ಕಣಿವೆ, ಜ. ೨೫: ಕೂಡಿಗೆ - ಕುಶಾಲನಗರ ರಾಜ್ಯ ಹೆದ್ದಾರಿಯ ಗುಮ್ಮನಕೊಲ್ಲಿ ರಸ್ತೆಯ ಬದಿ ಜಲಜೀವನ್ ಯೋಜನೆಯ ಪೈಪ್ಲೈನ್ ಕಾಮಗಾರಿ ನಡೆಯುತ್ತಿದೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ಕೆಲವು ಕಡೆ ಕಾಂಕ್ರಿಟ್ ವಾಲ್ಗಳನ್ನು ನಿರ್ಮಿಸಲಾಗುತ್ತಿದೆ. ಆದರೆ ನೀರಿನಿಂದ ಕಾಂಕ್ರೀಟ್ ಅನ್ನು ಕ್ಯೂರಿಂಗ್ ಮಾಡುತ್ತಿಲ್ಲ. ಹಾಗಾಗಿ ಆ ಕಾಮಗಾರಿ ಹಾಗೆಯೇ ಒಣಗಿ ನಿಂತಿದೆ. ಇದರ ಮೇಲೆ ಮಣ್ಣು ಸುರಿದು ಬಿಲ್ ಮಾಡುವ ಇಲಾಖೆ ಈ ಕಾಮಗಾರಿಯ ಗುಣಮಟ್ಟದ ಬಗ್ಗೆ ಏಕೆ ಗಮನಹರಿಸುತ್ತಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಸಂಬAಧಪಟ್ಟ ಇಲಾಖೆಯ ಗುತ್ತಿಗೆದಾರರಿಗೆ ಈ ಕಾಮಗಾರಿಯ ಬಗ್ಗೆ ಅರಿವಿದೆಯಾ...? ಇದ್ದರೂ ಹೀಗೆ ನಿರ್ಲಕ್ಷö್ಯ ವಹಿಸಿರುವುದು ಸರಿಯಾ...? ಎಂದು ಜನ ಪ್ರಶ್ನಿಸುತ್ತಿದ್ದಾರೆ... ಇದೇ ರೀತಿ ಕೋಟಿ ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ಕುಶಾಲನಗರ ಕೂಡಿಗೆ ಮಾರ್ಗದ ಹೆದ್ದಾರಿ ನಡುವಿನ ಡಿವೈಡರ್ ಒಳಗೆ ಕಾಂಕ್ರಿಟ್ ಹಾಕಿ ಇಂಟರ್ಲಾಕ್ ಅಳವಡಿಸುವ ಕಾಮಗಾರಿಗೂ ಕೂಡ ಒಮ್ಮೆಯೂ ನೀರು ಹಾಕಿ ಕ್ಯೂರಿಂಗ್ ಮಾಡಲೇ ಇಲ್ಲ. ಸಾರ್ವಜನಿಕರು ಪಾವತಿಸುವ ತೆರಿಗೆಯ ಹಣದಿಂದ ಸಾರ್ವಜನಿಕರ ಅನುಕೂಲಕ್ಕೆ ಮಾಡುವ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಗೆ ಏಕೆ ಕಾಳಜಿ ಇಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. -ಕೆ.ಎಸ್. ಮೂರ್ತಿ