ಮಡಿಕೇರಿ, ಜ.18: ನೇತಾಜಿ ಸುಭಾಷ್ ರಾಷ್ಟ್ರೀಯ ಇನ್ಸ್ಟಿಟ್ಯೂಟ್ ಆಫ್ ಸ್ಪೋಟ್ರ್ಸ್ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರ ವತಿಯಿಂದ ಕ್ರೀಡಾಪಟುಗಳಿಗೆ ಈಗಿನ ವೈಜ್ಞಾನಿಕ ಕ್ರೀಡಾ ತರಬೇತಿಯನ್ನು ನೀಡುವ ಸಂಬಂಧ ವಿವಿಧ ಕ್ರೀಡಾ ತರಬೇತುದಾರರಿಗೆ ಸರ್ಟಿಫಿಕೇಟ್ ಕೋರ್ಸ್, ರಿಪ್ರೆಸರ್ ಕೋರ್ಸ್, ಕೌಶಲ್ಯ ತರಬೇತಿ, ಮೆಸರ್ಸ್ ಕೋರ್ಸ್, ಸ್ಟ್ರೆಂತ್ ಕಂಡೀಷನಿಂಗ್ ಮತ್ತಿತರ ಪುನಶ್ಚೇತನಾ ಶಿಬಿರ ನಡೆಸಲಾಗುತ್ತದೆ.

ಆಸಕ್ತಿವುಳ್ಳ ವಿವಿಧ ಕ್ರೀಡಾ ತರಬೇತುದಾರರು ಈ ಶಿಬಿರದಲ್ಲಿ ಭಾಗವಹಿಸುವವರು ಇಲಾಖೆಯ ಅನುಮತಿಯನ್ನು ಪಡೆದು ಭಾಗವಹಿಸಲು ಸೂಚಿಸಿದೆ. ಈ ಶಿಬಿರದಲ್ಲಿ ಭಾಗವಹಿಸುವ ತರಬೇತುದಾರರು ಹೆಚ್ಚಿನ ಮಾಹಿತಿಗೆ ರೋಹಿಣಿ ಶರ್ಮ, ಕೋರ್ಸ್ ಕೋ-ಆರ್ಡಿನೇಟರ್, ಮೊ.ಸಂ.9478391154, ಇ-ಮೇಲ್:-ಜiಡಿeಛಿಣoಡಿಟಿಛಿsಛಿ@gmಚಿiಟ.ಛಿom ನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಸ್.ಗುರುಸ್ವಾಮಿ ತಿಳಿಸಿದ್ದಾರೆ.