ನಾಪೋಕ್ಲು, ಜ. ೨೩: ಗ್ರಾಮದ ನಾಪೋಕ್ಲು - ಕೊಳಕೇರಿ ಗ್ರಾಮದಲ್ಲಿ ಕಾಡಾನೆಯೊಂದು ಕಾಫಿ ತೋಟ, ಬಾಳೆ, ಅಡಿಕೆ, ತೆಂಗು ಗಿಡಗಳನ್ನು ನಾಶಪಡಿಸಿ ಅಪಾರ ನಷ್ಟ ಉಂಟು ಮಾಡಿದೆ. ಕಳೆದೆರಡು ದಿನಗಳ ಹಿಂದೆ ನೂರಂಬಡ ಮಠದ ನಂದೇಶ್ ಎಂಬವರ ತೋಟದ ಬಾಳೆ , ತೆಂಗು ಗಿಡಗಳನ್ನು ಧ್ವಂಸ ಮಾಡಿರುವ ಕಾಡಾನೆ ಮುಂದೆ ಕೊಳಕೇರಿ ಗ್ರಾಮದಲ್ಲಿ ತೋಟದ ದಾರಿಯುದ್ದಕೂ ಬೆಳೆಗಳನ್ನು ಕಾಫಿ ಗಿಡಗಳನ್ನು ಕಿತ್ತೆಸೆದು ನಷ್ಟ ಉಂಟುಮಾಡಿದ್ದು, ಕೂಡಲೇ ಅರಣ್ಯ ಇಲಾಖೆಯವರು ಕಾಡಾನೆಯಿಂದ ಆದ ನಷ್ಟವನ್ನು ಭರಿಸಿ ಕಾಡಾನೆಯನ್ನು ಕಾಡಿಗಟ್ಟುವ ಕಾರ್ಯವನ್ನು ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿತ್ತಿದ್ದಾರೆ.