ಮಡಿಕೇರಿ, ಜ. ೨೦: ಕೊಡವ ಭಾಷೆ ಸಂಸ್ಕೃತಿಗೆ ತನ್ನದೇ ಆದ ವೈಶಿಷ್ಟö್ಯತೆ ಇದೆ. ಆದರೆ, ಅಂತಹ ಭಾಷೆ ಸಂಸ್ಕೃತಿ ಇಂದು ಅಳಿವಿನಂಚಿನಲ್ಲಿದೆ. ಈ ಹಿನ್ನೆಲೆಯಲ್ಲಿ ಕೊಡವ ಜನಾಂಗ ಎಚ್ಚೆತ್ತುಕೊಳ್ಳದಿದ್ದರೆ ಕೊಡವ ಭಾಷೆ ಸಂಸ್ಕೃತಿಗೆ ಉಳಿಗಾಲವಿಲ್ಲ ಎಂದು ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು.

ಮಯೂರ ವ್ಯಾಲಿವ್ಯೂನಲ್ಲಿ ಕೊಡವ ಭಾಷೆ ಹಾಗೂ ತುಳು ಭಾಷೆಯನ್ನು ಸಂವಿಧಾನದ ೮ನೇ ಶೆಡ್ಯೂಲ್‌ಗೆ ಸೇರಿಸಬೇಕೆಂದು ಆಗ್ರಹಿಸಿ ಸಂಸತ್‌ನಲ್ಲಿ ಖಾಸಗಿ ಮಸೂದೆ ಮಂಡಿಸಿ ಬಿ.ಕೆ. ಹರಿಪ್ರಸಾದ್ ಅವರು ಮಾಡಿದ ಭಾಷಣವನ್ನು ಒಳಗೊಂಡು ಹೊರತರಲಾದ ‘ತುಳು - ಕೊಡವ ಅಳಿವು - ಉಳಿವು’ ಪುಸ್ತಕದ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಶ್ವದಲ್ಲಿಯೆ ಕೊಡವ ಸಂಸ್ಕಾರ ಅದ್ಭುತ ಸಂಸ್ಕಾರವಾಗಿದೆ. ಭಾರತ ಪ್ರಜಾಪ್ರಭುತ್ವ ರಾಷ್ಟçವಾಗಿದ್ದು, ಇಲ್ಲಿ ಅಲ್ಪಸಂಖ್ಯಾತರಲ್ಲಿ ಒಬ್ಬರಾದ ಕೊಡವರ ಭಾವನೆಗಳಿಗೂ ಬೆಲೆ ಸಿಗು ವಂತಾಗಬೇಕು. ಭಾಷಾ ಅಭಿವೃದ್ಧಿಯ ದೃಷ್ಟಿಯಿಂದ ಸರ್ಕಾರ ವಿವಿಧ ಭಾಷೆಗಳಿಗೆ ಅನುದಾನ ಬಿಡುಗಡೆ ಮಾಡಿರುವ ಸಂಬAಧ ಮಾತನಾಡಿದ ಹರಿಪ್ರಸಾದ್, ಹೆಚ್ಚಿನ ಜನರು ಬಳಸುವ ಭಾಷೆಗೆ ಕಡಿಮೆ ಹಣವನ್ನು; ಕಡಿಮೆ ಜನರು ಬಳಸುವ ಭಾಷೆಗೆ ಹೆಚ್ಚಿನ ಅನುದಾನವನ್ನು ನೀಡಲಾಗಿದೆ. ಇಂತಹ ವ್ಯವಸ್ಥೆಯಲ್ಲಿ ೧ ಲಕ್ಷದ ೩೦ ಸಾವಿರ ಜನಸಂಖ್ಯೆ ಇರುವ ಕೊಡವರು ಸಂವಿಧಾನಾತ್ಮಕ ವಾಗಿ ತಮಗೆ ಸಿಗಬೇಕಾದ ಹಕ್ಕುಗಳ ಬಗ್ಗೆ ಗಟ್ಟಿ ಧ್ವನಿ ಮೊಳಗಿಸದಿದ್ದಲ್ಲಿ ಕೊಡವ ಹಾಗೂ ಕೊಡವ ಸಂಸ್ಕೃತಿಯ ಅಭಿವೃದ್ಧಿ ಸಾಧ್ಯವಿಲ್ಲ ಎಂದರು. ಬಂದೂಕು, ಒಡಿಕತ್ತಿಯನ್ನು ದುರ್ಬಳಕೆ ಮಾಡದೆ ಅವುಗಳನ್ನು ದೇವರೆಂದು ಪೂಜಿಸುವ ಕೊಡವ ಜನಾಂಗಕ್ಕೆ ಸಂವಿಧಾ ನಾತ್ಮಕವಾಗಿ ಸಿಗಬೇಕಾದ ಸವಲತ್ತು ಗಳು ತಪ್ಪದೆ ಸಿಗುವಂತಾಗಬೇಕೆAದು ಅವರು ಒತ್ತಾಯಿಸಿದರು. ಈ ದಿಸೆಯಲ್ಲಿ ನಿರಂತರ ಹೋರಾಟವೂ

ಅಗತ್ಯ ಎಂದು ಹರಿಪ್ರಸಾದ್ ಅಭಿಪ್ರಾಯಿಸಿದರು.

ಕೊಡವ ಜನಾಂಗ ಎಚ್ಚೆತ್ತುಕೊಳ್ಳದಿದ್ದರೆ ಕೊಡವ ಭಾಷೆ ಸಂಸ್ಕೃತಿಗೆ ಉಳಿಗಾಲವಿಲ್ಲ

(ಮೊದಲ ಪುಟದಿಂದ) ಪುಸ್ತಕವನ್ನು ಬಿಡುಗಡೆ ಮಾಡಿದ ಹಿರಿಯ ವಕೀಲ ಬಾಲಸುಬ್ರಮಣ್ಯ ಕಂಜರ್ಪಣೆ ಅವರು ಮಾತನಾಡಿ, ಕೊಡವ ಹಾಗೂ ತುಳು ಭಾಷೆಗಳಿಗೆ ಸೂಕ್ತ ಸ್ಥಾನಮಾನ ನೀಡುವ ಸಂಬAಧ ಈ ಎರಡು ಭಾಷೆಗಳಿಗೆ ಲಿಪಿ ಇಲ್ಲವೆಂಬ ನೆಪವನ್ನು ಮುಂದಿಡಲಾಗುತ್ತಿದೆ. ಆದರೆ ಭಾಷೆಗಳಿಗೆ ಲಿಪಿ ಮುಖ್ಯವಲ್ಲ. ಲಿಪಿ ಇಲ್ಲದಿದ್ದರೂ ಅದು ಭಾಷೆಯೇ. ಯಾವುದೇ ಒಂದು ಪ್ರದೇಶದ ಸಂಸ್ಕೃತಿಯನ್ನು ತಿಳಿದುಕೊಳ್ಳಲು ಭಾಷೆ ಬಹುಮುಖ್ಯವಾದದ್ದು ಎಂದು ಹೇಳಿದರು. ಭಾಷೆಯನ್ನು ಹೆಚ್ಚು ಹೆಚ್ಚಾಗಿ ಬಳಸುವಂತಾಗಬೇಕು. ಕೊಡವ ಭಾಷೆಗೆ ಸೂಕ್ತ ಸ್ಥಾನಮಾನ ಅಗತ್ಯವಾಗಿ ಸಿಗಲೇಬೇಕು. ಅಕಾಡೆಮಿಯಿಂದ ಅತ್ಯುತ್ತಮ ವಿಶ್ವ ಸಾಹಿತ್ಯಗಳನ್ನು ಕೊಡವ ಭಾಷೆಗೆ ತರ್ಜುಮೆ ಮಾಡುವಂತಹ ಕೆಲಸಗಳಾಗಬೇಕು. ಆ ಮೂಲಕ ವಿಶ್ವದೆಲ್ಲೆಡೆ ಕೊಡವ ಭಾಷೆ ಪಸರಿಸುವಂತಾಗಬೇಕು. ಸಂಸ್ಕೃತಿ ಎಂಬುದು ನಮ್ಮ ವೇಷವಾಗಬಾರದು; ಅದು ನಮ್ಮ ಉಸಿರಾಗಬೇಕು ಎಂದು ಬಾಲಸುಬ್ರಮಣ್ಯ ಕಂಜರ್ಪಣೆ ಅಭಿಪ್ರಾಯಿಸಿದರು.

ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಮಾತನಾಡಿ, ಪಾವಿತ್ರö್ಯತೆ ಹಾಗೂ ಪ್ರಾಮುಖ್ಯತೆ ಹೊಂದಿರುವ ಕೊಡವ ಭಾಷೆಯನ್ನು ೮ನೇ ಶೆಡ್ಯೂಲ್‌ಗೆ ಸೇರಿಸಬೇಕು. ಆಡಳಿತಾಂಗ ಮತ್ತು ಪಠ್ಯಕ್ರಮದಲ್ಲಿ ಒಂದನೇ ತರಗತಿಯಿಂದ ಪಿಹೆಚ್‌ಡಿವರೆಗೆ ಕೊಡವ ಭಾಷೆಯನ್ನು ಅನುಷ್ಠಾನಗೊಳಿಸಬೇಕು. ಸೇನಾ ತರಬೇತಿ ಲ್ಯಾಬ್, ಪೊಲೀಸ್ ತರಬೇತಿ ಲ್ಯಾಬ್‌ನಲ್ಲಿ ಕೊಡವ ಭಾಷೆಯನ್ನು ಪರಿಚಯಿಸಬೇಕು. ಆಕಾಶವಾಣಿ, ದೂರದರ್ಶನ, ಬಿಬಿಸಿ ಇತ್ಯಾದಿಗಳಲ್ಲಿ ಕೊಡವ ಸೇವೆಯನ್ನು ಆರಂಭ ಮಾಡಬೇಕು. ರಾಜ್ಯದ ೩ನೇ ಭಾಷೆಯನ್ನಾಗಿ ಕೊಡವ ಭಾಷೆಯನ್ನು ಪರಿಗಣಿಸಬೇಕು. ಕೊಡವ ಜನಾಂಗಕ್ಕೆ ಜಾಗತಿಕ ಮಾನ್ಯತೆ, ಬುಡಕಟ್ಟು ಸ್ಥಾನಮಾನವನ್ನು ಕಲ್ಪಿಸಬೇಕು. ಇವೆಲ್ಲವನ್ನು ಪಡೆಯುವ ಅರ್ಹತೆ ಕೊಡವ ಭಾಷೆ ಹಾಗೂ ಜನಾಂಗಕ್ಕಿದ್ದು, ನಮ್ಮ ಹಕ್ಕುಗಳನ್ನು ನಮಗೆ ನೀಡುವವರೆಗೂ ಸಿಎನ್‌ಸಿ ಹೋರಾಟ ಮಾಡಲಿದೆ ಎಂದರಲ್ಲದೆ, ಕೊಡವ ಸಾಹಿತ್ಯ ಅಕಾಡೆಮಿಯು ಕೊಡವ ಜನಾಂಗದ ಇತಿಹಾಸ ವೈಶಿಷ್ಟö್ಯತೆಗಳನ್ನು ದಾಖಲೀಕರಣ ಮಾಡುವ ಕೆಲಸವನ್ನು ಮಾಡಬೇಕೆಂದು ಮನವಿ ಮಾಡಿದರು.

ಸುಪ್ರೀಂಕೋರ್ಟ್ ವಕೀಲ ಬ್ರಿಜೇಶ್ ಕಾಳಪ್ಪ ಮಾತನಾಡಿ, ಭಾಷೆ ನಾಶವಾದರೆ ಸಂಸ್ಕೃತಿ ನಾಶವಾದಂತೆ. ಆದ್ದರಿಂದ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದರು.

ತುಳು- ಕೊಡವ ಅಳಿವು - ಉಳಿವು ಪುಸ್ತಕದ ಸಂಪಾದಕ ಆರ್. ಜಯಕುಮಾರ್ ಮಾತನಾಡಿ, ದೇಶದಲ್ಲಿ ಏಕಭಾಷೆ ಏಕಸೂತ್ರ ಎಂಬ ಹೆಸರಿನಲ್ಲಿ ಹಲವು ಭಾಷೆ ಸಂಸ್ಕೃತಿಗಳನ್ನು ನಿರ್ಲಕ್ಷಿಸುವ ಕೆಲಸವಾಗುತ್ತಿದ್ದು, ಕೊಡಗು ಜಿಲ್ಲೆಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರದೊಂದಿಗೆ ಕೊಡವ ಭಾಷೆಯನ್ನು ರಾಜ್ಯದ ಮೂರನೇ ಭಾಷೆಯಾಗಿಸಬೇಕೆಂಬ ಹೋರಾಟವನ್ನು ಮತ್ತಷ್ಟು ಗಟ್ಟಿಗೊಳಿಸುವಂತಾಗಬೇಕು ಎಂದು ಹೇಳಿದರು.

ಇದೇ ಸಂದರ್ಭ ಸಿಎನ್‌ಸಿ ಹೋರಾಟದ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ನಂದಿನೆರವAಡ ನಿಶಾ ಪ್ರಾರ್ಥಿಸಿ, ಚಂಬAಡ ಜನತ್ ನಿರೂಪಿಸಿದರು. ಕಲಿಯಂಡ ಪ್ರಕಾಶ್ ಸ್ವಾಗತಿಸಿ, ಅಜ್ಜಿಕುಟ್ಟಿರ ಲೋಕೇಶ್ ವಂದಿಸಿದರು. ರಾಷ್ಟçಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.