ಸೋಮವಾರಪೇಟೆ, ಜ. ೨೧: ವಿದ್ಯಾರ್ಥಿಗಳು ಇಚ್ಛಾಶಕ್ತಿಯೊಂದಿಗೆ ಸತತ ಪರಿಶ್ರಮ ಅಳವಡಿಸಿಕೊಂಡರೆ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಯುವಜನಸೇವೆ ಮತ್ತು ಕ್ರೀಡಾ ಇಲಾಖೆ ಯುವ ಪರಿವರ್ತಕರಾದ ಜಿ.ಎ. ಗುರುದೇವ್ ಹೇಳಿದರು.
ಜಿಲ್ಲಾ ಯುವಜನÀ ಸೇವೆ ಮತ್ತು ಕ್ರೀಡಾ ಇಲಾಖೆ, ಸಂತ ಜೋಸೆಫ್ ಪದವಿ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನೆ ಹಾಗೂ ಯೂತ್ ರೆಡ್ಕ್ರಾಸ್ ಘಟಕ ಆಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ನಡೆದ ಯುವ ಸ್ಪಂದನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ವಿದ್ಯಾರ್ಥಿಗಳು ಶ್ರೇಷ್ಠ ವ್ಯಕ್ತಿಗಳ ಹಾಗೂ ದಾರ್ಶನಿಕರ ಪುಸ್ತಕಗಳನ್ನು ಅಧ್ಯಯನ ಮಾಡಬೇಕು. ನಿಖರ ಗುರಿ ಮತ್ತು ಆತ್ಮವಿಶ್ವಾಸದೊಂದಿಗೆ ಬದುಕು ಕಟ್ಟಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಸಂತ ಜೋಸೆಫ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ಫಾ. ಎಂ. ರಾಯಪ್ಪ ಮಾತನಾಡಿ, ಯುವ ಸ್ಪಂದನ ಪರಿಕಲ್ಪನೆಯಲ್ಲಿ ಇಲಾಖೆಗಳಿಂದ ದೊರಕುವ ಸೌಲಭ್ಯಗಳನ್ನು ಪಡೆದುಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದರು.
ವೇದಿಕೆಯಲ್ಲಿ ಕಾಲೇಜು ಪ್ರಾಂಶುಪಾಲರಾದ ಪಿ.ಜೆ. ಜಸ್ಟಿನ್, ರಾಷ್ಟಿçÃಯ ಸೇವಾ ಯೋಜನೆಯ ಅಧಿಕಾರಿ ಬಿ.ಜಿ. ಆನಂದ್, ಯೂತ್ ರೆಡ್ ಕ್ರಾಸ್ ಘಟಕ ಅಧ್ಯಕ್ಷರಾದ ಬಿ.ಆರ್.ಹರೀಶ್ ಉಪಸ್ಥಿತರಿದ್ದರು.