ಮಡಿಕೇರಿ, ಜ. ೨೨: ಮಡಿಕೇರಿ-ಚೆಟ್ಟಳ್ಳಿ ರಸ್ತೆಯ ಕೊಡಗು ವಿದ್ಯಾಲಯ ಬಳಿಯ ತಿರುವಿನಲ್ಲಿ ಕಳೆದ ಎರಡು ದಿನಗಳಿಂದ ಕಸ ತುಂಬಿದ್ದ ಚೀಲವೊಂದು ಬಿದ್ದಿತ್ತು. ಅದರಲ್ಲಿ, ಮಡಿಕೇರಿ ನಗರದ ಕೆಎಸ್‌ಆರ್‌ಟಿಸಿ ಡಿಪೋ ಎದುರಿನ ಕೂರ್ಗ್ ಸ್ಪೆöÊಸಸ್ ಮಳಿಗೆಗೆ ಸೇರಿದ ಖಾಲಿ ವೈನ್ ಬಾಟಲಿಗಳು, ಬಿಲ್ ಗಳು, ಪ್ಲಾಸ್ಟಿಕ್ ಲೇಬಲ್‌ಗಳೇ ತುಂಬಿದ್ದವು. ಗಾಳಿಗೆ ಕಸಗಳು ರಸ್ತೆ ಬದಿ ಚೆಲ್ಲಾಪಿಲ್ಲಿಯಾಗಿದ್ದವು. ಈ ಕುರಿತು ಮಾಧ್ಯಮ ಸ್ಪಂದನ ಗೋಪಾಲ್ ಸೋಮಯ್ಯ, ಯುಗದೇವಯ್ಯ, ನವೀನ್ ಸುವರ್ಣ ಅವರುಗಳು ನಗರ ಸಭೆ ಗಮನಕ್ಕೆ ತಂದಿದ್ದಾರೆ. ತಡವಾಗಿಯಾದರೂ ಸ್ಪಂದಿಸಿದ ನಗರಸಭೆ ಆಯುಕ್ತ ರಾಮದಾಸ್, ಸ್ಥಳಕ್ಕೆ ಆರೋಗ್ಯ ನಿರೀಕ್ಷಕ ಪರಮೇಶ್ವರ್ ಮತ್ತು ಇತರ ಸಿಬ್ಬಂದಿಯನ್ನು ಕಳುಹಿಸಿದರು. ಸ್ಥಳಕ್ಕೆ ಆಗಮಿಸಿದ ಅವರು ಕಸದಲ್ಲಿ ಸಿಕ್ಕ ಬಿಲ್‌ನಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಸ್ಪೆöÊಸಸ್ ಸಿಬ್ಬಂದಿಗೆ ತಕ್ಷಣವೇ ಸ್ಥಳಕ್ಕೆ ಆಗಮಿಸುವಂತೆ ಸೂಚಿಸಿದರು. ಅದರಂತೆ ಸ್ಥಳಕ್ಕೆ ಬಂದ ಕೂರ್ಗ್ ಸ್ಪೆöÊಸಸ್ ನ ಸಿಬ್ಬಂದಿ ಕೈಯಾರೆ ಕಸ ತೆಗೆದು ಪರಿಸರ ಶುಚಿಗೊಳಿಸಿದರು. ಈ ಕಸ ತಮ್ಮದೇ ಎಂದು ಒಪ್ಪಿಕೊಂಡ ಅವರು ಯಾರೋ ನಮ್ಮ ಹುಡುಗರೇ ಕಸ ಎಸೆದಿರಬಹುದೆಂದು ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಿದರು. ಕಸದ ಸಮೇತ ಅವರ ಸ್ಪೆöÊಸಸ್ ಮಳಿಗೆಗೆ ತೆರಳಿದ ಅಧಿಕಾರಿಗಳು ಅವರಿಗೆ ರೂ. ೨೦೦೦ ದಂಡ ವಿಧಿಸಿ ಇನ್ನು ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದರು.