ಮತದಾನ ಮಾಡುವುದು ನಮ್ಮ ನಾಗರಿಕ ಹಕ್ಕು. ಇದು ನಮ್ಮ ರಾಷ್ಟçದ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ. ರಾಜಕೀಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೆಚ್ಚಿನ ಯುವ ಮತದಾರರನ್ನು ಉತ್ತೇಜಿಸುವ ಸಲುವಾಗಿ ಭಾರತ ಸರ್ಕಾರವು ಪ್ರತಿವರ್ಷ ಜನವರಿ ೨೫ನ್ನು ರಾಷ್ಟಿçÃಯ ಮತದಾರರ ದಿನ ಎಂಬದಾಗಿ ಆಚರಿಸುತ್ತಿದೆ.
ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಯುವ ಮತದಾರರನ್ನು ಉತ್ತೇಜಿಸಲು ಈ ದಿನವನ್ನು ೨೦೧೧ರಲ್ಲಿ ಮೊದಲಿ ಆಚರಿಸಲಾಯಿತು. ಇದು ಮತದಾನದ ಹಕ್ಕನ್ನು ಮತ್ತು ಭಾರತದ ಪ್ರಜಾಪ್ರಭುತ್ವವನ್ನು ಆಚರಿಸುವ ದಿನವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ.
ರಾಷ್ಟçವನ್ನು ಮುನ್ನಡೆಸಲು ಸಾಮಾನ್ಯ ಜನರ ಸಮಸ್ಯೆಗಳನ್ನು ಪರಿಹರಿಸಲು ಬದಲಾವಣೆಯನ್ನು ತರಲು ಸಮರ್ಥನೆಂದು ಭಾವಿಸುವವರಿಗೆ ತನ್ನ ನಾಯಕನನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿರುತ್ತಾರೆ.
ಶ್ರೀಮAತರು ಮತ್ತು ಬಡವರು ಅಕ್ಷರಸ್ಥರು ಮತ್ತು ಅನಕ್ಷರಸ್ಥರು, ಯುವಕರು ಮತ್ತು ಹಿರಿಯರು ಸಮಾಜದ ಪ್ರತಿಯೊಂದು ವರ್ಗದವರಿಂದ ಮತದಾನದ ಶಕ್ತಿಯ ನಿಜವಾದ ಸಾಮರ್ಥ್ಯವನ್ನು ಅರಿತುಕೊಳ್ಳುವ ಸಮಯ ಇದು.
ಭಾರತದ ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ನಾವು ಗೌರವಿಸಬೇಕು. ಯುವಕರು ೧೮ ವರ್ಷ ತುಂಬಿದ ಕೂಡಲೇ ತಮ್ಮ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಉತ್ಸುಕರಾಗಬೇಕು. ಮತದಾನ ಮಾಡಿದ ನಂತರದ ಭಾವನೆಯು ಜವಾಬ್ದಾರಿಯುತ ನಾಗರಿಕ ಎಂಬ ಹೆಮ್ಮೆಯ ಭಾವವನ್ನು ತುಂಬುತ್ತಿದೆ. ಮತದಾನದ ಜನತೆಯು ಯಾವುದಾದರೂ ವಿಷಯ ಅಥವಾ ಅಭ್ಯರ್ಥಿಗಳ ಬಗ್ಗೆ ತಮ್ಮ ನಿರ್ಣಯ ಗಳನ್ನು ಸೂಚಿಸಲು ಅನುವು ಮಾಡಿಕೊಡುವ ಒಂದು ಪ್ರಕ್ರಿಯೆ. ಚುನಾವಣೆ ಗಳಲ್ಲಿ ಮತದಾನ ಪ್ರಮುಖ ಅಂಗ. ಮತದಾನ ಮಾಡುವುದು ಪ್ರತಿಯೊಬ್ಬ ಭಾರತೀಯರ ಹಕ್ಕು ಮತ್ತು ಕರ್ತವ್ಯ.
ಪ್ರಜಾಪ್ರಭುತ್ವದಲ್ಲಿ ಮತದಾನ ಹಾಗೂ ಚುನಾವಣೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ದೇಶದಲ್ಲಿ ಏನಾದರೂ ಧನಾತ್ಮಕವಾದ ಬದಲಾವಣೆಯನ್ನು ಕಾಣಬೇಕಾದರೆ ಸದೃಢ, ಸುಸ್ಥಿರ ಸರಕಾರ ಇರುವುದು ಅಗತ್ಯ. ಚುನಾವಣೆ ನಮಗೆ ಸರಕಾರವನ್ನು ಆರಿಸುವ ಅವಕಾಶವನ್ನು ಕೊಡುತ್ತದೆ. ದೇಶದಲ್ಲಿ ಅದು ಸರಿ ಇಲ್ಲ, ಇದು ಸರಿ ಇಲ್ಲ ಎಂದು ಲೋಪದೋಷಗಳ ಕುರಿತು ಸದಾ ಗೊಣಗುತ್ತಿರುತ್ತೇವೆ. ಆದರೆ, ಈ ಲೋಪದೋಷಗಳಿಗೆಲ್ಲ ಪರೋಕ್ಷವಾಗಿ ನಾವೇ ಕಾರಣ. ಎನ್ನುವುದನ್ನು ತಿಳಿದುಕೊಂಡಿರಬೇಕು. ನಾವು ಚುನಾವಣೆ ಸಂದರ್ಭದಲ್ಲಿ ಯೋಗ್ಯ ಅಭ್ಯರ್ಥಿಯನ್ನು ಆರಿಸಿ ಕಳುಹಿಸಿದರೆ ಆರೋಪಗಳಿಗೆ ಅವಕಾಶಗಳಿರುವುದಿಲ್ಲ. ನನ್ನ ಒಂದು ಮತದಿಂದ ಏನಾಗುತ್ತದೆ ಎಂದು ಭಾವಿಸಿ ಮತದಾನ ಮಾಡದಿದ್ದವರಿಗೆ ವ್ಯವಸ್ಥೆಯ ಲೋಪದೋಷಗಳನ್ನು ಪ್ರಶ್ನಿಸುವ ನೈತಿಕತೆ ಇರುವುದಿಲ್ಲ. ಹೀಗಾಗಿ ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ.
-ವಸಂತಿ ರವೀಂದ್ರ, ಮಸಗೋಡು.