ಮಡಿಕೇರಿ, ಜ. ೧೯: ರಾಜ್ಯದಲ್ಲಿ ಕೊಡವ ಭಾಷೆಯನ್ನು ೩ನೇ ಭಾಷೆಯನ್ನಾಗಿಸುವ ನಿಟ್ಟಿನಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಅಕಾಡೆಮಿ ಅಧ್ಯಕ್ಷೆ ಡಾ. ಪಾರ್ವತಿ ಅಪ್ಪಯ್ಯ ಹೇಳಿದರು.

ಕೊಡಗು ಪ್ರೆಸ್‌ಕ್ಲಬ್ ವತಿಯಿಂದ ಪತ್ರಿಕಾ ಭವನದಲ್ಲಿ ಆಯೋಜಿಸ ಲಾಗಿದ್ದ ಮಾತುಕತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪರಿಣಿತ ನಾಟಿ ಔಷಧಿ ಮಾಡುವವರನ್ನು ಸೇರಿಸಿ ವೀರಾಜಪೇಟೆ ಅರಮೇರಿಯಲ್ಲಿ ನಾಡ್‌ಮದ್ದ್ಕಾರಡ ಸಮಾವೇಶ ಹಮ್ಮಿಕೊಳ್ಳಲು ಚಿಂತಿಸಲಾಗಿದೆ. ದೇವರ ಕಾಡುಗಳ ಕುರಿತು ವಿಚಾರ ಸಂಕಿರಣ ನಡೆಸುವುದರ ಜೊತೆಗೆ ಕೊಡವ ವ್ಯಾಕರಣ ಪುಸ್ತಕವನ್ನು ಹೊರತರಲು ಕೂಡ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಪಾರ್ವತಿ ಅಪ್ಪಯ್ಯ ತಿಳಿಸಿದರು.

ಕೊಡವ ಸಾಹಿತ್ಯ ಅಕಾಡೆಮಿಗೆ ಈ ಹಿಂದೆ ಹೆಚ್ಚಿನ ಅನುದಾನ ಬರುತ್ತಿತ್ತು. ಆದರೆ ಪ್ರಸ್ತುತ ಅನುದಾನ ಕಡಿಮೆಯಾಗಿದ್ದು, ಅನುದಾನ ಕೊರತೆಯೊಂದಿಗೆ ಕೊರೊನಾ ಹಾವಳಿ ನಡುವೆಯೂ ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಅಕಾಡೆಮಿಗೆ ಪ್ರತ್ಯೇಕ ಬೈಲಾರಚನೆ, ಐನ್‌ಮನೆ, ಪಟ್ಟೋಲೆ ಪಳಮೆ ವಿಷಯಗಳ ಕುರಿತು ವಿಚಾರ ಸಂಕಿರಣಗಳನ್ನು ಯಶಸ್ವಿಯಾಗಿ ಮಾಡಲಾಗಿದೆ. ಕನ್ನಡ ಮತ್ತು ಕೊಡವ ಸಾಹಿತ್ಯದ ಬಗ್ಗೆಯೂ ಕಾರ್ಯಕ್ರಮ ನಡೆಸಲಾಗಿದೆ. ಕೊಡವ ಭಾಷೆಯನ್ನು ೮ನೇ ಶೆಡ್ಯೂಲ್‌ಗೆ ಸೇರಿಸುವ ಆಗ್ರಹದೊಂದಿಗೆ ಮೈಸೂರಿನಲ್ಲಿ ವಿಚಾರ ಸಂಕಿರಣ ಮಾಡಲಾಗಿದೆ. ಕೊಡವ ಭಾಷೆ ಕಲಿಕೆ, ತರ್ಜುಮೆ ಮಾಡುವ ಸಂಬAಧ ಕಾರ್ಯಾ ಗಾರಗಳನ್ನು ನಡೆಸಲಾಗಿದೆ.

ಕೊಡವ ಸಾಹಿತ್ಯ, ಸಂಶೋಧನೆ ಸಂಬAಧ ಸಾಕಷ್ಟು ಪುಸ್ತಕಗಳನ್ನು ಪ್ರಕಟಿಸುವ ಕಾರ್ಯವೂ ನಡೆದಿದೆ. ಕೊಡವ ಭಾಷೆಗೆ ಪ್ರತ್ಯೇಕ ಲಿಪಿ ರಚಿಸುವ ಸಂಬAಧ ಪ್ರಯತ್ನಗಳು ಸಾಗಿವೆ. ಶಾಲೆಗಳಲ್ಲಿ ಕೊಡವ ಭಾಷೆ ಕಲಿಕೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಈಗಾಗಲೇ ಹಲವು ಶಾಲೆಗಳಲ್ಲಿ ಕೊಡವ ಭಾಷೆ ಕಲಿಕೆಯನ್ನು ಆರಂಭಿಸಲಾಗಿದೆ. ಕೊಡವ ಭಾಷೆಯ ಅಧ್ಯಯನಕ್ಕೆ ಪದವಿ ಹಾಗೂ ಸ್ನಾತಕೋತ್ತರ ವ್ಯಾಸಂಗದಲ್ಲಿ ಅವಕಾಶ ಕಲ್ಪಿಸುವ ಅಕಾಡೆಮಿಯ ಕೋರಿಕೆಯು ಈಗಾಗಲೇ ಈಡೇರಿದ್ದು, ಈ ಸಂಬAಧ ಹೆಚ್ಚಿನ ಪ್ರಚಾರ

ಕೈಗೊಂಡು ಮುಂದಿನ ದಿನಗಳಲ್ಲಿ ಇದನ್ನು ಮತ್ತಷ್ಟು ಯಶಸು ್ಸಗೊಳಿಸಲಾಗುತ್ತದೆ ಎಂದು ನುಡಿದ ಪಾರ್ವತಿ ಅಪ್ಪಯ್ಯ ಕೊಡವ ಭಾಷೆ ಅಧ್ಯಯನಕ್ಕೆ ಹಿರಿಯರು ಕಿರಿಯರೆನ್ನದೆ ಪ್ರತಿಯೊಬ್ಬರು ಮುಂದಾಗಬೇಕೆAದು ಕೋರಿದರು.

(ಮೊದಲ ಪುಟದಿಂದ)

ವಾಲಗ ಕಲಿಕೆ ಯತ್ನ

ಅಕಾಡೆಮಿ ಸದಸ್ಯ ಪ್ರಭುಕುಮಾರ್ ಮಾತನಾಡಿ, ಅಕಾಡೆಮಿಯಿಂದ ಆನ್‌ಲೈನ್ ಮೂಲಕ ಕೊಡವಾಮೆ, ಕೊಡವ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಸಾಂಪ್ರದಾಯಿಕ ಕಲೆಯಾದ ವಾಲಗವನ್ನು ಯುವ ಜನಾಂಗಕ್ಕೆ ಕಲಿಸುವ ಪ್ರಯತ್ನವೂ ನಡೆದಿದೆ ಎಂದರು.

ಮತ್ತೋರ್ವ ಸದಸ್ಯೆ ಗೌರಮ್ಮ ಮಾದಮ್ಮಯ್ಯ ಮಾತನಾಡಿ, ಕೊಡವ ಸಾಹಿತ್ಯದ ಅಭಿವೃದ್ಧಿಗೆ ಅಕಾಡೆಮಿ ಒತ್ತು ನೀಡಿದ್ದು, ಬರಹಗಾರರನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡಲಾಗಿದೆ. ೩ ತಿಂಗಳಿಗೊಮ್ಮೆ ಅಕಾಡೆಮಿ ಕಾರ್ಯಚಟುವಟಿಕೆಗಳನ್ನು ಒಳಗೊಂಡ ಪೊಂಗುರಿ ಪುಸ್ತಕವನ್ನು ಕೂಡ ಪ್ರಕಟಿಸಲಾಗುತ್ತಿದೆ ಎಂದರು.

ಸದಸ್ಯ ಕವನ್ ಕಾರ್ಯಪ್ಪ ಮಾತನಾಡಿ, ಅಕಾಡೆಮಿ ವತಿಯಿಂದ ಹಿರಿಯ ಸಾಹಿತಿಗಳಾದ ಐ.ಮಾ. ಮುತ್ತಣ್ಣ, ಬಿ.ಡಿ. ಗಣಪತಿ ಇವರುಗಳ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಇವರುಗಳ ಸ್ಮರಣಾರ್ಥವೂ ಕಾರ್ಯಕ್ರಮಗಳನ್ನು ಮಾಡಲಾಗಿದೆ ಎಂದು ಹೇಳಿದರು. ಸದಸ್ಯೆ ಮಾಚಿಮಾಡ ಜಾನಕಿ ಮಾತನಾಡಿ, ಕೊರೊನಾ ಸಂಕಷ್ಟದ ನಡುವೆಯೂ ಅಕಾಡೆಮಿಯಿಂದ ಸಾಧ್ಯವಾದಷ್ಟು ಕಾರ್ಯಕ್ರಮಗಳನ್ನು ಮಾಡಲಾಗಿದೆ ಎಂದರು.

ಸದಸ್ಯ ಕುಡಿಯರ ಮುತ್ತಪ್ಪ ಮಾತನಾಡಿ, ಅಕಾಡೆಮಿ ವತಿಯಿಂದ ಕಾಶ್ಮೀರ ಹಾಗೂ ಕನ್ಯಾಕುಮಾರಿಯಲ್ಲಿ ಕೊಡವ ಮೇಳ ನಡೆಸುವ ಚಿಂತನೆಯಿದ್ದು, ಅನುದಾನದ ಕೊರತೆಯಿಂದ ಅದು ಸಾಧ್ಯವಾಗಿಲ್ಲ. ಸರ್ಕಾರ ಅಕಾಡೆಮಿಗೆ ಹೆಚ್ಚಿನ ಅನುದಾನ ನೀಡುವಂತಾಗಬೇಕೆAದರು.

ಪ್ರೆಸ್‌ಕ್ಲಬ್ ಅಧ್ಯಕ್ಷ ರಮೇಶ್ ಕುಟ್ಟಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ಸುನಿಲ್ ಪೊನ್ನೆಟ್ಟಿ ನಿರೂಪಿಸಿ, ಜಂಟಿ ಕಾರ್ಯದರ್ಶಿ ಜಿ.ಆರ್. ಪ್ರಜ್ಞಾ ಸ್ವಾಗತಿಸಿದರು. ಖಜಾಂಚಿ ಬೊಳ್ಳಜಿರ ಅಯ್ಯಪ್ಪ ವಂದಿಸಿದರು.