ಸಿದ್ದಾಪುರ, ಜ. ೨೩: ಮಾಲ್ದಾರೆ ಚೆಕ್ ಪೋಸ್ಟ್ ಬಳಿ ತಟ್ಟಳ್ಳಿ, ದಿಡ್ಡಳ್ಳಿ ಹಾಡಿಗಳಿಗೆ ತೆರಳುವ ರಸ್ತೆ ಬದಿಯಲ್ಲಿ ಶನಿವಾರ ರಾತ್ರಿ ವೇಳೆಯಲ್ಲಿ ಹುಲಿಯೊಂದು ಪ್ರತ್ಯಕ್ಷ ಗೊಂಡಿದೆ. ಮಾಲ್ದಾರೆ ಚೆಕ್ ಪೋಸ್ಟ್ ಸಮೀಪದಲ್ಲಿರುವ ಹಾಡಿಗಳಿಗೆ ತೆರಳುವ ಸಾರ್ವಜನಿಕ ರಸ್ತೆ ಬದಿಯಲ್ಲಿ ಆನೆಗಳ ಹಾವಳಿಯನ್ನು
ತಡೆಗಟ್ಟಲು ತೆಗೆದ ಕಂದಕಗಳ ಮೇಲ್ಭಾಗದಲ್ಲಿ ರಸ್ತೆಯ ತಿರುವಿನಲ್ಲಿ ಬೃಹತ್ ಗಾತ್ರದ ಹುಲಿಯೊಂದು ಪ್ರತ್ಯಕ್ಷ ಗೊಂಡಿದ್ದು, ಆದಿವಾಸಿ ಮುಖಂಡ ಜೆ.ಕೆ. ಅಪ್ಪಾಜಿ ಹಾಗೂ ಅವರ ಕುಟುಂ ಬಸ್ಥರು ರಾತ್ರಿ ೮.೩೦ಕ್ಕೆ ತಮ್ಮ ವಾಹನ ದಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭ ಹುಲಿಯನ್ನು ಕಂಡು ಭಯಭೀತ ರಾಗಿದ್ದಾರೆ.
ಇವರ ಪುತ್ರ ಕೀರ್ತಿ ತಮ್ಮ ಮೊಬೈಲ್‌ನಲ್ಲಿ ಹುಲಿಯ ಚಿತ್ರವನ್ನು ಸೆರೆ ಹಿಡಿದಿದ್ದಾರೆ. ಈ ಭಾಗದ ಆದಿವಾಸಿ ಮಕ್ಕಳು ಶಾಲೆಗೆ ತೆರಳುವ ರಸ್ತೆ ಇದಾಗಿದ್ದು ಇತ್ತೀಚೆಗೆ ಹುಲಿಯು ಹಲವಾರು ಜಾನುವಾರುಗಳನ್ನು ಕೊಂದ ಘಟನೆ ಕೂಡ ನಡೆದಿದೆ. ಹುಲಿ ಸೆರೆಗೆ ಅಪ್ಪಾಜಿ ಒತ್ತಾಯಿಸಿದ್ದಾರೆ.