ಮಡಿಕೇರಿ, ಜ. ೨೬: ಮೇಕೇರಿಯ ಸ್ವಾಗತ ಯುವಕ ಸಂಘದ ವತಿಯಿಂದ ನೇತಾಜಿ ಸುಭಾಷ್ ಚಂದ್ರಬೋಸರ ೧೨೫ನೇ ಜನ್ಮದಿನ ಆಚರಣೆ ಕಾರ್ಯಕ್ರಮ ವನ್ನು ಮೇಕೇರಿಯ ಶ್ರೀ ಗೌರಿಶಂಕರ ದೇವಾಲಯದ ಅನ್ನಪೂರ್ಣ ಕಲಾಮಂದಿರದಲ್ಲಿ ಆಚರಿಸಲಾಯಿತು.

ಸುಭಾಷ್ ಚಂದ್ರಬೋಸ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು. ಭಾರತದ ಸ್ವಾತಂತ್ರö್ಯದ ಕ್ರಾಂತ್ರಿಕಾರಿ ಹೋರಾಟಗಾರ ಸುಭಾಸ್ ಚಂದ್ರ ಬೋಸ್ ರವರ ಜೀವನದ ಆದರ್ಶಗಳ ಬಗ್ಗೆ ಸಂಘದ ಪ್ರಮುಖರಾದ ಪಿ.ವಿ. ರಾಜೇಂದ್ರ ಪ್ರಭುರವರು ವಿವರಿಸಿದರು. ಮಡಿಕೇರಿ, ಜ. ೨೬: ಶ್ರೀ ಭಗವಾನ್ ಸಂಘದ ವತಿಯಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ೧೨೫ ನೇ ಜನ್ಮದಿನದ ಅಂಗವಾಗಿ ಪರಾಕ್ರಮ ದಿವಸ್ ಆಚರಣೆಯನ್ನು ಶೌರ್ಯ ಜ್ಯೋತಿ ಬೆಳಗುವ ಮೂಲಕ ಆಚರಿಸಲಾಯಿತು.

ಸಂಪಾಜೆ ಪಯಸ್ವಿನಿ ಸೊಸೈಟಿ ಅಧ್ಯಕ್ಷ ಯನ್.ಸಿ. ಅನಂತ್ ಊರುಬೈಲು ಜ್ಯೋತಿ ಬೆಳಗಿ, ಮಾತನಾಡಿ ದೇಶದ ಸ್ವಾತಂತ್ರ‍್ಯ ಹೋರಾಟದಲ್ಲಿ ದೇಶದ ಬಾಹ್ಯ ಮತ್ತು ಆಂತರಿಕ ವಿರೋಧಿಗಳೊಡನೆ ಏಕಕಾಲದಲ್ಲಿ ಹೋರಾಡಿದ ನೇತಾಜಿರವರ ಹೋರಾಟದ ಪ್ರವೃತ್ತಿ, ಕೆಚ್ಚು, ಅವರ ಅಪ್ರತಿಮ ದೇಶಪ್ರೇಮ ಇಂದಿನ ಯುವಜನಾಂಗಕ್ಕೆ ಮಾದರಿಯಾಗಬೇಕೆಂದು ಕರೆ ಮಾಡಿದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ದಿನೇಶ್ ಸಣ್ಣಮನೆ, ಕಾರ್ಯದರ್ಶಿ ಯತೀಶ್ ಹನಿಯಡ್ಕ ಮತ್ತು ಸಂಘದ ಸದಸ್ಯರು ಭಾಗವಹಿಸಿದ್ದರು.

ಮೂರ್ನಾಡು

ಮೂರ್ನಾಡಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ೧೨೫ ಜನ್ಮದಿನಾಚರಣೆಯನ್ನು ಪರಾಕ್ರಮ ದಿವಸವನ್ನಾಗಿ ಆಚರಿಸಲಾಯಿತು. ದಿನದ ಮಹತ್ವವನ್ನು ಕಾಲೇಜಿನ ಉಪನ್ಯಾಸಕರಾದ ನಾಟೋಳಂಡ ನವೀನ್ ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ಬೋಧಕ ವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.ಮಡಿಕೇರಿ, ಜ. ೨೬: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ೧೨೫ ನೇ ಜನ್ಮ ದಿನವನ್ನು ಪರಾಕ್ರಮ ದಿನವಾಗಿ ಮಡಿಕೇರಿ ನಗರದ ರಾಘವೇಂದ್ರ ದೇವಾಲಯ ಸಮೀಪ ಆಚರಿಸಲಾಯಿತು.

ಸ್ಥಳೀಯ ಕಿತ್ತೂರು ಚೆನ್ನಮ್ಮ ಮಹಿಳಾ ಸಮಾಜ ಹಾಗೂ ರವಿಸೂರ್ಯ ಮಕ್ಕಳ ಬಳಗದ ವತಿಯಿಂದ ನಡೆದ ಈ ಸರಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಿಶಿತ ನಂದೀಶ್ ಆಗಮಿಸಿ ಮಾತನಾಡಿದರು. ಸಾಮಾಜಿಕ ಕಾರ್ಯಕರ್ತ ಸಂದೇಶ್ ಮಾತನಾಡಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ರಾಷ್ಟçಕ್ಕಾಗಿ ತಮ್ಮ ಜೀವನವನ್ನು ಸಮರ್ಪಿಸಿದ ಜೀವನ ಸಾಹಸ ಗಾಥೆಯನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಿತ್ತೂರು ಚೆನ್ನಮ್ಮ ಮಹಿಳಾ ಸಮಾಜದ ನಿಕಟಪೂರ್ವ ಅಧ್ಯಕೆÀ್ಷ ರಾಣಿ ಅರುಣ್, ಅಧ್ಯಕೆÀ್ಷÀ ಸೌಮ್ಯ ಜಗ್ಗೇಶ್, ಕಾರ್ಯದರ್ಶಿಗಳಾದ ಜಯಪಾಲಾಕ್ಷ, ಖಜಾಂಚಿಗಳಾದ ತಾಹೀರ, ರವಿಸೂರ್ಯ ಮಕ್ಕಳ ಬಳಗದ ರವಿಸೂರ್ಯ ವಶಿಷ್ಠ ಮತ್ತು ಬಳಗದ ಮಕ್ಕಳು ಹಾಗೂ ಸ್ಥಳಿಯ ನಿವಾಸಿಗಳು, ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು. ಗ್ರೀಷ್ಮಜ್ಯೋತಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.ಮಡಿಕೇರಿ, ಜ. ೨೬: ತಾಳತ್‌ಮನೆಯ ನೇತಾಜಿ ಯುವಕ ಹಾಗೂ ಯುವತಿ ಮಂಡಳಿ, ನೆಹರು ಯುವ ಕೇಂದ್ರ, ಮಡಿಕೇರಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಡಗು ಮತ್ತು ತಾಲೂಕು ಯುವ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಭಾರತದ ಮಹಾನ್ ಸ್ವಾತಂತ್ರö್ಯ ಯೋಧ ನೇತಾಜಿ ಸುಭಾಷ್ ಚಂದ್ರಬೋಸ್ ಇವರ ೧೨೫ನೇ ಜನ್ಮ ದಿನಾಚರಣೆಯನ್ನು ತಾಳತ್‌ಮನೆಯ ನೇತಾಜಿ ಯುವಕ ಮಂಡಲದ ಸಭಾಂಗಣದಲ್ಲಿ ಆಚರಿಸಲಾಯಿತು.

ನೇತಾಜಿ ಯುವಕ ಸಂಘದ ಹಿರಿಯ ಸಲಹೆಗಾರರಾದ ಹೆಚ್.ಎ. ಚಿಣ್ಣಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಅರೆಯಂಡ ಎನ್. ರಘು, ಅಧ್ಯಕ್ಷರು ನೇತಾಜಿ ಕ್ಷೇಮಾಭಿವೃದ್ಧಿ ನಿಧಿ ಇವರು ನೇತಾಜಿ ಸುಭಾಷ್ ಚಂದ್ರಬೋಸ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಗ್ರಾ.ಪಂ. ಸದಸ್ಯ ಪಿ.ಕೆ. ಜೀವನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನೇತಾಜಿ ಯುವಕ ಮಂಡಳದ ಅಧ್ಯಕ್ಷರು ಹಾಗೂ ನೇತಾಜಿ ಯುವತಿ ಮಂಡಳಿಯ ಉಪಾಧ್ಯಕ್ಷರು ಹಾಜರಿದ್ದರು. ದಿನದ ಮಹತ್ವದ ಬಗ್ಗೆ ಶ್ರೀಪತಿ ಆಂತರಿಕ ಲೆಕ್ಕ ಪರಿಶೋಧಕರು, ನೇತಾಜಿ ಯುವಕ ಮಂಡಲ ಇವರು ಉಪನ್ಯಾಸ ನೀಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಗಿರೀಶ್ ತಾಳತ್‌ಮನೆ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ನೇತಾಜಿ ಯುವಕ ಹಾಗೂ ಯುವತಿ ಮಂಡಳಿಯ ಸದಸ್ಯರುಗಳು, ನೇತಾಜಿ ಯುವಕ ಮಂಡಲದ ಹಿರಿಯ ಸಲಹೆಗಾರ ಸದಸ್ಯರುಗಳು ಹಾಜರಿದ್ದರು.