ಹಾರಂಗಿ ನಿವಾಸಿ ಗಳಿಗೆ ಪೂರೈಸುತ್ತಿದ್ದ ಹಾರಂಗಿ ನದಿಯ ನೀರಿಗೆ ಪೈಪ್‌ಲೈನ್ ಮೂಲಕ ಕುಡಿಯುವ ನೀರನ್ನು ಪೂರೈಸಲಾಗಿತ್ತು. ಆದರೆ ಈಗ ನದಿಯಲ್ಲಿ ನೀರಿನ ಹರಿವು ಕ್ಷೀಣಿಸಿದ ನಂತರ ನೀರು ಸಾಕಾಗುತ್ತಿಲ್ಲ. ಇದೀಗ ಜಲಜೀವನ್ ಯೋಜನೆ ಯಡಿ ಪ್ರತಿ ಮನೆಗೂ ಕುಡಿಯುವ ನೀರು ಪೂರೈಸುವ ಯೋಜನೆ ಜಾರಿಯಾಗುತ್ತಿದೆ ಎಂದರು. ಒಟ್ಟಾರೆ, ಮನುಷ್ಯನ ಅಗತ್ಯ ಮೂಲ ಭೂತ ಸೌಕರ್ಯಗಳಲ್ಲಿ ಪ್ರಮುಖ ವಾದ ಕುಡಿಯುವ ನೀರನ್ನು ಆದಷ್ಟು ಬೇಗ ಸಮರ್ಪಕ ವಾಗಿ ಪೂರೈಸು ವಲ್ಲಿ ಜಿಲ್ಲಾಡಳಿತ ಮುಂದಾಗ ಬೇಕಿದೆ ಅಷ್ಟೆ.

- ಕೆ. ಎಸ್. ಮೂರ್ತಿ, ಕುಶಾಲನಗರ.