ಚೆಟ್ಟಳ್ಳಿ, ಜ. ೨೨: ಚೆಟ್ಟಳ್ಳಿಯ ಹಿಂದೂ ರುದ್ರಭೂಮಿಯನ್ನು ಅಭಿವೃದ್ಧಿಪಡಿಸಿ ಸಿಲಿಕಾನ್ ಚೇಂಬರ್ ಅಳವಡಿಸುವ ಯೋಜನೆ ಹಿನ್ನೆಲೆಯಲ್ಲಿ ರುದ್ರಭೂಮಿ ಸ್ಥಳದಲ್ಲಿ ಭೂಮಿಪೂಜೆ ನೆರವೇರಿತು.
ಚೆಟ್ಟಳ್ಳಿ ಹಿಂದೂ ರುದ್ರಭೂಮಿ ನಿರ್ಮಾಣ ಸಮಿತಿ ಅಧ್ಯಕ್ಷ ದಿಲೀಪ್ ಅಪ್ಪಚ್ಚು, ಪಂಚಾಯಿತಿ ಅಧ್ಯಕ್ಷ ಉತ್ತಪ್ಪ, ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು, ಸಮಿತಿ ಕಾರ್ಯದರ್ಶಿ ಪ್ರವೀಣ್ಕುಮಾರ್, ಖಜಾಂಚಿ ರವಿಚಂದ್ರ ಸೇರಿದಂತೆಅನೇಕರು ಹಾಜರಿದ್ದರು. ಆಚಾರಿ ಹರಿಶ್ಚಂದ್ರ ಆಚಾರ್ಯ ಭೂಮಿ ಪೂಜೆ ನೆರವೇರಿಸಿದರು. ರುದ್ರಭೂಮಿ ಅಭಿವೃದ್ಧಿಪಡಿಸಿ ರೋಟರಿ ಮಿಸ್ಟಿ ಹಿಲ್ಸ್ ಮೂಲಕ ಸಂಸ್ಕಾರ್ ಯೋಜನೆಯಡಿ ಸಿಲಿಕಾನ್ ಚೇಂಬರ್ ಅಳವಡಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ರುದ್ರಭೂಮಿ ಕಾಯಕಲ್ಪಕ್ಕೆ ಚಾಲನೆ ನೀಡಲಾಗಿದೆ ಎಂದು ಸಮಿತಿ ಪ್ರಮುಖ ಸುರೇಶ್ ಬಾಬು ತಿಳಿಸಿದರು.