ಮಡಿಕೇರಿ, ಜ. ೨೩: ಕೊಡಗು ಜಿಲ್ಲೆಯಲ್ಲಿ ತಾ. ೨೩ ರಂದು ೧೧೩೯ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಪಾಸಿಟಿವಿಟ್ ದರ ೩೩.೯೫ ಇದೆ. ಈ ಸಂಖ್ಯೆ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.
ಕೋವಿಡ್ ೨ನೇ ಅಲೆ ಮುಗಿದ ಬಳಿಕ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಸೋಂಕಿನ ಸಂಖ್ಯೆ ದಾಖಲಾಗಿದೆ. ಅದಲ್ಲದೆ ಕಳೆದ ೨೪ ಗಂಟೆಯಲ್ಲಿ ಕೋವಿಡ್‌ನಿಂದ ೧ ಸಾವು ಕೂಡ ಸಂಭವಿಸಿದೆ.
೧೧೩೯ ಒಟ್ಟು ಕೋವಿಡ್ ಪ್ರಕರಣಗಳ ಪೈಕಿ ೯೩೨ ಆರ್.ಟಿ.ಪಿ.ಸಿ.ಆರ್ ಹಾಗೂ ೨೦೭ ರ‍್ಯಾಟ್ ಪರೀಕ್ಷೆ ಮೂಲಕ ದೃಢಪಟ್ಟಿದೆ. ಮಡಿಕೇರಿ ತಾಲೂಕಿನಲ್ಲಿ ೫೦೯, ಸೋಮವಾರಪೇಟೆ ತಾಲೂಕಿನಲ್ಲಿ ೩೬೩, ವೀರಾಜಪೇಟೆ ತಾಲೂಕಿನಲ್ಲಿ ೨೬೭ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯ ೧೯ ಪ್ರದೇಶಗಳನ್ನು ಕಂಟೈನ್ಮೆAಟ್ ಝೋನ್‌ಗಳಾಗಿ ಪರಿವರ್ತಿಸಲಾಗಿದೆ. ಅದಲ್ಲದೆ ೪ ಸಾರ್ವಜನಿಕ ಪ್ರದೇಶಗಳನ್ನು ಕಂಟೈನ್ಮೆAಟ್ ಝೋನ್ ಮಾಡಲಾಗಿದೆ.
ಜಿಲ್ಲೆಯಲ್ಲಿ ಒಟ್ಟು ೩೯,೬೪೧ ಕೋವಿಡ್ ಪಾಸಿಟಿವ್ ಪ್ರಕರಣಗಳಿದ್ದು, ಈ ಪೈಕಿ ೩೬,೧೮೨ ಮಂದಿ ಗುಣಮುಖರಾಗಿದ್ದಾರೆ. ೩೦೨೦ ಸಕ್ರಿಯ ಕೇಸ್‌ಗಳಿವೆ. ಒಟ್ಟು ೨೧೮ ಕಂಟೈನ್ಮೆAಟ್ ಝೋನ್, ೪೩೯ ಸಾವಿನ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.