ಕರಿಕೆ, ಜ. ೨೫: ಇಲ್ಲಿಗೆ ಸಮೀಪ ಚೆತ್ತುಕಾಯ ಎಂಬಲ್ಲಿ ಕಳೆದ ರಾತ್ರಿ ಭಾಗಮಂಡಲ ಕಡೆಯಿಂದ ಕೇರಳ ರಾಜ್ಯಕ್ಕೆ ಹುಲ್ಲು ಸಾಗಾಟ ಮಾಡುತ್ತಿದ್ದ ಪಿಕ್ ಅಪ್ ವಾಹನವೊಂದು ಡಿಕ್ಕಿಯಾದ ಪರಿಣಾಮ ಬಸ್ ತಂಗುದಾಣ ಹಾನಿಯಾಗಿರುವ ಘಟನೆ ಸಂಭವಿಸಿದೆ. ತಡ ರಾತ್ರಿ ಡಿಕ್ಕಿಪಡಿಸಿ ವಾಹನ ಪರಾರಿಯಾಗಿದ್ದು, ತಂಗುದಾಣದ ಮೇಲ್ಛಾವಣಿಯ ಸಿಮೆಂಟ್ ಶೀಟ್ ಹಾಗೂ ಕಂಬಗಳಿಗೆ ಹಾನಿಯಾಗಿದೆ.

ಈ ಬಗ್ಗೆ ಗ್ರಾಮಸ್ಥರು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಕೂಡಲೇ ಪಿಕ್ ಅಪ್‌ನ್ನು ಪತ್ತೆ ಹಚ್ಚಿ ಬಸ್ ತಂಗುದಾಣವನ್ನು ದುರಸ್ತಿ ಮಾಡಲು ಕ್ರಮವಹಿಸುವಂತೆ ಆಗ್ರಹಿಸಿದ್ದಾರೆ. ಕೇರಳದಿಂದ ಅನೇಕ ಪರವಾನಿಗೆ ರಹಿತ ಪಿಕ್ ಅಪ್ ವಾಹನಗಳು ಹುಲ್ಲುಸಾಗಾಟ ಮಾಡಲು ಗಡಿ ದಾಟಿ ಭಾಗಮಂಡಲಕ್ಕೆ ತೆರಳಿ ಹಿಂದಿರುಗಿ ಬರುವಾಗ ಪಾನಮತ್ತರಾಗಿ ವಾಹನ ಚಾಲನೆ ಮಾಡುತ್ತಿದ್ದು, ಇದರಿಂದಾಗಿ ಈ ರಸ್ತೆಯಲ್ಲಿ ರಾತ್ರಿ ಪ್ರಯಾಣಿಸುವ ಪ್ರಯಾಣಿಕರು ಜೀವಭಯದಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬAಧಿಸಿದ ಇಲಾಖೆ ಕೂಡಲೇ ಈ ಬಗ್ಗೆ ಕ್ರಮ ವಹಿಸುವಂತೆ ನಾಗರಿಕರು ‘ಶಕ್ತಿ’ ಮೂಲಕ ಆಗ್ರಹಿಸಿದ್ದಾರೆ. -ಸುಧೀರ್ ಹೊದ್ದೆಟ್ಟಿ