ಕಡಂಗ, ಜ. ೨೧: ತಾ. ೭.೪.೧೯೪೧ ರಲ್ಲಿ ಪ್ರಾರಂಭವಾದ ಅರಪಟ್ಟು ಮತ್ತು ಕರಡ ಸಹಕಾರ ವಿವಿಧೊದ್ದೇಶ ಧÀವಸ ಭಂಡಾರದ ನೂತನ ವಾಣಿಜ್ಯ ಸಂರ್ಕೀಣ ಮತ್ತು ಸಂಘದ ಸ್ವಂತ ಕಚೇರಿಯನ್ನು ಸಂಘದ ಅಧ್ಯಕ್ಷÀ ನಂಬಿಯಪAಡ ಎ. ಮಣಿ ಅಯ್ಯಮ್ಮ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸಹಕಾರ ಸಂಘವನ್ನು ನಡೆಸುವ ಆಡಳಿತ ಮಂಡಳಿಯು ರಾಜಕೀಯ ರಹಿತವಾಗಿ ಪ್ರಾಮಾಣಿಕತೆಯಿಂದ ಸಂಘವನ್ನು ಮುನ್ನೆಡೆಸಿದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ ಹಾಗೂ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂದರು. ಸಂಘವು ೮೧ನೇ ವರ್ಷಕ್ಕೆ ಕಾಲಿಟ್ಟು ಪ್ರಗತಿ ಪಥದಲ್ಲಿ ಸಾಗುತ್ತಿದ್ದು ಗ್ರಾಹಕರಿಗೆ ಮತ್ತು ಸದಸ್ಯರಿಗೆ ಉತ್ತಮ ಸೇವೆಯನ್ನು ನೀಡುತ್ತಿದ್ದು ವರ್ಷದಿಂದ ವರ್ಷಕ್ಕೆ ಲಾಭಗಳಿಸಿ “ಬಿ” ತರಗತಿಯಲ್ಲಿ ಇದ್ದು ಕೊಡಗು ಜಿಲ್ಲೆಗೆ ಮಾದರಿ ಧವಸ ಭಂಡಾರವಾಗಿ ಮಾರ್ಪಡುತ್ತಿದೆ ಎಂದರು.
ಸಮಾರAಭದಲ್ಲಿ ಸಂಘದ ಉಪಾಧ್ಯಕ್ಷ ಮುಕ್ಕಾಟಿರ ಸಿ. ಕಿರಣ್ ಬೋಪಯ್ಯ, ನಿರ್ದೇಶಕರಾದ ಕೈಪಂಗಡ ಕೆ. ವಿಠಲ್ ಉತ್ತಪ್ಪ ದೇಯಿರ ಶುಭಾಷ್ ಭೀಮಯ್ಯ, ಚೆಲುಮಂಡ ಕೆ. ಕಸ್ತೂರಿ, ಕೋಡಿರ ಎ. ಡಾಲಿ ಸುಬ್ರಮಣಿ, ನೆರಪಂಡ ಎಂ. ದೀನಾ ನಾಣಯ್ಯ, ಬೇಪುಡಿಯಂಡ ಕಟ್ಟಿ ಸುಬ್ಬಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಯು. ಮಹಮ್ಮದ್ ಹಾಜರಿದ್ದರು.