ಗೋಣಿಕೊಪ್ಪ ವರದಿ, ಜ. ೨೪: ಬೈತೂರು ನಮ್ಮೆಯ ಪ್ರಯುಕ್ತ ಸೋಮವಾರ ದೇವರ ದರ್ಶನ ಕಾರ್ಯ ನಡೆಯಿತು.
ನಮ್ಮೆಯ ದೊಡ್ಡ ಹಬ್ಬದ ದಿನವಾದ ಕಾರಣ ದೇವರ ಉತ್ಸವಮೂರ್ತಿ ಹೊರ ತಂದು ೧೨ ಬಾರಿ ಪ್ರದಕ್ಷಿಣೆ ಹಾಕಲಾಯಿತು. ಪತ್ತೂಟ ಕಾರ್ಯದಲ್ಲಿ ಅನ್ನ ಸಂತರ್ಪಣೆ ನಡೆಯಿತು.
ಸಾಂಪ್ರದಾಯಿಕ ಆಚರಣೆ ನಡೆಸಲಾಯಿತು. ಕೊಡಗಿನ ಬಾಳೋಪಾಟ್ ಕಲಾವಿದರು ಸಾಂಪ್ರದಾಯಿಕ ಉಡುಪಿನಲ್ಲಿ ದುಡಿಕೊಟ್ಟ್ ಮೂಲಕ ದೇವರಿಗೆ ಕೊಡಗಿನ ಸೇವೆಯನ್ನು ಅರ್ಪಿಸಿದರು. ತಂಡ್, ಒಡಿಕತ್ತಿಗೆ ಪೂಜೆ ಸಲ್ಲಿಸಲಾಯಿತು. ಕ್ಷೇತ್ರದ ಕೊಡಗು ಜಿಲ್ಲೆಯ ತಕ್ಕ ಪುಗ್ಗೇರ ಎ. ಪೊನ್ನಪ್ಪ ಸೇರಿದಂತೆ ಜಿಲ್ಲೆಯಿಂದ ಕೇವಲ ೨೦ ಭಕ್ತರು ಮಾತ್ರ ಪಾಲ್ಗೊಂಡಿದ್ದರು.