ಗೋಣಿಕೊಪ್ಪಲು, ಜ. ೨೬: ಗ್ರಾಮದಲ್ಲಿ ನಿರಂತರ ಕಾಡಾನೆಗಳ ಉಪಟಳದಿಂದ ಜನರು ಹೈರಾಣಾಗಿದ್ದು ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮುಂದಾಳತ್ವದಲ್ಲಿ ಬೆಂಗಳೂರಿನ ಪಿಸಿಸಿಎಫ್ ಅವರನ್ನು ಭೇಟಿ ಮಾಡಿ ಇಲ್ಲಿನ ಕಾಡಾನೆಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಉನ್ನತ ಮಟ್ಟದ ನಿಯೋಗ ತೆರಳಲು ಗ್ರಾಮಸಭೆ ಒಮ್ಮತದ ತೀರ್ಮಾನ ಕೈಗೊಂಡಿತು.

ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಿ ಸೋಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಗ್ರಾಮದ ಹಿರಿಯರಾದ ಕೊಲ್ಲಿರ ಉಮೇಶ್, ಕೊಲ್ಲಿರ ಧರ್ಮಜ, ಮುರುವಂಡ ಮುತ್ತಣ್ಣ ಸೇರಿದಂತೆ ಅನೇಕ ಹಿರಿಯ ನಾಗರಿಕರು ಗ್ರಾಮದಲ್ಲಿ ಕಾಡಾನೆಗಳ ಉಪಟಳದಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.

ಅಂತಿಮವಾಗಿ ಗ್ರಾಮದಲ್ಲಿ ಕಾಡಾನೆಗಳು ಬಾರದ ರೀತಿಯಲ್ಲಿ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳನ್ನು ಖುದ್ದು ಭೇಟಿ ಮಾಡಿ ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಿರ್ಧಾರ ತೆಗೆದುಕೊಳ್ಳಲಾಯಿತು.

ಚೆಸ್ಕಾಂ ಅಧಿಕಾರಿಗಳು ಗ್ರಾಮ ಸಭೆಗೆ ಆಗಮಿಸದೇ ಇರುವುದನ್ನು ಪ್ರಶ್ನಿಸಲಾಯಿತು. ನಿರಂತರ ವಿದ್ಯುತ್ ಅಡಚಣೆ, ಹೆಚ್ಚಾಗಿ ವಿದ್ಯುತ್ ಬಿಲ್ ಬರುತ್ತಿರುವ ಬಗ್ಗೆ ಗ್ರಾಮಸ್ಥರು ಸಭೆಯ ಗಮನ ಸೆಳೆದರು.

ಈ ವೇಳೆ ಗ್ರಾ.ಪಂ. ಉಪಾಧ್ಯಕ್ಷ ರಾದ ಕೊಲ್ಲಿರ ಧನು ಪೂಣಚ್ಚ ಮಧ್ಯ ಪ್ರವೇಶಿಸಿ ಈ ಬಗ್ಗೆ ಚೆಸ್ಕಾಂ ಅಧಿಕಾರಿಗಳ ಗಮನ ಸೆಳೆದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಇದರಿಂದಾಗಿ ಬಡ ಜನರಿಗೆ ಸಿಗಬೇಕಾದ ವಿವಿಧ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ, ಬಡವರ ಕಷ್ಟಕ್ಕೆ ಸ್ಪಂದಿಸುವAತೆ ಒತ್ತಾಯಿಸಲಾಯಿತು.

ಪಿಡಿಒ ಎಂ.ಡಿ. ಶ್ರೀನಿವಾಸ್ ಗೌಡ ಮಾತನಾಡಿ, ಸರ್ಕಾರದ ಯೋಜನೆಗಳಾದ ಜಲ್ ಜೀವನ್ ಮಿಷನ್, ಉದ್ಯೋಗ ಖಾತ್ರಿ ಯೋಜನೆ, ವೈಯಕ್ತಿಕ ಫಲಾನುಭವಿಗಳ ಆಯ್ಕೆಯ ಅರ್ಹತೆ ಇವುಗಳ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ಒದಗಿಸಿದರು.

ಅಂತಿಮವಾಗಿ ೩೦ ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಇವರುಗಳಿಗೆ ಮನೆ ಮಂಜೂರು ಮಾಡಲು ಹಾಗೂ ೧೫ನೇ ಹಣಕಾಸು ಸೇರಿದಂತೆ ಇನ್ನಿತರ ಕಾಮಗಾರಿಯನ್ನು ನಡೆಸಲು ಗ್ರಾಮಸಭೆ ಒಪ್ಪಿಗೆ ಸೂಚಿಸಿತು.

ನೋಡಲ್ ಅಧಿಕಾರಿಯಾಗಿ ಮೀನುಗಾರಿಕಾ ಇಲಾಖೆಯ ಅಧಿಕಾರಿ ಸಚಿನ್ ಭಾಗವಹಿಸಿದ್ದರು. ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು.

ಸಭೆಯಲ್ಲಿ ಹಿರಿಯ ನಾಗರಿಕರಾದ ಕೊಂಗAಡ ಜಪ್ಪು, ಚಂಡಿರ ಬೋಪಣ್ಣ, ಕೊಂಗAಡ ಕರುಂಬಯ್ಯ, ಕಂಬೀರAಡ ಬೋಪಣ್ಣ, ಸೇರಿದಂತೆ ಸದಸ್ಯರಾದ ವಿ.ವಿ. ಪ್ರಕಾಶ್, ರತ್ನ ಸುಬ್ಬಯ್ಯ, ವಿಶಾಲಾಕ್ಷಿ, ಎಂ.ಎನ್. ಮಾದಯ್ಯ, ಲಕ್ಷ್ಮಿ, ಮಹೇಶ್ವರಿ, ಪಿ.ಎನ್. ಮಹದೇವ, ಮಧು, ಟಿ.ಎಂ. ಸುಶೀಲಾ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.