ಮಡಿಕೇರಿ, ಜ. ೨೬: ರೈತರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಶಿಕ್ಷಣ ಪಡೆಯುವಂತೆ ಮಾಡುವ ನಿಟ್ಟಿನಲ್ಲಿ ಹೊಸದಾಗಿ ಶಿಷ್ಯವೇತನ ನೀಡಲು ಸರ್ಕಾರ ತೀರ್ಮಾನಿಸಿದ್ದು, ಇದಕ್ಕಾಗಿ ಒಂದು ಸಾವಿರ ಕೋಟಿ ಹಣವನ್ನು ಮೀಸಲಿಡಲು ನಿರ್ಧರಿಸಿದೆ ಎಂದು ಶಿಕ್ಷಣ ಸಚಿವ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಹೇಳಿದರು.

ಕೊಡಗು ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ೭೩ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಗೌರವವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಭಾರತದ ಸಂವಿಧಾನವು ಈ ದೇಶದಲ್ಲಿ ಸ್ವತಂತ್ರವಾಗಿ ಜೀವಿಸಲು ವೈಚಾರಿಕವಾಗಿ ಚಿಂತಿಸಲು ಸತ್ಪçಜೆಗಳಾಗಿ ಬದುಕಲು ನಮಗೆ ಅತ್ಯಮೂಲ್ಯವಾದ ಮೂಲಭೂತ ಹಕ್ಕುಗಳನ್ನು ನೀಡಿದೆ. ಅದೇ ರೀತಿ ಈ ದೇಶದ ಪ್ರಜೆಗಳಾಗಿ ನಮ್ಮ ಜವಾಬ್ದಾರಿಯನ್ನು ನೆನಪಿಸಲು ನಮಗೆ ಮೂಲಭೂತ ಕರ್ತವ್ಯಗಳನ್ನು ನೀಡಿದೆ. ನಮ್ಮ ಹಕ್ಕುಗಳು ಮತ್ತು ನಮ್ಮ ಕರ್ತವ್ಯಗಳನ್ನು ಸಮನ್ವಯತೆಯಿಂದ ಹೊಂದಿಸಿಕೊAಡು ಭಾರತವನ್ನು ವಿಶ್ವದಲ್ಲಿ ಒಂದು ಮಾದರಿ ದೇಶವಾಗಿ ಕಟ್ಟುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ಭಾರತದಲ್ಲಿ ಎಲ್ಲಾ ಧರ್ಮ, ಸಮುದಾಯ, ಚಿಂತನೆಗಳಿಗೆ ಸೇರಿದ ಜನರು ದೇಶದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ಸದುದ್ದೇಶದಿಂದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ರಾಷ್ಟçದ ಅಭಿವೃದ್ಧಿಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಪ್ರಕಟಿಸಿದ್ದಾರೆ. ಉದ್ಯೋಗ ಅವಕಾಶ, ಕೈಗಾರಿಕೆಗಳ ಉತ್ಪಾದಕತೆ ಹೆಚ್ಚಿಸುವ ಉದ್ದೇಶದಿಂದ ಸಮಗ್ರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ, ‘ಗತಿಶಕ್ತಿ’ ಯೋಜನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸ್ವಾತಂತ್ರೊö್ಯÃತ್ಸವದ ಸಂದರ್ಭದಲ್ಲಿ ಪ್ರಕಟಿಸಿದ್ದಾರೆ. ಈ ಮಹತ್ವಾಕಾಂಕ್ಷಿ ಯೋಜನೆಯ ಅಡಿಯಲ್ಲಿ ರೂ. ೧೦೦ ಲಕ್ಷ ಕೋಟಿ ವೆಚ್ಚ ಮಾಡುವ ಗುರಿ ಹೊಂದಿರುವುದು ಪ್ರಧಾನಮಂತ್ರಿ ಅವರ ದೂರದೃಷ್ಟಿಯನ್ನು ಸಾರುತ್ತದೆ.

ಲಕ್ಷಾಂತರ ಯುವಕರಿಗೆ ಹೊಸ ಉದ್ಯೋಗಾವಕಾಶ ಸೃಷ್ಟಿಸುವಲ್ಲಿ ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟಿçÃಯ ಯೋಜನೆಯು ಸಹಕಾರಿಯಾಗಲಿದೆ. ಇದು ದೇಶದಲ್ಲಿನ ಮೂಲಸೌಕರ್ಯ ಯೋಜನೆಗಳಿಗೆ ಅಡಿಪಾಯ ಹಾಕುವ ಮಹಾಯೋಜನೆ ಆಗಿದೆ. ‘ಗತಿಶಕ್ತಿ’ ಯೋಜನೆಯು ಕೈಗಾರಿಕೆಗಳಲ್ಲಿನ ಉತ್ಪಾದಕತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ದೇಶದ ತಯಾರಿಕಾ ವಲಯವು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಸ್ಪರ್ಧಾತ್ಮಕ ಆಗುವಲ್ಲಿ ನೆರವಾಗಲಿದೆ. ‘ಎಲ್ಲರ ಜೊತೆಗೆ ಎಲ್ಲರ ಏಳ್ಗೆ’ ಎಂಬ ಘೋಷಣೆೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಆಶಯವನ್ನು ಈಡೇರಿಸಲಿದೆ ಎಂದು ನಾಗೇಶ್ ವಿಶ್ವಾಸ ವ್ಯಕ್ತಪಡಿಸಿದರು.

ಪರೀಕ್ಷೆಗೆ ತಯಾರಾಗಿ

ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ವಹಿಸಿಕೊಂಡ ನಂತರ ಹಲವು ಅಭಿವೃದ್ಧಿ ಕಾರ್ಯಗಳನ್ನು ಪ್ರಕಟಿಸಿದ್ದಾರೆ. ರಾಜ್ಯದಲ್ಲಿ ಶಿಕ್ಷಕರ ಕೊರತೆ ನೀಗಿಸಲು ‘ಕಲ್ಯಾಣ ಕರ್ನಾಟಕ’ ಭಾಗಕ್ಕೆ ಭಾರತ ಸಂವಿಧಾನದ ಅನುಚ್ಛೇದ ೩೭೧ ಜೆ ಅನುಸಾರ ೫ ಸಾವಿರ ಶಿಕ್ಷಕರು ಸೇರಿದಂತೆ ಒಟ್ಟು ೧೫ ಸಾವಿರ ಶಿಕ್ಷಕರನ್ನು ನೇಮಕ ಮಾಡಿ ಕೊಳ್ಳಲಾಗುತ್ತಿದೆ. ದೇಶದ ಶಿಕ್ಷಣ ವ್ಯವಸ್ಥೆಯಲ್ಲಿನ ವ್ಯಾಪಕ ಸುಧಾರಣೆ ತರುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ರಾಷ್ಟಿçÃಯ ಶಿಕ್ಷಣ ನೀತಿ-೨೦೨೦ನ್ನು ಮುಂದಿನ ವರ್ಷದಿಂದ ಕರ್ನಾಟಕದಲ್ಲಿ ಅನುಷ್ಠಾನಗೊಳಿಸುವ ಗುರಿ ಹೊಂದಲಾಗಿದೆ. ಮೊದಲ ಹಂತದಲ್ಲಿ ಪೂರ್ವ ಪ್ರಾಥಮಿಕ ಶಾಲೆಯಿಂದ ಅಂದರೆ ಪೂರ್ವ ಬಾಲ್ಯವ್ಯವಸ್ಥೆ ಶಿಕ್ಷಣ ಮತ್ತು ಆರೈಕೆ ಹಂತದಲ್ಲಿ ರಾಷ್ಟಿçÃಯ ಶಿಕ್ಷಣ ನೀತಿಯನ್ನು ಅನುಷ್ಠಾನ ಗೊಳಿಸಲಾಗುತ್ತದೆ. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ಮುಖ್ಯ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಯನ್ನು ಬಿಡುಗಡೆ ಮಾಡಲಾಗಿದ್ದು, ಕೋವಿಡ್ ಸುರಕ್ಷತಾ ಕ್ರಮಗಳೊಂದಿಗೆ ಪರೀಕ್ಷೆ ನಡೆಸಲಾಗುತ್ತದೆ. ಮಕ್ಕಳು ಪರೀಕ್ಷೆ ಬರೆಯಲು ಸಿದ್ಧತೆ ಮಾಡಿಕೊಳ್ಳಬೇಕು ಎಂದರು.

ಸಂಧ್ಯಾ ಸುರಕ್ಷಾ ಯೋಜನೆ ಅಡಿ ನೀಡುತ್ತಿದ್ದ ಮಾಸಾಶನವನ್ನು

ರೂ. ೧,೦೦೦ದಿಂದ ೧,೨೦೦ಕ್ಕೆ ಹೆಚ್ಚಿಸಲಾಗಿದೆ. ವಿಧವಾ ವೇತನದ ಅಡಿ ನೀಡಲಾಗುತ್ತಿದ್ದ ಮಾಸಾಶನ ರೂ. ೬೦೦ ರಿಂದ ರೂ. ೮೦೦ಕ್ಕೆ ಹೆಚ್ಚಿಸಿರುವುದರಿಂದ ಸುಮಾರು ೧೭.೨೫ ಲಕ್ಷ ಫಲಾನುಭವಿಗಳಿಗೆ ಇದರ ಪ್ರಯೋಜನ ದೊರೆಯಲಿದೆ. ವಿಶೇಷಚೇತನ ಯೋಜನೆ ಅಡಿ ಶೇ.೪೦ ರಿಂದ ೭೫ರಷ್ಟು ವಿಕಲತೆ ಹೊಂದಿರುವವರಿಗೆ

(ಮೊದಲ ಪುಟದಿಂದ) ನೀಡುತ್ತಿದ್ದ ಮಾಸಾಶನವನ್ನು ರೂ. ೬೦೦ರಿಂದ ರೂ. ೮೦೦ಕ್ಕೆ ಹೆಚ್ಚಿಸಿರುವುದರಿಂದ ಸುಮಾರು ೩.೬೬ ಲಕ್ಷ ಫಲಾನುಭವಿಗಳಿಗೆ ಈ ಪ್ರಯೋಜನ ದೊರೆಯಲಿದೆ. ಆಯುಷ್ಮಾನ್ ಭಾರತ್ ಯೋಜನೆ ಮೂಲಕ ಯಾವುದೇ ಚಿಕಿತ್ಸೆಗೆ ರೂ. ೫ ಲಕ್ಷ ಆರೋಗ್ಯ ವಿಮೆ ಜನಸಾಮಾನ್ಯರ ಬದುಕಿನಲ್ಲಿ ಹೊಸ ಭದ್ರತೆ ತಂದುಕೊಟ್ಟಿದೆ. ನಾಗರಿಕರಿಗೆ ಸಮಯದ ಉಳಿತಾಯಕ್ಕೆ ಅನುಕೂಲವಾಗುವಂತೆ ಮತ್ತು ವಿಶೇಷವಾಗಿ ಹಿರಿಯ ನಾಗರಿಕರಿಗೆ ಮತ್ತು ದಿವ್ಯಾಂಗರಿಗೆ ನೆರವಾಗಲು ೫೮ ಅಧಿಕ ನಾಗರಿಕ ಸೇವೆಗಳನ್ನು ಮನೆಬಾಗಿಲಿಗೆ ಒದಗಿಸಲು ‘ಜನಸೇವಕ’ ಯೋಜನೆ ಜಾರಿಯಾಗಿದೆ.

ಕೋವಿಡ್-೧೯ರ ಉತ್ತಮ ನಿರ್ವಹಣೆಗಾಗಿ ಇಂಡಿಯಾ ಟುಡೇ ಹೆಲ್ತ್ಗಿರಿ ಪ್ರಶಸ್ತಿ ಬಂದಿದೆ. ರಾಜ್ಯದಲ್ಲಿ ೨೫೦ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೆ ಏರಿಸಲಾಗಿದೆ. ರಾಜ್ಯದಲ್ಲಿ ದಾಖಲೆ ಪ್ರಮಾಣದಲ್ಲಿ ಕೋವಿಡ್ ಪ್ರತಿರೋಧ ಲಸಿಕೆ ನೀಡಿರುವುದು ವಿಶೇಷವಾಗಿದೆ. ಕೋವಿಡ್ -೧೯ ನಿಯಂತ್ರಣ ಸಂಬAಧಿಸಿದAತೆ ಜಿಲ್ಲೆಯಲ್ಲಿ ಅಗತ್ಯ ಕ್ರಮವಹಿಸಲಾಗಿದ್ದು, ಇದುವರೆಗೆ ೧೫ ವರ್ಷ ಮೇಲ್ಪಟ್ಟ ೪,೨೩,೧೧೫ ಮಂದಿಯಲ್ಲಿ ೪,೨೯,೯೯೬ ಮಂದಿಗೆ ಪ್ರಥಮ ಡೋಸ್ ಕೋವಿಡ್ ನಿರೋಧಕ ಲಸಿಕೆ ನೀಡಿ, ಶೇ.೧೦೦ಕ್ಕಿಂತ ಹೆಚ್ಚು ಸಾಧನೆ ಮಾಡಲಾಗಿದೆ. ಹಾಗೆಯೇ ೩,೮೨,೮೮೩ ಮಂದಿ ಎರಡನೇ ಡೋಸ್ ಪಡೆದು ಶೇ.೯೦ಕ್ಕಿಂತ ಹೆಚ್ಚು ಮಂದಿ ಜನವರಿ ೧೩ರವರೆಗೆ ಎರಡನೇ ಡೋಸ್ ಪಡೆದಿದ್ದಾರೆ.

ಪ್ರತೀ ತಾಲೂಕಿನಲ್ಲಿ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಆಮ್ಲಜನಕ ಪೂರೈಕೆ ವ್ಯವಸ್ಥೆ ಇರುವ ೬೮೦ ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ೫೦ ವೆಂಟಿಲೇಟರ್, ೫೦ ಐಸಿಯು ಬೆಡ್‌ಗಳು ಜಿಲ್ಲಾಸ್ಪತ್ರೆಯಲ್ಲಿದೆ. ಜಿಲ್ಲಾ ವೈದ್ಯಕೀಯ ಕಾಲೇಜಿನಲ್ಲಿ ಎರಡು ಆಮ್ಲಜನಕ ಘಟಕ ಸ್ಥಾಪಿಸಲಾಗಿದೆ. ಕೋವಿಡ್ -೧೯ ಲಸಿಕಾ ಅಭಿಯಾನದಲ್ಲಿ ಕೊಡಗು ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಈಗ ಬೂಸ್ಟರ್ ಡೋಸ್‌ನ್ನು ಮುಂಚೂಣಿ ಕಾರ್ಯಕರ್ತರಿಗೆ ನೀಡಲಾಗುತ್ತಿದೆ.

ನೂರು ಪಡಿತರ ಚೀಟಿಗಳಿರುವ ಎಲ್ಲಾ ಹಾಡಿ, ತಾಂಡಾ, ಗೊಲ್ಲರಹಟ್ಟಿ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಗಳ ಕಾಲೋನಿಗಳಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ತಳ ಸಮುದಾಯಗಳಿಗೆ, ಅದರಲ್ಲೂ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ತಿಂಗಳ ಪಡಿತರ ಸರಿಯಾಗಿ ತಲುಪುವಂತೆ ಮಾಡುವ ದಿಸೆಯಲ್ಲಿ ಇದೊಂದು ಸ್ವಾಗತಾರ್ಹ ಹೆಜ್ಜೆಯಾಗಿದೆ ಎಂದು ಸಚಿವರು ಹೇಳಿದರು.

ಕೃಷಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕೃಷಿ ಸಂಚಾರ ಯೋಜನೆಯಡಿ ೬೦೪ ತುಂತುರು ನೀರಾವರಿ ಘಟಕಗಳನ್ನು ಎಲ್ಲಾ ವರ್ಗದ ರೈತರಿಗೆ ಶೇ.೯೦ರಷ್ಟು ಸಹಾಯಧನದಡಿ ವಿತರಿಸಲಾಗುತ್ತಿದೆ.

೨೦೨೧-೨೨ನೇ ಸಾಲಿನಲ್ಲಿ ಮುಖ್ಯಮಂತ್ರಿ ಅವರ ಅಮೃತ ಜೀವನ ಯೋಜನೆಯಡಿ ಮಿಶ್ರ ತಳಿ ಹಸು ಸಾಕಾಣಿಕೆಗಾಗಿ ಜಿಲ್ಲೆಗೆ ೩೦ ಭೌತಿಕ ಗುರಿ ಹಾಗೂ ಆರ್ಥಿಕ ರೂ.೩.೭೫ ಲಕ್ಷ ಸಹಾಯಧನ ನಿಗಧಿಪಡಿಸಲಾಗಿದೆ. ಇದರಲ್ಲಿ ಸಾಮಾನ್ಯರಿಗೆ ೨೫, ಪರಿಶಿಷ್ಟ ಜಾತಿಗೆ ೩ ಮತ್ತು ಪರಿಶಿಷ್ಟ ಪಂಗಡದವರಿಗೆ ೨ ಗುರಿಗಳಂತೆ ನಿಗದಿಪಡಿಸಲಾಗಿದೆ.

೨೦೨೧-೨೨ನೇ ಸಾಲಿನಲ್ಲಿ ಅಮೃತಸಿರಿ ಯೋಜನೆಯಡಿ ಜಾನುವಾರು ಕ್ಷೇತ್ರಗಳಲ್ಲಿ ಲಭ್ಯವಿರುವ ಹೆಣ್ಣು ಕರುಗಳನ್ನು ರೈತರಿಗೆ ಸಾಕಲು ಪುಸ್ತಕದ ಬೆಲೆಯ ಶೇ.೨೫ರಂತೆ ಜಿಲ್ಲೆಯಲ್ಲಿ ೧೬ ಜರ್ಸಿ ಹೆಣ್ಣು ಕರುಗಳು ಲಭ್ಯವಿದ್ದು, ಆಯ್ಕೆಯಾದ ರೈತ ಫಲಾನುಭವಿಗಳಿಗೆ ರಿಯಾಯಿತಿ ದರದಲ್ಲಿ ವಿತರಣೆಗೆ ಕ್ರಮ ವಹಿಸಿದೆ.

ರೂ.೩೬ ಲಕ್ಷದಲ್ಲಿ ಗೋಶಾಲೆ

ರಾಜ್ಯ ಸರ್ಕಾರದಿಂದ ಜಿಲ್ಲೆಗೊಂದು ಗೋಶಾಲೆ ತೆರೆಯುವ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಗೆ ರೂ. ೩೬ ಲಕ್ಷ ಬಿಡುಗಡೆಯಾಗಿದ್ದು, ಈಗಾಗಲೇ ಜಲ್ಲೆಯಲ್ಲಿ ಗೋಶಾಲೆ ಪ್ರಾರಂಭಿಸಲು ಜಾಗ ಗುರುತಿಸಲಾಗಿದ್ದು, ಗೋಶಾಲೆ ಪ್ರಾರಂಭಿಸಲು ಕ್ರಮವಹಿಸಲಾಗಿದೆ.

ನಗರಾಭಿವೃದ್ಧಿ ಕೋಶದಿಂದ ಪೌರ ಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ಕೊಡಗು ಜಿಲ್ಲೆಯ ನಾಲ್ಕು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು ೪೪ ಪೌರ ಕಾರ್ಮಿಕರು ಫಲಾನುಭವಿಗಳಾಗಿ ಆಯ್ಕೆಯಾಗಿದ್ದು, ರೂ. ೧೭೨.೩ ಲಕ್ಷ ಅನುದಾನ ಸರ್ಕಾರದಿಂದ ಬಿಡುಗಡೆ ಮಾಡಲಾಗಿರುತ್ತದೆ. ಒಟ್ಟು ೨೨ ಪೌರ ಕಾರ್ಮಿಕರ ಫಲಾನುಭವಿಗಳ ಮನೆ ನಿರ್ಮಾಣ ಪೂರ್ಣಗೊಂಡಿದ್ದು, ೨ ಫಲಾನುಭವಿಗಳ ಮನೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

ಅಮೃತ್ ನಿರ್ಮಲ ನಗರ ಯೋಜನೆಯಡಿ ಘನತ್ಯಾಜ್ಯ ನಿರ್ವಹಣೆಗಾಗಿ ಮಡಿಕೇರಿ ನಗರಸಭೆ ಮತ್ತು ವೀರಾಜಪೇಟೆ ಪಟ್ಟಣ ಪಂಚಾಯಿತಿಗಳಿಗೆ ತಲಾ ರೂ. ೧೦೦ ಲಕ್ಷಗಳು ಮಂಜೂರಾಗಿದ್ದು, ಕ್ರಿಯಾಯೋಜನೆ ರೂಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

೨೦೨೧-೨೨ನೇ ಸಾಲಿನ ಪ್ರಗತಿ ಕಾಲೋನಿ ಯೋಜನೆಯಡಿ ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರದಿಂದ ರೂ. ೨೦೦ ಲಕ್ಷಗಳು ಮಂಜೂರಾಗಿದ್ದು, ಆಡಳಿತಾತ್ಮಕ ಅನುಮೋದನೆಗಾಗಿ ಕ್ರಮ ಕೈಗೊಳ್ಳಲಾಗಿದೆ.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಅರಣ್ಯ ಹಕ್ಕು ಕಾಯ್ದೆಯಡಿ ಈಗಾಗಲೇ ೧೭೬೨ ಪರಿಶಿಷ್ಟ ಪಂಗಡದ ಅರಣ್ಯ ವಾಸಿಗಳಿಗೆ ಮತ್ತು ೨೯೧ ಇತರೆ ಪಾರಂಪರಿಕ ಅರಣ್ಯ ವಾಸಿಗಳಿಗೆ ವೈಯಕ್ತಿಕ ಅರಣ್ಯ ಹಕ್ಕುಗಳನ್ನು ಮಂಜೂರು ಮಾಡಲಾಗಿದೆ ಹಾಗೂ ೪೫ ಸಮುದಾಯ ಸಂಪನ್ಮೂಲ ಹಕ್ಕುಗಳನ್ನು ಮಂಜೂರು ಮಾಡಲಾಗಿದೆ.

ಗಿರಿಜನ ಬಾಲಕರ ವಿದ್ಯಾರ್ಥಿನಿಲಯ ಪಾಲಿಬೆಟ್ಟದ ಕಟ್ಟಡ ನಿರ್ಮಾಣವನ್ನು ರೂ. ೨೮೦ ಲಕ್ಷ ಮೊತ್ತಕ್ಕೆ ಪೂರ್ಣಗೊಳಿಸಲಾಗಿದೆ.

ಕೆದಮುಳ್ಳೂರು ಗ್ರಾಮದಲ್ಲಿ ೧೨೯ ಪರಿಶಿಷ್ಟ ಪಂಗಡದ ನಿವೇಶನ ರಹಿತ ಕುಟುಂಬಗಳಿಗೆ ರೂ. ೫ ಲಕ್ಷ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಜಲಜೀವನ್ ಮಿಷನ್ ಯೋಜನೆಯಡಿ ಜಲ್ ಜೀವನ್ ಮಿಷನ್ ಯೋಜನೆ ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು, ೨೦೨೪ರ ಇಸವಿಯೊಳಗೆ ಶುದ್ಧ ಕುಡಿಯುವ ನೀರನ್ನು ಪ್ರತಿ ವ್ಯಕ್ತಿಗೆ ಪ್ರತಿ ದಿನ ೫೫ ಐಪಿಸಿಡಿರಂತೆ ಗ್ರಾಮೀಣ ಪ್ರದೇಶದ ಎಲ್ಲಾ ಜನವಸತಿಯಲ್ಲಿನ ಮನೆಗಳಿಗೆ ಕಾರ್ಯಾತ್ಮಕ ನಳನೀರು ಸಂಪರ್ಕ ಎಫ್‌ಎಚ್‌ಟಿಸಿ ಕಲ್ಪಿಸುವ ಗುರಿ ಹೊಂದಲಾಗಿದೆ. ಕೊಡಗು ಜಿಲ್ಲೆಯಲ್ಲಿ ಒಟ್ಟು ೫೮೮ ಜನವಸತಿಗಳಿದ್ದು, ಒಟ್ಟು ೧,೩೭,೭೯೩ ಮನೆಗಳಿರುತ್ತವೆ. ಇದರಲ್ಲಿ ಮಾರ್ಚ್-೨೦೨೧ರ ಅಂತ್ಯಕ್ಕೆ ಒಟ್ಟು ೪೯,೯೩೨ ಗ್ರಾಮೀಣ ಮನೆಗಳಿಗೆ ನಲ್ಲಿ ನೀರು ಸಂಪರ್ಕ ಹೊಂದಿದ್ದು, ಉಳಿದ ೮೭,೮೬೧ ಮನೆಗಳಿಗೆ ಹೊಸದಾಗಿ ನಳ ನೀರು ಸಂಪರ್ಕ ಒದಗಿಸಬೇಕಿದೆ.

ಗ್ರಾಮೀಣ ವಸತಿ ಯೋಜನೆಯಡಿ ಗ್ರಾಮೀಣ ಭಾಗದ ಜನರಿಗೆ ಮನೆ ನಿರ್ಮಿಸಲು ಸರ್ಕಾರ ವಿಶೇಷ ಒತ್ತು ನೀಡಲಾಗಿದ್ದು, ವಿವಿಧ ವಸತಿ ಯೋಜನೆಯಡಿ ಇಲ್ಲಿಯವರೆಗೆ ಜಿಲ್ಲೆಯಲ್ಲಿ ೧೪,೧೫೬ ಫಲಾನುಭವಿಗಳನ್ನು ಆಯ್ಕೆಗೊಳಿಸಲಾಗಿದ್ದು, ೧೦,೦೩೧ ಮನೆಗಳು ಪೂರ್ಣಗೊಂಡಿದ್ದು, ೨,೨೯೪ ಮನೆಗಳು ವಿವಿಧ ಹಂತಗಳಲ್ಲಿರುತ್ತವೆ. ಕೊಡಗು ಜಿಲ್ಲೆಯಾದ್ಯಂತ ಗ್ರಾಮೀಣ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿಯೂ ಘನತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿದೆ.

ಕೋವಿಡ್ ಸಂದರ್ಭದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರಿಗೆ ವಿವಿಧ ಬಗೆಯ ಕಿಟ್ ವಿತರಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ತೊಂದರೆಗೊಳಗಾದ ಸುಮಾರು ೪೭,೭೫೭ ರೈತರಿಗೆ ಅಂದಾಜು ೬೪ ಕೋಟಿ ರೂಪಾಯಿ ಪರಿಹಾರವನ್ನು ನೀಡಲಾಗಿದೆ. ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತರಾದ ೩೦೦ಕ್ಕೂ ಹೆಚ್ಚು ಮಂದಿಯ ವಾರಸುದಾರರಿಗೆ ರೂಪಾಯಿ ೫೦ ಸಾವಿರ ಪರಿಹಾರವನ್ನು ನೀಡಲಾಗಿದೆ. ೧೫೮ ಬಿಪಿಎಲ್ ಕುಟುಂಬದ ವಾರಸುದಾರರಿಗೆ ಹೆಚ್ಚುವರಿ ರೂಪಾಯಿ ೧ ಲಕ್ಷ ಪರಿಹಾರ ವಿತರಿಸಲಾಗಿದೆ ಎಂದು ಮಾಹಿತಿಯಿತ್ತರು. ಸರ್ಕಾರದ ಸೇವೆಗಳನ್ನು ಜನರಿಗೆ ಗ್ರಾಮ ಮಟ್ಟದಲ್ಲಿ ಒದಗಿಸುವ ಉದ್ದೇಶದಿಂದ ಮಡಿಕೇರಿ ತಾಲೂಕಿನ ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಒನ್ ಕೇಂದ್ರವನ್ನು ಮುಖ್ಯಮಂತ್ರಿಗಳು ವರ್ಚುವಲ್ ಮಾದರಿಯಲ್ಲಿ ಉದ್ಘಾಟನೆ ಮಾಡಿದ್ದು, ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಒಟ್ಟು ೫೮ ಪಂಚಾಯಿತಿಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ ಎಂದು ಸಚಿವರು ಹೇಳಿದರು.

ವೇದಿಕೆಯಲ್ಲಿ ಶಾಸಕರುಗಳಾದ ಅಪ್ಪಚ್ಚುರಂಜನ್, ಕೆ.ಜಿ. ಬೋಪಯ್ಯ, ವೀಣಾ ಅಚ್ಚಯ್ಯ, ಪಶ್ಚಿಮಘಟ್ಟ ಕಾರ್ಯಪಡೆ ಸಂರಕ್ಷಣಾ ಸಮಿತಿ ಅಧ್ಯಕ್ಷ ರವಿ ಕುಶಾಲಪ್ಪ, ಜಿಲ್ಲಾಧಿಕಾರಿ ಬಿ.ಸಿ. ಸತೀಶ, ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಉಪವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡೂ ಮತ್ತಿತರರಿದ್ದರು. ತಹಶೀಲ್ದಾರ್ ಮಹೇಶ್, ನಗರಸಭಾ ಆಯುಕ್ತ ರಾಮದಾಸ್, ಕಸಾಪ ಅಧ್ಯಕ್ಷ ಕೇಶವಕಾಮತ್ ಇತರರು ಪಾಲ್ಗೊಂಡಿದ್ದರು. ಈ ಸಂದರ್ಭ ಸ್ಕೌಟ್‌ಗೈಡ್ಸ್ನ ರಾಜ್ಯ ಪುರಸ್ಕಾರಕ್ಕೆ ಭಾಜನರಾದ ವಿದ್ಯಾರ್ಥಿಗಳಾದ ಸುಕಾರ್ತ್ ತಿಮ್ಮಯ್ಯ, ಹರ್ಷಿತ್ ಚಿಣ್ಣಪ್ಪ, ಜೀವಿನ್ ಸಿಕ್ವೇರ, ಇಶಾನಿ ದೇಚಮ್ಮ ಇವರುಗಳನ್ನು ಗೌರವಿಸಲಾಯಿತು. ಡಿಎಆರ್, ಸಿವಿಲ್ ಪೊಲೀಸ್, ಅರಣ್ಯ ಇಲಾಖೆ, ಗೃಹರಕ್ಷಕದಳದಿಂದ ಪಥ ಸಂಚಲನ ನಡೆಯಿತು.

ಸಂತ ಮೈಕಲರ ಶಾಲಾ ಮಕ್ಕಳು ನಾಡಗೀತೆ, ರೈತಗೀತೆ ಹಾಡಿದರು. ಶಿಕ್ಷಕರಾದ ಅನಿತಾ ಹಾಗೂ ವರದರಾಜು ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.