ವೀರಾಜಪೇಟೆ, ಜ. ೨೧: ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸವಾರರಿಬ್ಬರು ಗಾಯಗೊಂಡ ಘಟನೆ ಚೆಂಬೆಬೆಳ್ಳೂರು ಬಳಿ ನಡೆದಿದೆ. ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದೆ.

ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಣಗೇರಿ ಗ್ರಾಮದಲ್ಲಿ ವಾಸವಿರುವ ಮಂಜು (೨೦) ಮತ್ತು ಹಿಂಬದಿ ಸವಾರ ವಿನೋದ್ (೨೩) ಗಾಯಗೊಂಡು ಇದೀಗ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೆಲಸಕ್ಕೆಂದು ಚೆಂಬೆಬೆಳ್ಳೂರು ಗ್ರಾಮದಿಂದ ಬೆಳಿಗ್ಗೆ ಬೈಕ್‌ನಲ್ಲಿ ಮೂರ್ನಾಡುವಿಗೆ ತೆರಳುವ ಸಂದರ್ಭ ರವಿ ಎಂಬವÀರು ಒಂಟಿಯAಗಡಿ ಗ್ರಾಮಕ್ಕೆ ತಮ್ಮ ಕಾರಿನಲ್ಲಿ ತೆರಳುವಾಗ ಚಂಬೆಬೆಳ್ಳೂರು ಚಾಮುಂಡೇಶ್ವರಿ ದೇವಾಲಯದ ಮುಂಭಾಗದಲ್ಲಿರುವ ರಸ್ತೆಯಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ದ್ವಿಚಕ್ರವಾಹನದ ಸವಾರ ಮಂಜು ಕಾಲಿಗೆ ಗಂಭೀರ ಗಾಯಗಳಾಗಿವೆ. ಹಿಂಬದಿ ಸವಾರ ವಿನೋದ್ ತಲೆ ಭಾಗಕ್ಕೆ ಗಾಯಗಳಾಗಿವೆ. ತಕ್ಷಣವೇ ಸ್ಥಳೀಯರು ಗಾಯಾಳುಗಳನ್ನು ವೀರಾಜಪೇಟೆ ಸರ್ಕಾರಿ ಆಸತ್ರೆÀ್ರಗೆ ದಾಖಲಿಸಿದ್ದಾರೆ.

ಮಂಜು ವೀರಾಜಪೇಟೆ ಆಸ್ಪತ್ರೆ ಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಗಾಯಾಳು ವಿನೋದ್ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಂಬಟ್ಟಿ ಮೊಟ್ಟೆಯಲ್ಲಿ: ಕಾರು ಹಾಗೂ ದ್ವಿಚಕ್ರ ವಾಹನ ನಡುವೆ ಡಿಕ್ಕಿಯಾದ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ. ಮೈತಾಡಿ ಗ್ರಾಮದ ನಿವಾಸಿ ಬಿ.ಎಂ ಅಯ್ಯಪ್ಪ ಮತ್ತು ಪತ್ನಿ ನಂಜಮ್ಮ ಅವರುಗಳು ತಮ್ಮ ಕಾರಿನಲ್ಲಿ ಬಿಟ್ಟಂಗಾಲ ಸಮೀಪದ ಹೊಟೇಲ್‌ಗೆ ಮಧ್ಯಾಹ್ನದ ಊಟಕ್ಕೆ ತೆರಳಿ ಊಟ ಮುಗಿಸಿ ಮನೆಗೆ ವಾಪಸ್ ಆಗುವ ಸಂದರ್ಭದಲ್ಲಿ ಅಂಬಟ್ಟಿ ಮೊಟ್ಟೆ ಎಂಬಲ್ಲಿ ಎದುರಿನಿಂದ ಆಗಮಿಸಿದ ದ್ವಿಚಕ್ರ ವಾಹನ ವೇಗವಾಗಿ ಬಂದು ಕಾರಿಗೆ ಅಪ್ಪಳಿಸಿದೆ. ಕಾರಿನ ಮುಂದಿನ ಭಾಗ ಮತ್ತು ಬೈಕ್ ಜಖಂಗೊAಡಿದೆ. ಅಪಘಾತವಾದ ಪರಿಣಾಮ ಬೈಕ್ ಸವಾರ ಮಣಿಕಂಠ ಎಂಬವನಿಗೆ ಗಾಯಗಳಾಗಿವೆ. ಹಿಂಬದಿ ಸವಾರ ವಿಜಯ್‌ಗೆ ತಲೆಗೆ ಗಾಯಗಳಾಗಿವೆ. ಗಾಯಾಳುಗಳನ್ನು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಜಯ ಎಂಬವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಗೆ ರವಾನಿಸಲಾಗಿದೆ.

ಕಾರು ಚಾಲಕ ಬಿ.ಎಂ ಅಯ್ಯಪ್ಪ ಅವರು ನೀಡಿದ ದೂರಿನ ಮೇರೆಗೆ ಬೈಕ್ ಸವಾರ ಮಣಿಕಂಠನ ಮೇಲೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಜಾಗರೂಕತೆಯಿಂದ ವಾಹನ ಚಾಲನೆ ಮತ್ತು ನಿರ್ಲಕ್ಷö್ಯ ವಹಿಸಿರುವ ಪ್ರಕರಣ ದಾಖಲಾಗಿದೆ.