ವೀರಾಜಪೇಟೆ, ಜ. ೨೧: ಸರ್ಕಾರದಿಂದ ನೀಡುವಂತ ಸೌಲಭ್ಯಗಳನ್ನು ವಿಶೇಷಚೇತನರು ಹಾಗೂ ಅವರ ಪೋಷಕರು ಪಡೆದುಕೊಳ್ಳಲು ಮುಂದಾಗಬೇಕು. ಅವರು ಕೂಡ ಎಲ್ಲರಂತೆ ಸಮಾಜದ ಮುಖ್ಯ ವಾಹಿನಿಗೆ ಬರಲು ನಾವೆಲ್ಲರು ಶ್ರಮಿಸಬೇಕು ಎಂದು ಜಿಲ್ಲಾ ವಿಶೇಷಚೇತನರ ಕಲ್ಯಾಣಾಧಿಕಾರಿ ವಿಮಲ ಹೇಳಿದರು.

ವೀರಾಜಪೇಟೆ ಪುರಭವನದಲ್ಲಿ ಹಮ್ಮಿಕೊಂಡಿದ್ದ ವಿಶೇಷಚೇತನರ ಪೋಷಕರ ಸಭೆ ಹಾಗೂ [ಯು.ಡಿ.ಐ.ಡಿ ಕಾರ್ಡ್] ಗುರುತಿನ ಚೀಟಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಸರ್ಕಾರ ವಿಶೇಷಚೇತನರಿಗಾಗಿ ವಿಶೇಷ ಶಾಲೆ, ವಿದ್ಯಾರ್ಥಿಗಳಿಗೆ ಶಿಷ್ಯವೇತನ ಹಾಗೂ ಪ್ರೋತ್ಸಾಹಧನ, ಉನ್ನತ ಶಿಕ್ಷಣ, ಸ್ಪರ್ಧಾ ಚೇತನ, ಸಾಧನ ಸಲಕರಣೆ ಪೂರೈಕೆ, ವೈದ್ಯಕೀಯ ಪರಿಹಾರ ನಿಧಿ ಯೋಜನೆ, ಮಾಸಾಶನ ಪೋಷಣಾ ಭತ್ಯೆ, ಶಿಶುಪಾಲನಾ ಭತ್ಯೆ, ತರಬೇತಿ ಮತ್ತು ಉದ್ಯೋಗ, ನಿರುದ್ಯೋಗಿ ವಿಶೇಷಚೇತನರಿಗೆ ಭತ್ಯೆ, ಬಸ್‌ಪಾಸ್ ರೈಲ್ವೆಪಾಸ್, ಗ್ರಾಮೀಣ ಪುನರ್ವಸತಿ ಯೋಜನೆ, ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿಯನ್ನು ರಾಜ್ಯ ಅಂಗವಿಕಲ ಅಭಿವೃದ್ಧಿ ನಿಗಮದಿಂದ ವಿಶೇಷಚೇತನರಿಗೆ ಅನೇಕ ಯೋಜನೆಗಳಿದ್ದು ಅವುಗಳನ್ನು ತಿಳಿದುಕೊಳ್ಳುವ ಮೂಲಕ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ವಿಮಲ ತಿಳಿಸಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಚಂದ್ರಕುಮಾರ್ ಮಾತನಾಡಿ ಸಮಾಜದಲ್ಲಿ ಎಲ್ಲಾ ವರ್ಗದ ಜನರಿಗೂ ಸರ್ಕಾರದ ಸೌಲಭ್ಯಗಳನ್ನು ಅಧಿಕಾರಿಗಳು ತಲುಪಿಸಬೇಕಾಗಿದೆ. ಹಾಗೂ ನೂತನ ಯೋಜನೆಗಳ ಬಗ್ಗೆ ಎಲ್ಲಾ ಜನರಿಗೂ ಮಾಹಿತಿ ನೀಡುವ ಮೂಲಕ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು. ಈಗಾಗಲೇ ಪಟ್ಟಣ ಪಂಚಾಯಿತಿಯಿAದ ಅನೇಕ ವಿಶೇಷಚೇತನರ ಲಾಲನೆ ಪೋಷಣೆಗಾಗಿ ಜಿಲ್ಲಾಧಿಕಾರಿಗಳು ಅನುದಾನ ನೀಡಿದ್ದು, ಕಡುಬಡ ಕುಟುಂಬಗಳಿಗೆ, ವಿಶೇಷಚೇತನರಿಗೆÀ ಮೂಲಭೂತ ಸೌಕರ್ಯಕ್ಕಾಗಿ ಹಣ ಮೀಸಲಿಡಲಾಗಿದೆ ಎಂದರು.

ರಾಷ್ಟಿçÃಯ ಹಿರಿಯ ನಾಗರಿಕರ ಕೊಡಗು ಮತ್ತು ಮಂಗಳೂರು ಕ್ಷೇತ್ರದ ಸಹಾಯವಾಣಿಯ ಭರತ್ ಅವರು ಮಾತನಾಡಿ ಹಿರಿಯ ನಾಗರಿಕರಿಗೆ ಗುರುತಿನ ಚೀಟಿ, ವೃದ್ಧಾಪ್ಯ ವೇತನ, ಹಗಲು ಯೋಗಕ್ಷೇಮ, ಪ್ರಯಾಣದಲ್ಲಿ ರಿಯಾಯಿತಿ, ಸಂಚಾರಿ ಆರೋಗ್ಯ ಕೇಂದ್ರ, ಹಿರಿಯ ನಾಗರಿಕರ ಪಾಲಕರ ಪೋಷಣೆ ಹಾಗೂ ರಕ್ಷಣೆ, ವೃದ್ಧಾಶ್ರಮಗಳು ಸೇರಿದಂತೆ ಇನ್ನಿತರ ಅನೇಕ ಸೌಲಭ್ಯಗಳಿದ್ದು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳು ವಂತಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣಾಧಿಕಾರಿ ಪ್ರೀತಿ ಚಿಕ್ಕಮಾದಯ್ಯ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ವಿನಾಂಕ್ ಕುಟ್ಟಪ್ಪ, ಸದಸ್ಯರಾದ ಸಿ.ಕೆ. ಪ್ರಥ್ವಿನಾಥ್, ಅಬ್ದುಲ್ ಜಲೀಲ್, ಪೊನ್ನಂಪೇಟೆ ತಾಲೂಕು ಪಂಚಾಯಿತಿಯ ಪ್ರಥನ್ ಕುಮಾರ್, ಬೇಟೋಳಿ ಗ್ರಾ.ಪಂ. ಆಯಿಷಾ ಹಾಜರಿದ್ದರು.