ವೀರಾಜಪೇಟೆ, ಜ. ೨೬: ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು. ಸಮಾನತೆ ಮತ್ತು ಏಕತೆಯ ಪ್ರತೀಕವಾದ ಸಂವಿಧಾನ ಶಾಸನಗಳಿಂದ ದೇಶದ ಸಮಗ್ರ ಅಭಿವೃದ್ಧಿ ಸಾದ್ಯ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಹೇಳಿದರು.

ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಆಡಳಿತ ಆಶ್ರಯದಲ್ಲಿ ನಗರದ ತಾಲೂಕು ಮೈದಾನದಲ್ಲಿ ನಡೆದ ೭೩ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಧ್ವಜ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಶಾಸಕಾಂಗ, ನ್ಯಾಯಾಂಗ, ಮತ್ತು ಕಾರ್ಯಾಂಗಗಳ ಕಾರ್ಯವಿಧಾನಗಳ ಸಮುಚ್ಚಯದ ಗುಚ್ಚವೇ ಸಂವಿಧಾನ. ಸಂವಿಧಾನದ ಸಮಗ್ರತೆಯನ್ನು ಎತ್ತಿಹಿಡಿಯುವ ಮೂಲಕ ಗಣರಾಜ್ಯೋತ್ಸವ ದಿನವನ್ನು ಆಚರಿಸಬೇಕಾಗಿದೆ. ಸಂವಿಧಾನ ರಚಿಸಿದ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ತ್ಯಾಗ ಬಲಿದಾನ ಮಾಡಿದ ವೀರ ಸ್ವತಂತ್ರ ಸೇನಾನಿಗಳನ್ನು ಸ್ಮರಿಸಬೇಕಾಗಿದೆ. ಏಳು ದಶಕಗಳಲ್ಲಿ ದೇಶವು ಸರ್ವತೋಮುಖ ಅಭಿವೃದ್ಧಿ ಸಾಧಿಸುವಲ್ಲಿ ಕಠಿಣ ಹಾದಿಗಳನ್ನು ಕ್ರಮಿಸಿದೆ. ಪ್ರತಿಯೊಬ್ಬರು ದೇಶದ ಅಭಿವೃದ್ಧಿಯಲ್ಲಿ ಕೈಜೋಡಿಸಿದಲ್ಲಿ ದೇಶವು ಉನ್ನತಿಯತ್ತ ಸಾಗುವುದು ಶತಸಿದ್ಧ. ಕೋವಿಡ್‌ನ ಮೂರನೆ ಅಲೆಯು ಇದ್ದರು ದಿಟ್ಟವಾಗಿ ಎದುರಿಸುವ ಕಾರ್ಯಕ್ಷಮತೆ ದೇಶದಲ್ಲಿದೆ. ಅಭಿವೃದ್ಧಿಶೀಲ ರಾಷ್ಟç ನಿರ್ಮಾಣ ಮಾಡುವಲ್ಲಿ ನಾವುಗಳು ಭಾಗಿಗಳಾಗುವ ಎಂದು ಕರೆ ನೀಡಿದರು.

ವೀರಾಜಪೇಟೆ ತಾಲೂಕು ಉಪತಹಶೀಲ್ದಾರ್ ಪೊನ್ನು ಮಾತನಾಡಿ, ಸಂವಿಧಾನವು ಎಲ್ಲಾ ಪ್ರಜೆಗಳಿಗೂ ಸಮಾನ ಹಕ್ಕುಗಳನ್ನು ನೀಡಿದೆ ಹಾಗೂ ಪ್ರತಿಯೊಬ್ಬ ಪ್ರಜೆಯ ಕರ್ತವ್ಯಗಳನ್ನು ತಿಳಿಸುತ್ತದೆ. ದೇಶದ ನೆಲ, ಜಲ, ಸಂಪತ್ತು ಸಂರಕ್ಷಣೆ ಮಾಡಲು ಪಣತೊಡಬೇಕು. ದೇಶ ಸಂವಿಧಾನವನ್ನು ಗೌರವಿಸೋಣ, ಸ್ವತಂತ್ರ ತಂದುಕೊಟ್ಟ ಹಿರಿಯರನ್ನು ಸ್ಮರಿಸೋಣ ಎಂದರು.

ಸಂತ ಅನ್ನಮ್ಮ ಶಾಲೆಯ ವಿದ್ಯಾರ್ಥಿಗಳಿಂದ ನಾಡಗೀತೆ ಮತ್ತು ಜಯಪ್ರಕಾಶ್ ನಾರಾಯಣ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ರೈತಗೀತೆ ಸಮಾರಂಭದ ವೇದಿಕೆಯಲ್ಲಿ ಪ್ರಸ್ತುತವಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ತಹಶೀಲ್ದಾರ್ ಪ್ರದೀಪ್ ಕುಮಾರ್, ವೀರಾಜಪೇಟೆ ವೃತ್ತ ನಿರೀಕ್ಷಕ ಬಿ.ಎಸ್. ಶ್ರೀಧರ್, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ವಿನಾಂಕ್ ಕುಟ್ಟಪ್ಪ, ನಗರ ಆರಕ್ಷಕ ಠಾಣೆಯ ಠಾಣಾಧಿಕಾರಿ ಜಗದೀಶ್ ಧೂಳ ಶೆಟ್ಟಿ, ಶಿಕ್ಷಣ ಇಲಾಖೆಯ ದೈಹಿಕ ಪರಿವೀಕ್ಷಕಿ ಗಾಯತ್ರಿ ಮತ್ತು ಕಂದಾಯ ಇಲಾಖೆಯ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕ್ಷೇತ್ರ ಶಿಕ್ಷಣಾ ಸಮನ್ವಯಾಧಿಕಾರಿಗಳಾದ ಶ್ರೀಮತಿ ವನಜಾಕ್ಷಿ ಅವರು ಸ್ವಾಗತಿಸಿದರು. ಅಮ್ಮತ್ತಿ ಒಂಟಿಅAಗಡಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಎ.ವಿ. ಮಂಜುನಾಥ್ ಅವರು ಕಾರ್ಯಕ್ರಮದ ನಿರೂಪಣೆ ಮತ್ತು ವಂದನಾರ್ಪಣೆಯನ್ನು ನೆರವೇರಿಸಿದರು.

-ಕಿಶೋರ್ ಕುಮಾರ್ ಶೆಟ್ಟಿ