ಮಡಿಕೇರಿ, ಜ. ೧೯: ಮರಂದೋಡ ಗ್ರಾಮದ ಕೆರೆತಟ್ಟುವಿನ ಮಂಜಬೆಟ್ಟದಲ್ಲಿ ತಾ. ೧೮ರ ಸಂಜೆ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆಯೊಂದಿಗೆ ಗ್ರಾಮಸ್ಥರು ಕೂಡ ಒಗ್ಗೂಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಸಂಜೆ ಸುಮಾರು ೬ ಗಂಟೆಗೆ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಇಲಾಖೆಯವರು ಗ್ರಾಮಸ್ಥರ ಸಹಾಯದಿಂದ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ.
ಪಂಚಾಯಿತಿ ಸದಸ್ಯ ಹರೀಶ್ ಮೊಣ್ಣಪ್ಪ, ಲೀಲಾವತಿ ಕೆ.ಆರ್., ವೀರಾಜಪೇಟೆ ವಲಯ ಅರಣ್ಯಾಧಿಕಾರಿಗಳಾದ ಕಳ್ಳೀರ ದೇವಯ್ಯ, ಉಪವಲಯ ಅರಣ್ಯಾಧಿಕಾರಿ ಎಂ.ಎಸ್. ಮೋನಿಶ್ ಹಾಗೂ ಸಿಬ್ಬಂದಿ ಆನಂದ್ ಕೆ.ಆರ್., ಅರಣ್ಯ ರಕ್ಷಕರಾದ ಟಿ.ಎನ್. ಪ್ರಶಾಂತ್ ಕುಮಾರ್, ನಾಗರಾಜರಡರಟ್ಟಿ, ಮಾಲತೇಶ್ ಬಡಿಗೇರ, ಆರ್.ಆರ್.ಟಿ. ತಂಡದ ಅನಿಲ್, ಸುರೇಶ್, ಲತೇಶ್, ಅಶ್ವತ್, ಲಾರೆನ್ಸ್, ಮಹೇಶ್, ಮಧು, ವಾಹನ ಚಾಲಕ ಅಶೋಕ್, ನಾಣಯ್ಯ ಪಾಲ್ಗೊಂಡಿದ್ದರು.