ಕರಿಕೆ, ಜ. ೨೦: ಅರಣ್ಯ ಇಲಾಖೆ ಅಧಿಕಾರಿಯ ಮನೆಯಲ್ಲಿರಿಸಿದ್ದ ಹಣವನ್ನು ಮನೆಯಲ್ಲಿ ಕೆಲಸಕ್ಕಿದ್ದಾತ ಅಪಹರಿಸಿರುವುದಾಗಿ ಮಾಹಿತಿ ತಿಳಿದು ಬಂದಿದೆ.
ಅರಣ್ಯ ವನ್ಯಜೀವಿ ವಿಭಾಗದ ಹಿರಿಯ ಅಧಿಕಾರಿಯೋರ್ವರ ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿರುವ ವ್ಯಕ್ತಿ ಮನೆಯಲ್ಲಿದ್ದ ಹಣವನ್ನು ಅಪಹರಿಸಿದ್ದು, ಮಡಿಕೇರಿ ನಗರ ಪೊಲೀಸರು ಆತನನ್ನು ವಿಚಾರಣೆಗೊಳಪಡಿಸಿದ್ದಾರೆ. ಅಲ್ಲದೆ ಆತನ ಮನೆಯ ಬಳಿ ಶೋಧಿಸಿದಾಗ ಸೌದೆ ಜೋಡಿಸಿಟ್ಟಿದ್ದ ಜಾಗದಲ್ಲಿ ರೂ. ೭೦ ಸಾವಿರದಷ್ಟು ಹಣ ಸಿಕ್ಕಿದೆ. ಅಂದಾಜು ರೂ. ೨ ಲಕ್ಷಕ್ಕೂ ಹೆಚ್ಚಿಗೆ ಕಳುವಾಗಿರುವುದಾಗಿ ಹೇಳಲಾಗುತ್ತಿದ್ದು, ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಹಣ ಕಳುವಾಗಿದ್ದರೂ ಅಧಿಕಾರಿ ಮಾತ್ರ ಪೊಲೀಸ್ ದೂರು ನೀಡಲು ಹಿಂದೇಟು ಹಾಕುತ್ತಿರುವುದಾಗಿ ತಿಳಿದು ಬಂದಿದೆ. -ಸುಧೀರ್