ಕುಶಾಲನಗರ, ಜ. ೨೩ : ಕುಶಾಲನಗರದ ಪೊಲೀಸ್ ಅಧಿಕಾರಿಯೊಬ್ಬರು ನಾಪತ್ತೆಯಾದ ಪ್ರಕರಣ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಕಳೆದ ಎರಡು ದಿನಗಳಿಂದ ಹಲವೆಡೆ ತೆರಳಿದ್ದು ಪತ್ತೆ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಪೊಲೀಸ್ ಅಧಿಕಾರಿಯೊಬ್ಬರು ಏಕಾಏಕಿ ನಾಪತ್ತೆಯಾಗಿರುವ ಪ್ರಕರಣ ಇಡೀ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ತಾ. ೨೨ರಂದು ಕರ್ತವ್ಯ ನಿರ್ವಹಿಸಿದ ನಂತರದ ಕೆಲವೇ ಕ್ಷಣಗಳಲ್ಲಿ ನಾಪತ್ತೆಯಾಗಿರುವ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಸುರೇಶ್ ಮನೆಯಿಂದ ತೆರಳುವ ಸಂದರ್ಭ ತನ್ನ ದ್ವಿಚಕ್ರವಾಹನವನ್ನು ಮನೆಯಲ್ಲಿ ಇರಿಸಿ ನಂತರ ಕತ್ತಿನಲ್ಲಿದ್ದ ಚಿನ್ನದ ಸರ, ಎಟಿಎಂ ಕಾರ್ಡ್ ಸಂಬAಧಿಸಿದ ಬೀಗದ ಕೀಗಳನ್ನು ಮನೆಯಲ್ಲೇ ಇರಿಸಿ ಎರಡು ಮೊಬೈಲ್ ತನ್ನ ಜೊತೆ ತೆಗೆದುಕೊಂಡು ಮನೆಯಿಂದ ತೆರಳಿರುವ ಮಾಹಿತಿ ಲಭ್ಯವಾಗಿದೆ.
ಮುಳ್ಳುಸೋಗೆ ತನಕ ತೆರಳಿದ ಸುಳಿವು ಮೊಬೈಲ್ ಜಾಲದ ಮೂಲಕ ಲಭ್ಯವಾಗಿದ್ದು ನಂತರ ಯಾವುದೇ ಸಂಪರ್ಕ ಲಭಿಸುತ್ತಿಲ್ಲ. ಮನನೊಂದು ಧಾರ್ಮಿಕ ಕ್ಷೇತ್ರಗಳಿಗೆ ತೆರಳಿರುವ ಸಾಧ್ಯತೆ ಇರುವ
(ಮೊದಲ ಪುಟದಿಂದ) ಬಗ್ಗೆ ಚಿಂತನೆ ನಡೆಸಿರುವ ಪೊಲೀಸರು ದಕ್ಷಿಣ ಕನ್ನಡ ಸೇರಿದಂತೆ ವಿವಿಧ ದೇವಾಲಯಗಳಿಗೆ ತೆರಳಿ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ ಎನ್ನುವ ಮಾಹಿತಿಗಳು ಲಭ್ಯವಾಗಿದೆ.
ನಾಪತ್ತೆಯಾಗಿರುವ ಪೊಲೀಸ್ ಅಧಿಕಾರಿ ಸುರೇಶ್ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದು ಯಾರೊಂದಿಗೂ ಹೆಚ್ಚಾಗಿ ಬೆರೆಯುತ್ತಿರಲಿಲ್ಲ. ತುಂಬಾ ಮೌನಿ ಆಗಿದ್ದು ತನ್ನ ಕರ್ತವ್ಯದಲ್ಲಿ ತೊಡಗಿಕೊಂಡಿದ್ದರು. ಸುರೇಶ್ ಅವರ ಇಬ್ಬರು ಪುತ್ರಿಯರು ಹೊರಗಡೆ ನೌಕರಿಯಲ್ಲಿದ್ದು, ಪತ್ನಿ ಕಳೆದ ಡಿಸೆಂಬರ್ ತಿಂಗಳಿನಿAದ ಬೆಂಗಳೂರಿನಲ್ಲಿ ತನ್ನ ಮಗಳೊಂದಿಗೆ ನೆಲೆಸಿದ್ದರು.
ಸುರೇಶ್ ಕಾರಣಾಂತರಗಳಿAದ ಮನನೊಂದು ಕುಟುಂಬದಿAದ ಹೊರಹೋಗಿರುವ ಸಾಧ್ಯತೆಯ ಬಗ್ಗೆಯೂ ಹಲವು ಆಯಾಮಗಳ ಮೂಲಕ ತನಿಖೆ ಮುಂದುವರೆದಿದೆ. ಸುರೇಶ್ ಮೂಲತಃ ಜಿಲ್ಲೆಯ ಗಡಿಭಾಗ ಕೊಣನೂರು ಭಾಗದ ನಿವಾಸಿಯಾಗಿದ್ದು, ನಂತರ ಶಿರಂಗಾಲ ಬಳಿ ವಾಸವಾಗಿದ್ದರು. ಕುಶಾಲನಗರ ಡಿವೈಎಸ್ಪಿ ಶೈಲೇಂದ್ರ ಅವರ ಮಾರ್ಗದರ್ಶನದಲ್ಲಿ ಸ್ಥಳೀಯ ಪೊಲೀಸ್ ಅಧಿಕಾರಿಗಳು ಸುರೇಶ್ ಅವರ ಪತ್ತೆಗಾಗಿ ತಂಡಗಳನ್ನು ರಚಿಸಿ ಬಿರುಸಿನ ಕಾರ್ಯಾಚರಣೆ ಕೈಗೊಂಡಿದ್ದಾರೆ.
-ಚAದ್ರಮೋಹನ್