*ಸಿದ್ದಾಪುರ, ಜ. ೨೨: ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ.ಯಿAದ ನೆಲ್ಲಿಹುದಿಕೇರಿಗೆ ವರ್ಗಾವಣೆಗೊಂಡ ಅಭಿವೃದ್ಧಿ ಅಧಿಕಾರಿ ಅನಿಲ್ ಕುಮಾರ್ ಅವರನ್ನು ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು ಸನ್ಮಾನಿಸಿ ಬೀಳ್ಕೊಟ್ಟರು. ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷೆ ಅನಿತಾ, ಉಪಾಧ್ಯಕ್ಷೆ ಸುಧಾ, ಕಾರ್ಯದರ್ಶಿ ರವಿ, ನೂತನ ಪಿಡಿಒ ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.ಕೊಡ್ಲಿಪೇಟೆ: ಇಲ್ಲಿನ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯಾಗಿ ಕಳೆದ ೫ ವರ್ಷಗಳಿಂದ ಸೇವೆ ಸಲ್ಲಿಸಿ ಇದೀಗ ದೊಡ್ಡಮಳ್ತೆ ಗ್ರಾ.ಪಂ.ಗೆ ವರ್ಗಾವಣೆಯಾದ ಹೆಚ್.ಎಸ್. ಹರೀಶ್ ಅವರನ್ನು ಗ್ರಾ.ಪಂ. ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದ ಪರವಾಗಿ ಬೀಳ್ಕೊಡಲಾಯಿತು.

ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ವಿನೋದ, ಉಪಾಧ್ಯಕ್ಷೆ ಪಾವನ, ಸದಸ್ಯರಾದ ಹನೀಫ್, ದಿನೇಶ್‌ಕುಮಾರ್, ರೇಣುಕಾ ಮೇದಪ್ಪ, ಚಂದ್ರ, ನೂತನ ಪಿಡಿಓ ಗಿರೀಶ್, ಕಾರ್ಯದರ್ಶಿ ದೇವರಾಜ್, ಸಿಬ್ಬಂದಿಗಳಾದ ನಂದೀಶ್, ರಾಜೇಶ್, ಸಚಿನ್, ಧರ್ಮಪ್ಪ, ದಿಲೀಪ್ ಸೇರಿದಂತೆ ಇತರರು ಉಪಸ್ಥಿತರಿದ್ದರು.ಸೋಮವಾರಪೇಟೆ: ಸಮೀಪದ ಹಾನಗಲ್ಲು ಗ್ರಾ.ಪಂ.ಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಇದೀಗ ಬೇರೆಡೆಗೆ ವರ್ಗಾವಣೆಗೊಂಡ ಪಿಡಿಓ ಅಸ್ಮಾ ಅವರನ್ನು ಕಲ್ಕಂದೂರು ಜನಶಕ್ತಿ ವೇದಿಕೆ ವತಿಯಿಂದ ಬೀಳ್ಕೊಡಲಾಯಿತು. ಗ್ರಾ.ಪಂ. ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಸ್ಮಾ ಅವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು.

ಈ ಸಂದರ್ಭ ವೇದಿಕೆಯ ಕಾರ್ಯದರ್ಶಿ ಅಬ್ದುಲ್‌ಸಲಾಂ, ಗ್ರಾ.ಪಂ. ಅಧ್ಯಕ್ಷೆ ಲಕ್ಷಿö್ಮÃ ಪಾಂಡಿಯನ್, ಉಪಾಧ್ಯಕ್ಷ ಹೆಚ್.ವಿ. ಮಿಥುನ್ ಸೇರಿದಂತೆ ಸದಸ್ಯರು, ವೇದಿಕೆಯ ಪದಾಧಿಕಾರಿಗಳಾದ ಇಬ್ರಾಹಿಂ, ಅಬ್ದುಲ್ ರೆಹಮಾನ್, ಕುಮಾರ್, ಅದ್ರಾಮ, ಫಾರೂಕ್, ಗ್ರಂಥಾಲಯ ಸಿಬ್ಬಂದಿ ಹೇಮಾವತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.