ಪೊನ್ನಂಪೇಟೆ, ಜ. ೨೨: ಇಲ್ಲಿನ ಕಾವೇರಿ ಕಾಲೇಜಿನ ಅರ್ಥಶಾಸ್ತç ಸಂಘವನ್ನು ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಭಾರತವು ಸಂಪದ್ಭರಿತ ದೇಶವಾಗಿದ್ದರೂ ಸಹ ಇಲ್ಲಿರುವ ಸಂಪನ್ಮೂಲಗಳನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುವಲ್ಲಿ ಎಡವುತ್ತಿದ್ದೇವೆ. ಲಭ್ಯವಿರುವ ಸಂಪನ್ಮೂಲಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಭಾರತವನ್ನು ಆರ್ಥಿಕವಾಗಿ ಸದೃಢ ದೇಶವನ್ನಾಗಿ ಮಾಡಬಹುದು. ಪ್ರತಿಯೊಬ್ಬರೂ ಹಣವನ್ನು ಖರ್ಚು ಮಾಡುವ ಮುನ್ನ ಯೋಚಿಸಿ ಅವಶ್ಯಕತೆಗನುಗುಣವಾಗಿ ಖರ್ಚುಮಾಡಬೇಕು ಎಂದರು.
ಪ್ರಾAಶುಪಾಲ ಪ್ರೊ. ಎಂ.ಬಿ. ಕಾವೇರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕಿ ಎಂ.ಎಸ್. ಭಾರತಿ, ಆಂಗ್ಲಭಾಷಾ ಮುಖ್ಯಸ್ಥೆ ಡಾ. ಎ.ಎಸ್. ಪೂವಮ್ಮ, ಕನ್ನಡ ಉಪನ್ಯಾಸಕಿ ಡಾ. ಸಿ.ಎಂ. ರೇವತಿ, ಅರ್ಥಶಾಸ್ತç ವಿಭಾಗದ ಮುಖ್ಯಸ್ಥೆ ಎಂ.ಡಿ. ರೇಷ್ಮ, ಉಪನ್ಯಾಸಕರಾದ ಸಿ.ಎಂ. ಕಿರಣ್ ಹಾಗೂ ಎಂ.ಎ. ಕುಶಾಲಪ್ಪ ಹಾಗೂ ಅರ್ಥಶಾಸ್ತç ವಿಭಾಗದ ವಿದ್ಯಾರ್ಥಿಗಳು ಇದ್ದರು.