ಮಡಿಕೇರಿ, ಜ. ೨೦: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಸಾಮೂಹಿಕವಾಗಿ ಒಂದೆಡೆಗಳಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಈ ನಡುವೆ ಕ್ವಾರಂಟೈನ್‌ನಲ್ಲಿದ್ದ ಮೂವರು ಸೋಂಕಿತರು ಸೇರಿ ೧೦ ಮಂದಿ ಕಾರ್ಮಿಕರುಗಳು ರಾತ್ರೋರಾತ್ರಿ ಪರಾರಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ನಗರದ ರಾಜಾಸೀಟ್ ರಸ್ತೆಯ ಗಾಂಧಿ ಮೈದಾನ ಎದುರಿನ ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದ ಒಟ್ಟು ೧೨೨ ಕಾರ್ಮಿಕರ ಪೈಕಿ ೭೨ ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಇದರಲ್ಲಿ ಮೂವರು ಸೋಂಕಿತರು ಹಾಗೂ ಪ್ರಾಥಮಿಕ ಸಂಪರ್ಕದಲ್ಲಿದ್ದ ೭ ಕಾರ್ಮಿಕರು ಇದೀಗ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ನಾಲ್ಕು ದಿನಗಳ ಹಿಂದೆ ಇಬ್ಬರು ಕಾರ್ಮಿಕರಿಗೆ ಕೊರೊನಾ ರೋಗ ಲಕ್ಷಣ ಇದ್ದ ಹಿನ್ನೆಲೆ ಅವರು ಪರೀಕ್ಷೆಗೆ ಒಳಪಟ್ಟಾಗ ಸೋಂಕು ಖಚಿತವಾಗಿತ್ತು. ನಂತರ ಎಲ್ಲಾ ಕಾರ್ಮಿಕರನ್ನು ಪರೀಕ್ಷೆ ನಡೆಸಿದಾಗ ಒಟ್ಟು ೭೨ ಮಂದಿ ಸೋಂಕು ತಗುಲಿರುವುದು ತಿಳಿದುಬಂದಿತ್ತ್ತು. ಈ ಪೈಕಿ ಇಬ್ಬರು ಹೊರತುಪಡಿಸಿ ಉಳಿದೆಲ್ಲರು ಯಾವುದೇ ರೋಗ ಲಕ್ಷಣ ಇಲ್ಲದವರು (ಎ ಸಿಂಟಮೇಟಿಕ್) ಎಂದು ಆರೋಗ್ಯ ಇಲಾಖೆ ಗುರುತಿಸಿತ್ತು.

ಇವರುಗಳನ್ನು ಕೆಲಸ ಮಾಡುತ್ತಿದ್ದ ಕಟ್ಟಡದೊಳಗೆ ಕೆಲಸ ಸ್ಥಗಿತಗೊಳಿಸಿ ಪ್ರತಿಯೊಬ್ಬರು ಸೋಂಕಿನಿAದ ಹೊರಬರುವ ತನಕ ಎಲ್ಲಾ ಕಾರ್ಮಿಕರನ್ನು ಕ್ವಾರಂಟೈನ್‌ನಲ್ಲಿಡ ಲಾಗಿತ್ತು. ಸ್ಥಳೀಯ ೧೩ ಕಾರ್ಮಿಕರು ಗಳನ್ನು ಅವರವರ ಮನೆಗಳಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ. ಕಟ್ಟಡದಲ್ಲಿದ್ದ ಕ್ವಾರಂಟೈನ್ ಕೇಂದ್ರದಲ್ಲಿದ್ದ ೧೦ ಕಾರ್ಮಿಕರು ಕಳೆದ ರಾತ್ರಿ ಕಣ್ತಪ್ಪಿಸಿ ಪರಾರಿಯಾಗಿರುವುದು ಕಟ್ಟಡ ಮೇಲ್ವಿಚಾರಕರಿಗೆ ಬೆಳಿಗ್ಗೆ ಕೇಂದ್ರ ದೊಳಗೆ ತೆರಳಿ ವಿಚಾರಣೆ ನಡೆಸುವ ಸಂದರ್ಭ ತಿಳಿದು ಬಂದಿದೆ. ತಕ್ಷಣ ಈ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ತಾಲೂಕು ಆರೋಗ್ಯ ಅಧಿಕಾರಿ ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಣ್ತಪ್ಪಿಸಿ ಪರಾರಿ

ಮೂವರು ಸೋಂಕಿತರು ಹಾಗೂ ಅವರ ಪ್ರಾಥಮಿಕ

(ಮೊದಲ ಪುಟದಿಂದ) ಸಂಪರ್ಕದಲ್ಲಿದ್ದ ೭ ಮಂದಿ ಜಾರ್ಖಂಡ್ ಮೂಲದ ಕಾರ್ಮಿಕರು ಎಂದು ತಿಳಿದು ಬಂದಿದೆ. ಫಾಟು ಊರನ್, ಶಾಭು ಊರನ್ ಹಾಗೂ ಸುಶೀಲ್ ಪರಾರಿಯಾದ ಸೋಂಕಿತರು.

ನಿನ್ನೆ ಮಧ್ಯರಾತ್ರಿ ೧.೩೦ ರ ನಂತರ ಕಟ್ಟಡದಲ್ಲಿ ಸ್ಥಾಪಿಸಿರುವ ಕ್ವಾರಂಟೈನ್ ಕೇಂದ್ರದಿAದ ಕಣ್ತಪ್ಪಿಸಿ ಪರಾರಿಯಾಗಿದ್ದಾರೆ. ಮುಖ್ಯದ್ವಾರದಲ್ಲಿ ಭದ್ರತಾ ಸಿಬ್ಬಂದಿ ಇರುವುದರಿಂದ ಯಾರಿಗೂ ತಿಳಿಯದಂತೆ ಬಟ್ಟೆ, ಬರೆ ತೆಗೆದುಕೊಂಡು ಕಟ್ಟಡದ ಸುತ್ತಲೂ ಶೀಟ್‌ನಲ್ಲಿ ನಿರ್ಮಿಸಿರುವ ಹಿಂಬದಿಯ ಬಾಗಿಲು ತೆರೆದು ಓಡಿ ಹೋಗಿದ್ದಾರೆ ಎಂದು ಮೇಲ್ವಿಚಾರಕರು ಶಂಕೆ ವ್ಯಕ್ತಪಡಿಸಿದ್ದಾರೆ.

ಓರ್ವ ಪುತ್ತೂರಿನಲ್ಲಿ?

ಪರಾರಿಯಾಗಿರುವ ಮೂವರ ಪೈಕಿ ಸುಶೀಲ್ ಎಂಬಾತ ಮಾತ್ರ ಮೊಬೈಲ್ ಸಂಪರ್ಕಕ್ಕೆ ದೊರೆತ್ತಿದ್ದು, ಆತ ಪುತ್ತೂರಿನಲ್ಲಿ ಇರುವುದಾಗಿ ಮೇಲ್ವಿಚಾರಕರು ಕರೆ ಮಾಡಿದ ಸಂದರ್ಭದಲ್ಲಿ ಹೇಳಿಕೊಂಡಿದ್ದಾನೆ. ಉಳಿದವರ ಮೊಬೈಲ್ ‘ಸ್ವಿಚ್ಛ್ ಆಫ್’ ಆಗಿದ್ದು ಅವರುಗಳೆಲ್ಲ ಎಲ್ಲಿ ತೆರಳಿದ್ದಾರೆ ಎಂಬುದು ತಿಳಿದು ಬಂದಿಲ್ಲ.

ಆದರೆ, ಓರ್ವನ ಮೊಬೈಲ್ ಸಂಪರ್ಕಕ್ಕೆ ಸಿಕ್ಕಿ ನಂತರ ಸ್ವಿಚ್ಛ್ ಆಫ್ ಆಗಿದೆ. ಆತ ಸರಿಯಾಗಿ ಮಾತನಾಡದೆ ಕೆಲಸೆಕೆಂಡ್‌ಗಳಲ್ಲಿ ಕರೆ ಕಡಿತಗೊಳಿಸಿದ್ದಾನೆ. ಕರೆ ಮಾಡಿದ ಸಂದರ್ಭ ರೈಲು ಸಾಗುವ ಶಬ್ಧ ಕೇಳುತಿತ್ತು ಎಂದು ಮೇಲ್ವಿಚಾರಕರು ತಿಳಿಸಿದ್ದು, ಕಾರ್ಮಿಕರು ರಾಜ್ಯ ಬಿಟ್ಟು ತೆರಳಿದ್ದಾರ.? ಎಂಬ ಅನುಮಾನ ಮೂಡಿದೆ.

ಆರೋಗ್ಯ ಅಧಿಕಾರಿಗಳ ಭೇಟಿ

ಸ್ಥಳಕ್ಕೆ ತಾಲೂಕು ಆರೋಗ್ಯಧಿಕಾರಿ ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೋಂಕಿತರು ಸೇರಿ ಎಲ್ಲ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದರು.

ಪರಾರಿಯಾಗಿರುವ ಸಂಬAಧ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು. ಎಪಿಡಮಿಕ್ ಡಿಸಿಸ್ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಲು ಕ್ರಮವಹಿಸಲಾಗುದು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಲ್ಲದೇ ಪರಾರಿಯಾದವರ ಪತ್ತೆಗೆ ಮಡಿಕೇರಿ ನಗರ ಠಾಣೆಯಲ್ಲಿ ದೂರು ನೀಡಲಾಗಿದೆ.