ಮಡಿಕೇರಿ, ಜ. ೨೩: ಕೊಡಗು ಜಿಲ್ಲೆಯಲ್ಲಿ ಬಂದೂಕು ವಿನಾಯಿತಿ ಕುರಿತಾಗಿ ನಡೆದುಕೊಂಡು ಬರುತ್ತಿರುವ ಕೂರ್ಗ್ ಬೈರೇಸ್ ಎಂಬ ಪದದ ವಿಶ್ಲೇಷಣೆ ಕುರಿತಾಗಿ ಸರಕಾರದ ಹಂತದಲ್ಲಿ ಅಂತಿಮ ತೀರ್ಮಾನಕೈಗೊಳ್ಳಬಹುದೆಂದು ಕೊಡಗು ಜಿಲ್ಲಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿ ಈ ಬಗ್ಗೆ ವರದಿ ಸಲ್ಲಿಸಿದ್ದಾರೆ.ಈ ಕುರಿತಾಗಿ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರು ಹಾಗೂ ಮೈಸೂರಿನ ಅಮೆ ಕೆ. ಶಿವರಾಯ್ ಇವರ ಮನವಿಯನ್ನು ಉಲ್ಲೇಖಿಸಿ, ಕೇಂದ್ರ ಗೃಹ ಸಚಿವಾಲಯದ ಅಧಿಸೂಚನೆ ಮತ್ತಿತರ ಅಂಶಗಳನ್ನು ಒಳಗೊಂಡAತೆ ಜಿಲ್ಲಾಧಿಕಾರಿಗಳು ಇತ್ತೀಚೆಗೆ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ, ಒಳಾಡಳಿತ ಇಲಾಖೆ, ಕಾನೂನು ಮತ್ತು ಸುವ್ಯವಸ್ಥೆ ಇವರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿನ ವಿವರ ಇಂತಿದೆ ಕೊಡಗಿನ ಜನರು ಬಹಳ ಕಾಲದಿಂದಲೂ ಶುಭ ಮತ್ತು ಅಶುಭ ಸಂದರ್ಭಗಳಲ್ಲಿ ಹಾಗೂ ಸಾಂಪ್ರದಾಯಿಕವಾಗಿ ಬಂದೂಕನ್ನು ಬಳಸಲು ಸರ್ಕಾರವು ಕೊಡಗಿನ ಜನರಿಗೆ ಅನುಕೂಲವಾಗಲೆಂದು ಬ್ರಿಟೀಷರ ಆಡಳಿತ ಕಾಲದಲ್ಲಿ ಮತ್ತು ಕೊಡಗಿನ ರಾಜರ ಆಳ್ವಿಕೆಯಲ್ಲಿ ಸೈನ್ಯದಲ್ಲಿ ಆಗಾಗ್ಗೆ ಸೇವೆ ಸಲ್ಲಿಸಿದವರಿಗೆ ‘ಜಮ್ಮಾ’ ಹೆಸರಿನಲ್ಲಿ ನೀಡುವ ಜಮೀನಿನ ಮತ್ತು ‘ಕೊಡಗಿನ ಮೂಲ ನಿವಾಸಿಗಳು’ ಎಂಬ ಆಧಾರದ ಮೇಲೆ ಬಂದೂಕು ಕಾಯ್ದೆ ೧೯೬೯ರ ಕಲಂ ೩ ಮತ್ತು ೪ ರಿಂದ ವಿನಾಯಿತಿ ನೀಡಲಾಗಿರುತ್ತದೆ. ಅದರಂತೆ ಕೊಡಗಿನ ಜಮ್ಮಾ ಹಿಡುವಳಿ ಹೊಂದಿರುವ ಬಗ್ಗೆ ಜಮೀನಿನ ದಾಖಲೆ ಮತ್ತು ಕೊಡಗಿನ ಮೂಲ ನಿವಾಸಿಗಳು ಎಂದು ಕೊಡಗರು ಜನಾಂಗದವರಿಗೆ ಜಾತಿ ದೃಢೀಕರಣ ಪತ್ರದ ಆಧಾರದ ಮೇಲೆ ವಿನಾಯಿತಿ ಪತ್ರವನ್ನು ನೀಡುತ್ತಾ ಬಂದಿರುತ್ತದೆ. ಪ್ರಸ್ತುತ ಕೇಂದ್ರ ಸರ್ಕಾರದ ಅಧಿಸೂಚನೆಯಂತೆ ದಿನಾಂಕ ೩೧.೧೦.೨೦೨೯ರ ತನಕ ವಿನಾಯಿತಿಯನ್ನು ವಿಸ್ತರಿಸಲಾಗಿದೆ.

ಪ್ರಸ್ತುತ ಕೊಡಗು ಜಿಲ್ಲೆಯಲ್ಲಿ ‘ಜಮ್ಮಾ’ ಹಿಡುವಳಿ ಜಮೀನು ಹೊಂದಿರುವವರಿಗೆ ಮತ್ತು ‘ಕೊಡಗರು’ ಜಾತಿ ದೃಢೀಕರಣದ ಪತ್ರದ ಆಧಾರದ ಮೇರೆಗೆ ವಿನಾಯಿತಿ ಪತ್ರವನ್ನು ನೀಡಲಾಗು ತ್ತಿದ್ದು, ಕೇಂದ್ರ ಸರ್ಕಾರದ ಅಧಿ ಸೂಚನೆಯಲ್ಲಿ ‘ಇveಡಿಥಿ ಠಿeಡಿsoಟಿ oಜಿ ಅooಡಿg bಥಿ ಖಚಿಛಿe ಚಿಟಿಜ eveಡಿಥಿ ಎಚಿmmಚಿ ಣeಟಿuಡಿe hoಟಜeಡಿ iಟಿ ಅooಡಿg’

(ಮೊದಲ ಪುಟದಿಂದ) ಎಂದಿರುತ್ತದೆ ಅooಡಿg ಖಚಿಛಿe ಎಂಬ ಪದದ ಪರಿಭಾಷೆಯಲ್ಲಿ ಇತರೆ ಜನಾಂಗದ ಐರಿ, ಐಂಬೊಕಲು, ಕೊಡಗು ಗೌಡ, ಅಮ್ಮ ಕೊಡವ, ಕೊಡಗು ಹೆಗ್ಗಡೆ, ಕೊಡವ, ಕೊಯವ, ಜಮ್ಮಾ ಮಾಪಿಳ್ಳೆ ಇತ್ಯಾದಿ ಕೂಡ ಸೇರುತ್ತದೆಂದು ಹಾಗೂ ಬ್ರಿಟಿಷ್ ಆಡಳಿತ ಹಾಗೂ ಅದಕ್ಕೂ ಮೊದಲಿನ ಹಾಲೇರಿ ಹಾಜರ ಆಡಳಿತ ಕಾಲದಲ್ಲಿ ಕೂಡಾ ಈ ನಮೂದಿಸಿದ ಜಾತಿ ಸಮಾಜಗಳು ಅooಡಿg bಥಿ ಖಚಿಛಿe ವ್ಯಾಪ್ತಿಯಲ್ಲಿ ಸೇರಿರುವುದರಿಂದ ಈ ಸಮುದಾಯಗಳನ್ನು ಅooಡಿg ಖಚಿಛಿe ಎಂಬ ಪರಿಭಾಷೆಗೆ ಸೇರಿಸುವಂತೆ ಹಾಗೂ ವಿನಾಯಿತಿ ಪತ್ರ ಸೌಲಭ್ಯವನ್ನು ಒದಗಿಸುವಂತೆ ಕೊಡಗು ಗೌಡ ಸಮಾಜಗಳ ಒಕ್ಕೂಟ, ಮಡಿಕೇರಿ ಇವರು ಮನವಿ ಸಲ್ಲಿಸಿರುತ್ತಾರೆ. ಇದರೊಂದಿಗೆ ಕೊಡಗು ಹೆಗ್ಗಡೆ ಸಮಾಜ, ಕೊಡಗು ಮುಸ್ಲಿಂ ಅಸೋಸಿಯೇಷನ್, ಉಪಾಧ್ಯಕ್ಷರು ಕೊಯವ ಸಮಾಜ ಇವರು ಸಲ್ಲಿಸಿದ ಮನವಿ ಪತ್ರಗಳನ್ನು ಕೂಡಾ ಸಲ್ಲಿಸಿರುತ್ತಾರೆ. ಆದರೆ ಈ ವಿಷಯದ ಬಗ್ಗೆ ಸರ್ಕಾರದ ಹಂತದಲ್ಲಿ ಕ್ರಮಕೈಗೊಳ್ಳಬೇಕಾಗಿರುತ್ತದೆ. ಈ ಬಗ್ಗೆ ಹಿಂದೆ ಕೂಡ ಮನವಿಗಳು ಸ್ವೀಕೃತವಾಗಿದ್ದು, ಸ್ಪಷ್ಟೀಕರಣ ಕೋರಿ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಯಾವುದೇ ನಿರ್ದೇಶನ ಈ ಕಚೇರಿಗೆ ಸ್ವೀಕೃತವಾಗಿರುವುದಿಲ್ಲ.

ಪತ್ರದನ್ವಯ ಪರಿಶೀಲಿಸಲಾಗಿದ್ದು, ಈ ಮೇಲ್ಕಂಡ ಸಮಾಜ, ಜಾತಿಗಳನ್ನು ‘ಇveಡಿಥಿ ಠಿeಡಿsoಟಿ oಜಿ ಅooಡಿg bಥಿ ಖಚಿಛಿe’ ಈ ಪದದ ಪರಿಭಾಷೆಯಲ್ಲಿ ಸೇರುವ ಕುರಿತು ಪರಿಶೀಲಿಸಬಹುದಾಗಿದ್ದು, ಸರ್ಕಾರದ ಹಂತದಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಬಹುದೆಂದು ಅಭಿಪ್ರಾಯ ಸಲ್ಲಿಸಲಾಗುತ್ತಿದೆ ಎಂದು ವರದಿ ನೀಡಲಾಗಿದೆ.