ಸೋಮವಾರಪೇಟೆ, ಜ. ೨೦: ಸಾಮಾಜಿಕ ಅನಿಷ್ಟಗಳನ್ನು ಸಮಾಜದಿಂದ ತೊಲಗಿಸುವ ನಿಟ್ಟಿನಲ್ಲಿ ಇಲ್ಲಿನ ಇನ್ನರ್‌ವೀಲ್ ಕ್ಲಬ್ ವತಿಯಿಂದ ಪಟ್ಟಣದಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.
ಸಮಾಜದಲ್ಲಿ ಇಂದಿಗೂ ಬೇರು ಬಿಟ್ಟಿರುವ ಬಾಲಕಾರ್ಮಿಕ ಪದ್ಧತಿ, ಕೌಟುಂಬಿಕ ಹಿಂಸೆ, ಮಹಿಳೆಯರ ಮೇಲಿನ ದೌರ್ಜನ್ಯ, ಮಾದಕ ವಸ್ತುಗಳು, ಬಾಲ್ಯ ವಿವಾಹ ಸೇರಿದಂತೆ ಇನ್ನಿತರ ಸಾಮಾಜಿಕ ಪಿಡುಗುಗಳ ವಿರುದ್ಧ ಜಾಗೃತಿ ಮೂಡಿಸುವ ದೃಷ್ಟಿಯಿಂದ ಜಾಥಾ ಆಯೋಜಿಸಿದ್ದು, ಇಂತಹ ಅನಿಷ್ಟಗಳ ವಿರುದ್ಧ ಸಮಾಜ ಸದಾ ಜಾಗೃತವಾಗಿರಬೇಕು ಎಂದು ಕ್ಲಬ್ ಅಧ್ಯಕ್ಷೆ ಆಶಾ ಯೋಗೇಂದ್ರ ಹೇಳಿದರು. ಇಲ್ಲಿನ ಜೇಸೀ ವೇದಿಕೆಯಲ್ಲಿ ಜಾಗೃತಿ ಫೋಷಣೆ ಕೂಗಿ, ಫಲಕಗಳನ್ನು ಪ್ರದರ್ಶಿಸಿದ ಸದಸ್ಯರು, ಸರ್ಕಾರಿ ಬಸ್ ನಿಲ್ದಾಣದಲ್ಲಿ ಜಾಗೃತಿ ಫಲಕ ಅಳವಡಿಸಿದರು. ಈ ಸಂದರ್ಭ ಕ್ಲಬ್‌ನ ಕಾರ್ಯದರ್ಶಿ ಅಮೃತ ಕಿರಣ್, ಉಪಾಧ್ಯಕ್ಷೆ ಪ್ರೇಮಾ ಹೃಷಿಕೇಶ್, ಐಎಸ್‌ಓ ಲತಾ ನಾಗೇಶ್, ಐಪಿಪಿ ಕವಿತಾ ವಿರೂಪಾಕ್ಷ, ಖಜಾಂಚಿ ಕಾವೇರಿ ಸುರೇಶ್, ಎಡಿಟರ್ ತನ್ಮಯಿ ಪ್ರವೀಣ್ ಸೇರಿದಂತೆ ಪದಾಧಿಕಾರಿಗಳು ಭಾಗವಹಿಸಿದ್ದರು.