ಮಡಿಕೇರಿ, ಜ. ೨೧: ಗೋಣಿಕೊಪ್ಪ ಸರ್ವದೈವತ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಕೊಡವ ಭಾಷೆ ಕಲಿಕೆಗೆ ಅಧಿಕೃತ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕಿ ಮನೆಯಪಂಡ ಶೀಲಾ ಬೋಪಣ್ಣ ಅವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಸರ್ವದೈವತ ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಕಾಡ್ಯಾಮಾಡ ಲಲಿತಾ ಮೊಣ್ಣಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲಾ ವಿದ್ಯಾರ್ಥಿಗಳು ಆಸಕ್ತಿಯಿಂದ ಕೊಡವ ಭಾಷೆಯನ್ನು ಕಲಿಯುವುದರೊಂದಿಗೆ, ತಮ್ಮ ಪೋಷಕರುಗಳಿಗೆ, ನೆರೆ ಹೊರೆಯವರಿಗೆ ಇದನ್ನು ಕಲಿಸುವ ಪ್ರಯತ್ನ ಮಾಡಬೇಕು. ಈ ನೆಲದ ಭಾಷೆ, ಆಚಾರ, ವಿಚಾರ, ಸಂಸ್ಕೃತಿ ಯನ್ನು ಎಲ್ಲರೂ ಉಳಿಸಿ ಬೆಳಿಸಿರಿ ಎಂದು ಕರೆ ನೀಡಿದರು. ಕಾರ್ಯಕ್ರಮ ದಲ್ಲಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಪೊನ್ನಿಮಾಡ ಪ್ರದೀಪ್, ಕೊಡವ ಭಾಷ ಶಿಕ್ಷಕಿ ಕಾಕೆರ ಸ್ವಪ್ನ ಉಪಸ್ಥಿತ ರಿದ್ದರು. ಶಿಕ್ಷಕಿಯರಾದ ಶಿಲ್ಪಾ ಬೋಪಣ್ಣ ನಿರೂಪಿಸಿ, ಲೀನಾ ರಾಘವೇಂದ್ರ ಪ್ರಾರ್ಥಿಸಿ, ಜಮ್ಮಡ ಲೀನಾ ಗಿಲ್ ಸ್ವಾಗತಿಸಿ, ಕೊಟ್ಟಂಗಡ ವಿದ್ಯಾ ನವೀನ್ ವಂದಿಸಿದರು.