ಸುಂಟಿಕೊಪ್ಪ, ಜ. ೨೨: ಗ್ರಾಮ ಪಂಚಾಯಿತಿಗೆ ಅಧಿಕ ವರಮಾನ ತಂದು ಕೊಡುವ ಬೆಳೆಯುತ್ತಿರುವ ಪಟ್ಟಣವಾದ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೆ ಕಚೇರಿ ಭಾಗ್ಯ ಇನ್ನೂ ಲಭಿಸಿದಿದ್ದು, ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿ ಯಾವಾಗ ಪೂರ್ಣಗೊಳ್ಳುವುದು ಎಂದು ಗ್ರಾಮಸ್ಥರು ಜಾತಕಪಕ್ಷಿಯಂತೆ ಕಾಯುತ್ತಿದ್ದಾರೆ.

೨೦ ಸದಸ್ಯರಿರುವ ಸುಂಟಿಕೊಪ್ಪ ಈ ಹಿಂದೆ ಪುರಸಭೆಯಾಗಿ ಕಾರ್ಯನಿರ್ವಹಿಸುತ್ತಿತು ಆ ನಂತರ ಮಂಡಲ ಪಂಚಾಯಿತಿಯಾಗಿ ಈಗ ಮತ್ತೆ ಗ್ರೇಡ್ ೧ ಗ್ರಾಮ ಪಂಚಾಯಿತಿಗೆ ಇಳಿದಿದೆ. ಗ್ರೇಡ್ ೧ ಗ್ರಾಮ ಪಂಚಾಯಿತಿಗೆ ಕುರಿ, ಕೋಳಿ, ಹಂದಿ, ಮೀನು, ಒಣಮೀನು, ಮಾರುಕಟ್ಟೆ ಹಾಗೂ ಅಂಗಡಿ ಬಾಡಿಗೆಯಿಂದ ವಾರ್ಷಿಕ ಲಕ್ಷಾಂತರ ರೂ. ಆದಾಯ ಪಂಚಾಯಿತಿ ಖಾತೆಗೆ ಲಭ್ಯವಾಗುತ್ತಿದೆ.

೨೭೫ ರಾಷ್ಟಿçÃಯ ಹೆದ್ದಾರಿಯು ಸುಂಟಿಕೊಪ್ಪ ಪಟ್ಟಣದ ನಡುವೆಯೇ ಹಾದು ಹೋಗಿದೆ. ಹೆದ್ದಾರಿಯು ಅಭಿವೃದ್ಧಿಗೊಂಡಲ್ಲಿ ಪಂಚಾಯಿತಿ ಕಟ್ಟಡವೇ ಇಲ್ಲದಾಗುತ್ತದೆ. ಇಂತಹ ಪರಿಸ್ಥಿತಿಯನ್ನು ಮನಗಂಡ ಹಿಂದಿನ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ, ಶಾಸಕರು, ಜಿ.ಪಂ.ಹಾಗೂ ತಾ.ಪಂ.ಸದಸ್ಯರು ಗ್ರಾಮ ಪಂಚಾಯಿತಿ ಕಚೇರಿಯನ್ನು ಸುಸ್ಸಜ್ಜಿತವಾಗಿ ನಿರ್ಮಿಸಲು ಮುಂದಾಗಿ ಹಳೆಯ ಮಾರುಕಟ್ಟೆ ಜಾಗದಲ್ಲಿ ಪಂಚಾಯಿತಿ ಕಟ್ಟಡದಲ್ಲಿ ನಿರ್ಮಿಸಲು ನಿರ್ಣಯವನ್ನು ಕೈಗೊಂಡು ನೀಲಿನಕ್ಷೆಯನ್ನು ತಯಾರಿಸಿದ್ದರು.

ಪಂಚಾಯಿತಿ ವಾಣಿಜ್ಯ ಮಳಿಗೆ ಬಾಡಿಗೆಯಿಂದ ಲಕ್ಷಾಂತರ ರೂ. ಆದಾಯ ಸುಂಟಿಕೊಪ್ಪ ಪಂಚಾಯಿತಿಗೆ ಬರುತ್ತಿದೆ. ಆದರೆ ರಾಜಕೀಯ ಬಲಾಡ್ಯರು, ಘಟನಾಘಟಿಗಳು ಪಂಚಾಯಿತಿ ಆಡಳಿತ ಚುಕ್ಕಾಣಿ ಹಿಡಿದಿದ್ದರೂ ಇನ್ನೂ ಸ್ವಂತವಾದ ಪಂಚಾಯಿತಿ ಕಟ್ಟಡ ನಿರ್ಮಾಣವಾಗದೆ ಇರುವುದು ದುರದೃಷ್ಟಕರ.

೨ ವರ್ಷಗಳ ಹಿಂದೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೆ ಮಾರುಕಟ್ಟೆ ಬಳಿಯ ಜಾಗದಲ್ಲಿ ಪಂಚಾಯಿತಿ ಕಚೇರಿ ನಿರ್ಮಿಸಲು ಆಡಳಿತ ಮಂಡಳಿ ನಿರ್ಧರಿಸಿದ್ದು ಶಾಸಕ ಅಪ್ಪಚ್ಚು ರಂಜನ್ ಭೂಮಿ ಪೂಜೆ ನೆರವೇರಿಸಿದರು. ಗ್ರಾಮ ಪಂಚಾಯಿತಿ, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ, ಶಾಸಕರ ಮತ್ತು ಸಂಸದರ ನಿಧಿಯಿಂದ ಜಿಲ್ಲಾ ಪಂಚಾಯಿತಿ ಹಾಗೂ ೧೪ನೇ ಹಣಕಾಸು ಮತ್ತು ೧೫ನೇ ಹಣಕಾಸು ನಿಧಿಯಿಂದ ಕಾಮಗಾರಿ ನಡೆಯುತ್ತಿದೆ. ಹೃದಯ ಭಾಗದಲ್ಲಿ ರೂ. ೫೦ ಲಕ್ಷ ವೆಚ್ಚದಲ್ಲಿ ಸುಂದರವಾಗಿ ನಿರ್ಮಾಣವಾಗುತ್ತಿರುವ ಈ ಕಚೇರಿ ಪ್ರಾಂಗಣದ ಕಾಮಗಾರಿ ಅನುದಾನದ ಕೊರತೆಯಿಂದ ನಿಧಾನಗತಿಯಲ್ಲಿ ಸಾಗುತ್ತಿದೆ.

ಕಚೇರಿಯ ಕೆಳಭಾಗದ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು, ೨ನೇ ಮಹಡಿಯ ಕಾಮಗಾರಿ ಪ್ರಾರಂಭವಾಗಿದೆ. ೨ನೇ ಹಂತದ ಕಾಮಗಾರಿಗೆ ರೂ. ೧೦ ಲಕ್ಷ ಬಿಡುಗಡೆಯಾಗಿದ್ದನ್ನು ಕೆಳಭಾಗದ ಕಚೇರಿ ಕಾಮಗಾರಿಗೆ ಬಳಸುತ್ತಿರುವ ಬಗ್ಗೆ ಸ್ಥಳೀಯ ಗ್ರಾಮಸ್ಥರು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅನುದಾನದ ಕೊರತೆಯಿಂದಾಗಿ ಕಟ್ಟಡ ಕಾಮಗಾರಿ ವಿಳಂಬವಾಗಿದ್ದರಿAದ ಕಟ್ಟಡವು ಬಹುವರ್ಷಗಳ ಕಾಲ ಸಾರ್ವಜನಿಕರ ಉಪಯೋಗಕ್ಕೆ ಬರುವ ಕಾರಣ ಸಂಬAಧಿಸಿದ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯವರು ಪಂಚಾಯಿತಿ ಕಚೇರಿ ಕಾಮಗಾರಿಯ ಬಗ್ಗೆ ಹೆಚ್ಚಿನ ನಿಗಾವಹಿಸಿ ಉತ್ತಮ ಕಟ್ಟಡ ನಿರ್ಮಿಸಲಿ ಎಂದು ಗ್ರಾಮಸ್ಥರ ಆಶಯವಾಗಿದೆ.

ಮೇಘಸ್ಪೋಟ, ಭೂಕುಸಿತ, ಪ್ರವಾಹ ಹಾಗೂ ಮಹಾಮಾರಿ ಕೊರೊನಾದಿಂದಾಗಿ ಅನುದಾನದ ಕೊರತೆಯಿಂದ ಗುತ್ತಿಗೆದಾರರು ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದರು. ಇದೀಗ ಕಾಮಗಾರಿ ಪ್ರಗತಿಯಲ್ಲಿದ್ದು ಜನಪ್ರತಿನಿಧಿಗಳು, ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯವರು ಅನುದಾನ ಬಿಡುಗಡೆಗೊಳಿಸಿ ಶೀಘ್ರದಲ್ಲೇ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.