ಕೂಡಿಗೆ, ಜ. ೨೬: ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದ ಕೂಡಿಗೆ ವಲಯ ವತಿಯಿಂದ ಗುಮ್ಮನಕೊಲ್ಲಿ ಗ್ರಾಮದಲ್ಲಿ ಸೇವಾ ಕೇಂದ್ರದ ಉದ್ಘಾಟನೆಯನ್ನು ಮುಳ್ಳುಸೋಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಚಲುವರಾಜ್ ನೆರವೇರಿಸಿದರು.

ನಂತರ ಮಾತಾನಾಡಿದ ಯೋಜನಾ ಅಧಿಕಾರಿ ರೋಹಿತ್, ಗ್ರಾಮೀಣ ಭಾಗದ ಜನರು ಆಧಾರ್ ಕಾರ್ಡ್ ಸೇರಿದಂತೆ ಹಲವು ದಾಖಲೆ ಪಡೆಯಲು ಈ ಕೇಂದ್ರ ಸಹಕಾರಿಯಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಕಾವಲುಪಡೆ ಜಿಲ್ಲಾ ಅಧ್ಯಕ್ಷ ಎಂ. ಕೃಷ್ಣ ಹಾಜರಿದ್ದರು. ಸಂಘದ ಮೇಲ್ವಿಚಾರಕ ಚೈತನ್ಯ, ಪಂಚಾಯಿತಿ ಸದಸ್ಯರಾದ ಗಣೇಶ್, ಮಣಿ, ಆಸೀಫ್ ಮತ್ತು ಸಂಘದ ಪಧಾದಿಕಾರಿಗಳಾದ ಸುವರ್ಣ, ಸಂಗೀತ, ನಿರ್ಮಲ, ಸುಗಂಧಿ ಸೇರಿದಂತೆ ಇನ್ನಿತರರು ಹಾಜರಿದ್ದರು.