ಮಡಿಕೇರಿ, ಜ. ೨೨: ಲಂಚ ಪಡೆದ ಪ್ರಕರಣದಲ್ಲಿ ಅಮಾನತ್ತುಗೊಂಡ ಅಧಿಕಾರಿಯನ್ನು ಮರಳಿ ಇಲಾಖೆಗೆ ನೇಮಿಸಲು ಶಿಫಾರಸ್ಸು ಮಾಡಿರುವ ಬಿಜೆಪಿ ಶಾಸಕ ಕೆ.ಜಿ. ಬೋಪಯ್ಯ ಅವರ ನಿಲುವನ್ನು ವಿರೋಧಿಸುವುದಾಗಿ ಎಸ್ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಫಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಅಧಿಕಾರಿ ಎಲ್. ಶ್ರೀಕಂಠಯ್ಯ ಅವರ ಮೇಲಿನ ಅಮಾನತ್ತು ಆದೇಶವನ್ನು ಹಿಂಪಡೆದು ಅವರನ್ನು ಮರು ನೇಮಕಗೊಳಿಸುವಂತೆ ಶಾಸಕರು ಪತ್ರದಲ್ಲಿ ಕೋರಿರುವುದು ಅಸಂಬದ್ಧ ಎಂದಿದ್ದಾರೆ. ಬಿಜೆಪಿ ಭ್ರಷ್ಟ ಅಧಿಕಾರಿಗಳಿಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.