ಭಾಗಮಂಡಲ, ಜ. ೨೫: ಕುಂದಚೇರಿ ಗ್ರಾಮ ಪಂಚಾಯಿತಿ ನೂತನ ಕಟ್ಟಡದ ಭೂಮಿ ಪೂಜೆಯನ್ನು ಶಾಸಕ ಕೆ.ಜಿ. ಬೋಪಯ್ಯ ನೆರವೇರಿಸಿದರು. ರೂ. ೩೧ಲಕ್ಷ ಅನುದಾನದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದ್ದು, ಮೂರು ಅಂತಸ್ತಿನ ಕಟ್ಟಡಕ್ಕೆ ಒಟ್ಟು ರೂ. ೮೦ ಲಕ್ಷ ವೆಚ್ಚವಾಗಲಿದೆ.

೧೪ನೇ ಹಣಕಾಸು, ೧೫ನೇ ಹಣಕಾಸು ಉದ್ಯೋಗ ಖಾತ್ರಿ ರಾಜೀವ್ ಗಾಂಧಿ ಸಶಸ್ತಿçÃಕರಣ, ಮತ್ತು ಡಿಜಿಟಲ್ ಲೈಬ್ರರಿ ಅನುದಾನದಲ್ಲಿ ಮೂರಂತಸ್ತಿನ ಕಟ್ಟಡ ನಿರ್ಮಿಸುವಂತೆ ಪಂಚಾಯಿತಿ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಭೂಮಿ ಪೂಜೆ ಸಂದರ್ಭ ಸ್ಥಳ ದಾನಿಗಳಾದ ಅಮ್ಮವನ ಮತ್ತು ಕೇಕಡ ಕುಟುಂಬಸ್ಥರು, ಅಮ್ಮವ್ವನ ವಾಸು, ಕೇಕಡ ರಾಮಯ್ಯ, ಇಂದುಮತಿ ರವೀಂದ್ರ, ಜಾನಕಿ ಈಶ್ವರ, ಕೇಕಡ ಜಯವಿಜಯ, ಕರ್ನಾಟಕ ಪಶ್ಚಿಮಘಟ್ಟ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ, ಪಂಚಾಯಿತಿ ಅಧ್ಯಕ್ಷೆ ಸಿ.ಯು ಸವಿತ, ಉಪಾಧ್ಯಕ್ಷ ವಿಶುಕುಮಾರ್, ಮಂಗೇರಿರ ಜಗದೀಶ್, ಕಾಂಡAಡ ಭೀಮಯ್ಯ, ಕೆದಂಬಾಡಿ ಜಯಪ್ರಕಾಶ್, ಪಿ.ಯು. ಮಹಮ್ಮದ್, ಪಿಡಿಓ ಗೀತಾಂಜಲಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.