ವೀರಾಜಪೇಟೆ, ಜ. ೨೨: ಭ್ರಷ್ಟಾಚಾರ ಎಂಬುದು ಸಾಮಾಜಿಕ ಪಿಡುಗು ಪ್ರಪಂಚದ್ಯಾAತ ಇಂದು ಸೋಂಕಿನAತೆ ಪಸರಿಸುತ್ತಿದೆ. ಭ್ರಷ್ಟಾಚಾರದಲ್ಲಿ ತೊಡಗುವಂತವರಿಗೆ ಕಠಿಣ ಕ್ರಮ ಜರುಗಿಸಿದಲ್ಲಿ ಭ್ರಷ್ಟಾಚಾರ ಹತ್ತಿಕ್ಕಲು ಸಾಧ್ಯವಾಗುತ್ತದೆ ಎಂದು ರಾಷ್ಟಿçÃಯ ಭ್ರಷ್ಟಾಚಾರ ನಿಗ್ರಹ ಮತ್ತು ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆಯ ತಾಲೂಕು ಅಧ್ಯಕ್ಷೆÀ ದೀಪಾ ಕಿಶನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಸರ್ಕಾರಿ ಪದವಿಪೂರ್ವ ಕಾಲೇಜು ವೀರಾಜಪೇಟೆ ರಾಷ್ಟಿçÃಯ ಸೇವಾ ಯೋಜನಾ ಘಟಕ ಹಾಗೂ ರೋಜರ್ ಯೂನಿಟ್ (ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್) ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಭ್ರಷ್ಟಾಚಾರ ನಿಗ್ರಹ ಮತ್ತು ವ್ಯಕ್ತಿತ್ವ ವಿಕಸನ ಬಗ್ಗೆ ಉಪನ್ಯಾಸದಲ್ಲಿ ಮಾತನಾಡಿ, ಸರ್ಕಾರಿ ಮತ್ತು ಇತರ ಸೇವೆಗಳಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳು ಹಣದಾಸೆಗೆ ಮತ್ತು ಆರ್ಥಿಕವಾಗಿ ಸ್ಥಿತಿವಂತರಾಗಲು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಳ್ಳುತ್ತಾರೆ. ಸರ್ಕಾರಿ ಸೇವೆಗೆ ಹಣ ನೀಡುವುದು ಮತ್ತು ಪಡೆಯುವುದು ತಪ್ಪು ಎಂದು ತಿಳಿದಿದ್ದರೂ ತಪ್ಪುದಾರಿ ಹಿಡಿಯುತ್ತಾರೆ. ಭ್ರಷ್ಟಾಚಾರವನ್ನು ಬುಡ ಸಮೇತವಾಗಿ ಕಿತ್ತೊಗೆಯಬೇಕು. ವಿದ್ಯಾರ್ಥಿಗಳು ಸೇರಿದಂತೆ ಸಮಾಜವು ಹೋರಾಟವನ್ನು ಮಾಡುವುದರಿಂದ ಭ್ರಷ್ಟಾಚಾರದಿಂದ ಮುಕ್ತಿ ಹೊಂದಬಹುದು. ಉತ್ತಮವಾದ ಹವ್ಯಾಸಗಳು, ಸ್ನೇಹಿತರು, ಮೌಲ್ಯಯುತ ಶಿಕ್ಷಣ, ಸಂಸ್ಕಾರದಿAದ ವ್ಯಕ್ತಿತ್ವ ವಿಕಸನವಾಗುತ್ತದೆ. ಗುಣ ಮತ್ತು ನಡವಳಿಕೆಯಿಂದಾಗಿ ಸಮಾಜದಲ್ಲಿ ವ್ಯಕ್ತಿಯಾಗಿ ಗುರುತಿಸಲ್ಪಡುತ್ತಾನೆ ಎಂದು ಹೇಳಿದರು. ಏಷ್ಯನ್ ಕರಾಟೆ ಫೆಡರೇಷನ್ ತೀರ್ಪುಗಾರ ಕರ್ಣಂಡ ಪಿ. ಸೋಮಣ್ಣ ಮಾರ್ಷಲ್ ಆರ್ಟ್ಸ್ನ ಮೂಲಕ ಆತ್ಮರಕ್ಷಣೆ ಕುರಿತು ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜ್ಯೋತಿ ಎನ್.ಕೆ. ಅವರು ರಾಷ್ಟಿçÃಯ ಸೇವಾ ಯೋಜನಾ ಘಟಕವು ಆಯೋಜಿಸಿರುವ ಎಲ್ಲಾ ಕಾರ್ಯಕ್ರಮಗಳು ಕಾರ್ಯಗತವಾಗಬೇಕಾದರೆ ವಿದ್ಯಾರ್ಥಿಗಳ ಭಾಗವಹಿಸುವಿಕೆ ಮುಖ್ಯ. ಉಪನ್ಯಾಸ ಕಾರ್ಯಕ್ರಮಗಳನ್ನು ಸದುಪಯೋಗ ಪಡಿಸಿಕೊಂಡಲ್ಲಿ ಮಾತ್ರ ಸಾರ್ಥಕತೆಯಾಗುತ್ತದೆ ಎಂದು ಹೇಳಿದರು. ಉಪನ್ಯಾಸಕ ಆರ್. ವಿನೋದ್ ಕುಮಾರ್, ಜೀವಶಾಸ್ತç ಉಪನ್ಯಾಸಕಿ ಹೆಚ್.ಅರ್. ದಮಯಂತಿ ಉಪಸ್ಥಿತರಿದ್ದರು.